ಮುಂಬಯಿ : ಡಾ. ಹೋಮಿ ಬಾಬಾ ವಿಶ್ವವಿದ್ಯಾಲಯ ಮುಂಬಯಿ ಇದರ ೨೦೨೩ ನೇ ಸಾಲಿನ ಪರೀಕ್ಷೆಯಲ್ಲಿ ಎಂ. ಎಸ್. ಸಿ. (ಕೆಮೆಷ್ಟ್ರೀ) ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಸಯಿ ಪಶ್ಚಿಮದ ಪ್ರೇಕ್ಷಾ ಬಂಗೇರಾ ಸೆ. ೨೩ ರಂದು ಮುಂಬಯಿ ವಿಶ್ವವಿದ್ಯಾಲಯದ ಸರ್ ಕವಾಸ್ಜಿ ಜಹಾಂಗೀರ್ ಸಭಾಗೃಹದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಸಿ. ಪಿ. ರಾಧಾಕೃಷ್ಣನ್ ಅವರು ಚಿನ್ನದ ಪದಕ ನೀಡಿ ಗೌರವಿಸಿದರು. ಈಕೆ ವಸಯಿ ಪಶ್ಚಿಮದ ನಿವಾಸಿ ಚಂದ್ರಶೇಖರ ಬಂಗೇರ ಮತ್ತು ಬಬಿತ ಚಂದ್ರಶೇಖರ ಬಂಗೇರ ದಂಪತಿಯ ಸುಪುತ್ರಿ.
.
.