July 23, 2026
Mumbai News Kannada
ಸುದ್ದಿ

ಡಹಾಣೂವಿನ ಉದ್ಯಮಿ ಸಮಾಜಸೇವಕ ಅಶೋಕ್ ಎಸ್‌. ಶೆಟ್ಟಿ ಉಳೆಪಾಡಿ ಇವರಿಗೆ ವಿಶೇಷ ಸನ್ಮಾನ







ಸುದ್ದಿ ವಿವರ : ಪಿ.ಆರ್.ರವಿಶಂಕರ್

ಡಹಾಣೂ : 09.08.2025

ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ಮತ್ತು ಮಹಾವಿಕಾಸ್ ಆಘಾಡಿ ಇವರು ಇದೇ ತಾ.09 ಆಗಸ್ಟ್ 2025 ರಂದು  ಡಹಾಣೂ  ಪಶ್ಚಿಮದಲ್ಲಿನ ಸಾಗರ ನಾಕಾದಲ್ಲಿನ ತಾರ್ಪಾ ಚೌಕದಲ್ಲಿ ” ಜಾಗತಿಕ   ಆದಿವಾಸಿ ದಿನಾಚರಣೆಯ ” ನಿಮಿತ್ತ  ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ   ಸ್ಥಳೀಯ ಆದಿವಾಸಿ ಮುಂದಾಳು  ಹಾಗೂ ಮಹಾರಾಷ್ಟ್ರ ಸರಕಾರದ ಶಾಸಕರಾದ ಕಾಮ್ರೇಡ್ ವಿನೋದ್ ಭಿವಾ ನಿಕೋಲೆ ಇವರ ಅಧ್ಯಕ್ಷತೆಯಲ್ಲಿ ಡಹಾಣೂವಿನ ಉದ್ಯಮಿ ಹಾಗೂ ಸಮಾಜ ಸೇವಕರಾದ  ಶ್ರೀ. ಅಶೋಕ್ ಎಸ್. ಶೆಟ್ಟಿ ಉಳೆಪಾಡಿ ಇವರನ್ನು ಸಾರ್ವಜನಿಕ ವೇದಿಕೆಯಲ್ಲಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಮಾತನಾಡುತ್ತಾ ” ಅಶೋಕ್ ಶೆಟ್ಟಿಯವರು  ತಮ್ಮ ( ಹೋಟೆಲ್  ಸರೋವರ್ ಫ್ಯಾಮಿಲಿ ರೆಸ್ಟೋರೆಂಟ್)  ಉದ್ಯಮದ ವ್ಯಸ್ತ ಜೀವನದ ನಡುವೆಯೂ ತೆರೆಯ ಮರೆಯಲ್ಲಿ ಜರಗಿಸುವ ಹಲವಾರು ಸಮಾಜಪರ ಹಾಗೂ ಮಾನವೀಯತೆಯ ಕಾರ್ಯಗಳು ಅಭಿನಂದನೀಯ ಹಾಗೂ ಪ್ರೇರಣಾದಾಯಿ ಎಂದು ಶ್ಲಾಘಿಸಿದರು.

ಸುದ್ದಿ ವಿವರ : ಪಿ.ಆರ್.ರವಿಶಂಕರ್

                 cell : 84839 80035



Related posts

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮುಂಬಯಿ ನಗರಕ್ಕೆ – ಭಕ್ತಿ ಪೂರ್ವಕ ಸ್ವಾಗತ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ತೃತೀಯ ವಾರ್ಷಿಕ ಪ್ರತಿಷ್ಠ ಮಹೋತ್ಸವ.

Mumbai News Desk

ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶ್ರೀ ದೇವೀ ಜಪಪಾರಾಯಣ ಸಂಪನ್ನ

Mumbai News Desk

ಬೆಂಗಳೂರಲ್ಲಿ ಮುಂಬಯಿಯ ನಿಶಿತ ಸೂರ್ಯಕಾಂತ್ ಸುವರ್ಣರ ಇಮೇಜ್ ಕನ್ಸಲ್ಟೆಂಟ್ ನ ಅದ್ದೂರಿಯ ಕರ್ನಾಟಕ ಸ್ಟೈಲ್ ಐಕಾನ್ 2023 ಕಾರ್ಯಕ್ರಮ

Mumbai News Desk

ದುಬೈ ಯಲ್ಲಿ ಅದ್ದೂರಿಯಾಗಿ ಜರಗಿದ “ಅಂತಾರಾಷ್ಟ್ರೀಯ ಜನಪದ ಉತ್ಸವ – 2025”

Mumbai News Desk