ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ( ಬಿಕೆಸಿ-ಜಿ ಬ್ಲಾಕ್) ಕಾರ್ಪೊರೇಟ್ ಕಟ್ಟಡದಲ್ಲಿ ಹೊರಾಂಗಣದ ಏರ್ ಕಂಡಿಷನರ್ ಸ್ಫೋಟಗೊಂಡ ದುರ್ಘಟನೆಯಲ್ಲಿ ಗಾಯಗೊಂಡು ನಿಧನರಾದ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ ಮುಂಡ್ಕೂರು ಇದರು ಸಕ್ರಿಯ ಕಾರ್ಯಕರ್ತ ತಾರಾನಾಥ ವಾಮಯ ಬಂಜನ್ ಅವರ ಶ್ರದ್ಧಾಂಜಲಿ ಸಭೆ ಗೋರೆಗಾವ್ ಪೂರ್ವದ ಪ್ರಜ್ಞ ಪೋಜ್ಞ ಶಾಲೆಯ ಸಭಾಗ್ರದಲ್ಲಿ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ ಮೂಲ್ಯ ಮುಂಡ್ಕೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಸಂಚಾಲಕ ಕೃಷ್ಣ ಮೂಲ್ಯ ನಾಲಾಸೋಪಾರ ಅವರು ತಾರಾನಾಥ ಬಂಜನ್ ಅವರ ಸಾಮಾಜಿಕ ಸೇವಾ ಕಾರ್ಯಗಳನ್ನು ಮತ್ತು ಪರಿವಾರದ ಬಗ್ಗೆ ತಿಳಿಸಿದರು.
ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್ ಮೂಲ್ಯ ಮುಂಡ್ಕೂರು ನುಡಿ ನಮನವನ್ನು ಸಲ್ಲಿಸುತ್ತಾ ನಮ್ಮ ವರಮಹಾಲಕ್ಷ್ಮಿ ಪೂಜಾ ಸಮಿತಿಯಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು ಅಲ್ಲದೆ ಸಮಾಜದ ಬಂಧುಗಳ ಸೇವಾ ಕಾರ್ಯಗಳನ್ನು ಯಾವಾಗಲೂ ಆಸಕ್ತಿಯಿಂದ ಮಾಡುತಿದ್ದರು ಎಂದು ನುಡಿದರು.
ಉಪಾಧ್ಯಕ್ಷ ದಿನೇಶ್ ಮೂಲ್ಯ, ಅಂಧೇರಿ, ಕಾರ್ಯದರ್ಶಿ
ದಿನೇಶ್ ಬಂಗೇರ ಖಾರ್‌ದಾಂಡ , ಕೋಶಾಧಿಕಾರಿ ರೋಹಿದಾಸ್ ಕೆ ಬಂಜನ್ ನಾಲಾಸೋಪಾರ, ಜೊತೆ ಕಾರ್ಯದರ್ಶಿ ಲೋಕೇಶ್ ಮೂಲ್ಯ, ಗೊರೆಗಾಂವ್, ಅಂಧೇರಿ ಸಲಹಾ ಸಮಿತಿತ ಸದಸ್ಯರುಗಳಾದ , ಸರೋಜಾ ಎಚ್ ಮೂಲ್ಯ ಅಂದೇರಿ, ಅರ್ಚನಾ ಎಸ್ ಮೂಲ್ಯ ವಸಯಿ, ನಳಿನಿ ಎನ್. ಬಂಜನ್ ವಿರಾರ್,ಜ್ಯೋತಿ ಸಾಲ್ಯಾನ್, ಸುರೇಖಾ ಬಂಗೇರ ನಾಲಾಸೋಪರ, ಕವಿತಾ ಸಾಲ್ಯಾನ್ ಮೀರಾ ರೋಡ್, ಶಶಿಕಾಂತ್ ಮೂಲ್ಯ ವಿರಾರ್, ಸದಾಶಿವ ಮೂಲ್ಯ ವಿರಾರ್, ವಿವೇಕ್ ಬಂಜನ್ ಉಪಸ್ಥಿರಿದ್ದು ಬಂಜನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರ.
ಮೂಲತಃ ಸೂರಿಂಜೆಯವರಾದ ತಾರಾನಾಥ ಬಂಜನ್ ಅವರು ಭಾಯಂದರ್ ಪೂರ್ವದ ಸಾಯಿ ಬಾಬಾ ನಗರ ಬಾಲಕೃಷ್ಣ ಅಪ್ಟ್ಮೆಂಟ್ ನಿವಾಸಿಯಾಗಿದ್ದು,
ಪತ್ನಿ , ಒಂದು ಹೆಣ್ಣು, ಒಂದು ಗಂಡು ಮಕ್ಕಳು, ಹಾಗೂ ಐವರು ಸೋದರರು, ಇಬ್ಬರು ಸೋದರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿರುವರು.