September 6, 2026
Mumbai News Kannada
ಸುದ್ದಿ

ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಬೆಂಕಿ – 20 ಪ್ರಯಾಣಿಕರು ಸಜೀವ ದಹನ





 ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್​ಗೆ ಬೆಂಕಿ ಹೊತ್ತಿಕೊಂಡು 20ಕ್ಕೂ ಹೆಚ್ಚು ಜನರು ಸಜೀವ ದಹನಗೊಂಡಿದ್ದಾರೆ. 15ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಂಧ್ರ ಪ್ರದೇಶದ ಕರ್ನೂಲ್​ ಚಿನ್ನಟೆಕೋರು ಗ್ರಾಮದ ಬಳಿ ಖಾಸಗಿ ಕಾವೇರಿ ಸ್ವೀಪರ್ ಬಸ್​ ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತಿತ್ತು. ಈ ವೇಳೆ ಏಕಾಏಕಿ ಬಸ್​ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಧಗ ಧಗ ಹೊತ್ತಿ ಉರಿದಿದೆ. ಇದರಿಂದ ಪ್ರಯಾಣಿಕರು ತಕ್ಷಣಕ್ಕೆ ಹೊರ ಬರಲು ಆಗಿಲ್ಲ. ಬಸ್​​ನಲ್ಲಿದ್ದ 42 ಪ್ರಯಾಣಿಕರ ಪೈಕಿ 20ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಇದರಲ್ಲಿ 15ಕ್ಕೂ ಅಧಿಕ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್​ಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿದ್ದರಿಂದ ಪ್ರಯಾಣಿಕರು ಹೊರಬರಲು ಹರಸಾಹಸ‌ ಪಟ್ಟಿದ್ದಾರೆ. ಕೆಲವರು ಎಮರ್ಜೆನ್ಸಿ ಡೋರ್​ನಿಂದ ಹೊರ ಬಂದರೆ, ಇನ್ನು ಕೆಲವರು ಕಿಟಕಿಯ ಗ್ಲಾಸ್ ಒಡೆದು ಹೊರ ಬಂದಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನ ಕರ್ನೂಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಎಸ್​ಪಿ ವಿಕ್ರಾಂತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

.

.

.

.



Related posts

ನಾಸಿಕ್ ಟಿಸಿಎಸ್ ಬಿಪಿಒ ಘಟಕದಲ್ಲಿ ಲೈಂಗಿಕ ಕಿರುಕುಳ ಮತ್ತು ಮತಾಂತರ ಆರೋಪ: ತಲೆಮರೆಸಿಕೊಂಡಿದ್ದ ನಿದಾ ಖಾನ್ ಅಂತಿಮವಾಗಿ ಪೊಲೀಸರ ವಶಕ್ಕೆ

Mumbai News Desk

ರಾಷ್ಟ್ರೀಯ ಮಹಾಮಾರ್ಗಗಳ ಪಕ್ಕದಲ್ಲಿರುವ ಅನಧಿಕೃತ ಧಾಬಾ, ಹೋಟೆಲ್‌ ತೆರವಿಗೆ ಮಹಾರಾಷ್ಟ್ರ ಸರ್ಕಾರ ಆದೇಶ

Mumbai News Desk

ಶತಾಯುಷಿ,ಗಂಜಿಮಠ ಶಿವಣ್ಣ ಆಚಾರ್ಯ ನಿಧನ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಕಾವ್ಯ ಡಿ ಕಾಂಚನ್ ಗೆ ಶೇ 92.67 ಅಂಕ.

Mumbai News Desk

ಶಿಕ್ಷಣತಜ್ಞ ಶ್ರೀಧರ್ ಸುವರ್ಣರಿಗೆ ‘ಭಾರತ ರತ್ನ ಐಕಾನಿಕ್ ಪ್ರಶಸ್ತಿ 2025’

Mumbai News Desk

ಕೊಂಕಣ ರೈಲು ಮಾರ್ಗ ದ್ವಿಗುಣಗೊಳಿಸುವಂತೆ ಕೇಂದ್ರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

Mumbai News Desk