
ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಸಂಚಾಲಕರು : ಯಕ್ಷಕಲಾ ಸಂಸ್ಥೆ) ದಿನಾಂಕ 03.10.2024 ಗುರುವಾರರಿಂದ ದಿನಾಂಕ 12.10.2024 ರ ಶನಿವಾರವರೆಗೆ ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ಜರಗಲಿರುವುದು. ಜಗದಂಬೆಯ ಕ್ಷೇತ್ರದಲ್ಲಿ ಚಂಡಿಕಾ ಹೋಮ ಹಾಗೂ ದುರ್ಗಾನಮಸ್ಕಾರ ಪೂಜೆ ಮತ್ತು ರಂಗಪೂಜೆಯ ಸಹಿತ ಶರನ್ನವರಾತ್ರಿ ಮಹೋತ್ಸವವು ಶ್ರೀಕ್ಷೇತ್ರ ತಂತ್ರಿಯವರ ಶುಭ ಆಶೀರ್ವಾದದೊಂದಿಗೆ ಹಾಗೂ ಪ್ರಧಾನ ಅರ್ಚಕರಾದ ರವಿ ತಂತ್ರಿರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿರುವುದು.
ಕಾರ್ಯಕ್ರಮಗಳು:
ದಿನಾಂಕ 03.10.2024 ಗುರುವಾರ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತೋರನ ಮುಹೂರ್ತ ಮಹಾಮಂಗಳಾರತಿ ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ. ಸಂಜೆ ದುರ್ಗಾ ನಮಸ್ಕಾರ ಪೂಜೆ ಮಹಾಮಂಗಳಾರತಿ, ಅನ್ನಸಂತರ್ಪಣೆ
ದಿನಾಂಕ 04.10.2024 ಶುಕ್ರವಾರ ಮುಂಜಾನೆ 9.00ರಿಂದ : ತುಲಾಭಾರ
ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ
ಸಂಜೆ ದುರ್ಗಾ ನಮಸ್ಕಾರ ಪೂಜೆ, ಮಹಾಮಂಗಳಾರತಿ,
ಅನ್ನಸಂತರ್ಪಣೆ.
ದಿನಾಂಕ 05.10.2024 ಶನಿವಾರ ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ
ಸಂಜೆ ದುರ್ಗಾನಮಸ್ಕಾರ ಪೂಜೆ, ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ.
ಸಾಂಸ್ಕೃತಿಕ ಕಾರ್ಯಕ್ರಮ :
ಸಂಯೋಜನೆ ಶ್ರೀ ಜಗದಂಬಾ ಮಂದಿರ ಯುವ ವಿಭಾಗ.

ದಿನಾಂಕ 06.10.2024 ರವಿವಾರ ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ.
ಸಂಜೆ ರಂಗಪೂಜೆ, ಮಹಾಮಂಗಳಾರತಿ, ಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ.
ದಿನಾಂಕ 07.10.2024 ಸೋಮವಾರ ಮುಂಜಾನೆ
ಲಲಿತ ನಾಮ ಸಹಸ್ರನೆ,
ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ.
ಸಂಜೆ ದುರ್ಗಾ ನಮಸ್ಕಾರ ಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ.
08.10.2024 ಮಂಗಳವಾರ ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ.
ದಿನಾಂಕ 09.10.2024 ಬುಧವಾರ ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ
ರಾತ್ರಿ ಮಹಾಮಂಗಳಾರತಿ
ನಾಗರಾಜ ಶ್ಯಾನಭಾಗರವರಿಂದ ಭಕ್ತಿರಸಮಂಜರಿ, ಅನ್ನಸಂತರ್ಪಣೆ
ಸಾಂಸ್ಕೃತಿಕ ಕಾರ್ಯಕ್ರಮ
ಜಗದಂಬಾ ಮಂದಿರ ಮಹಿಳಾ ವಿಭಾಗ ತುಳು ನಾಟಕ ನಿರ್ದೇಶಕ : ಈಶ್ವರ ಕೋಟ್ಯಾನ್,
ದಿನಾಂಕ 10.10.2024 ಗುರುವಾರ ಮುಂಜಾನೆ ಚಂಡಿಕಾ ಹೋಮ, ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ.
ಸಂಜೆ ದುರ್ಗಾ ನಮಸ್ಕಾರ ಪೂಜೆ ಮಹಾಮಂಗಳಾರತಿ ಅನ್ನಸಂತರ್ಪಣೆ.
ದಿನಾಂಕ 11.10.2024 ಶುಕ್ರವಾರ ಮುಂಜಾನೆ ದುರ್ಗಾ ಹೋಮ (ಸಂಪೂರ್ಣ ಆಹುತಿ)
ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ.
ರಾತ್ರಿ ಮಹಾಮಂಗಳಾರತಿ, ಅನ್ನಸಂತರ್ಪಣೆ.
ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಹಾಗೂ ಊರಿನ ಅತಿಥಿ ಕಲಾವಿದರ ಕೂಡುವಿಕೆಯಿಂದ ಪ್ರಾಯೋಜಕರು : ಶ್ರೀ ಮಹೇಶ್ ಶೆಟ್ಟಿ ಹಾಗೂ ಪರಿವಾರ ಬಾಬಾ ಗ್ರೂಪ್, ಮುಂಬಯಿ
ಧಾರ್ಮಿಕ ಸಭಾ ಕಾರ್ಯಕ್ರಮ
ದಿನಾಂಕ 12.10.2024 ಶನಿವಾರ ಮಧ್ಯಾಹ್ನ ಮಹಾಮಂಗಳಾರತಿ. ಪಲ್ಲ ಪೂಜಾ ಮತ್ತು ಅನ್ನಸಂತರ್ಪಣೆ.
ಭಕ್ತಾಭಿಮಾನಿಗಳು ಶರನ್ನವರಾತ್ರಿಯ ಎಲ್ಲಾ ಶುಭದಿನಗಳಲ್ಲಿ ಎಲ್ಲಾ ತರಹದ ಸೇವೆಯಲ್ಲಿ ಪಾಲ್ಗೊಂಡು ತನು ಮನ ಧನಗಳಿಂದ ಸಹಕರಿಸಿ ಶ್ರೀ ಜಗದಂಬೆಯ ಶರನ್ನವರಾತ್ರಿಯ ಮಹೋತ್ಸವವನ್ನು ಚೆಂದಗಾಣಿಸಿ ಕೊಡಬೇಕಾಗಿ ಮಂದಿರದ ಪರವಾಗಿ ಗೌರವ ಅಧ್ಯಕ್ಷರು, ಅಧ್ಯಕ್ಷರು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ,ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.
2023ರ ನವರಾತ್ರಿ ಉತ್ಸವಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಹಾಗೂ ಹೊರಕಾಣಿಕೆ ಕೊಟ್ಟು ಸಹಕರಿಸಿದ ಸಂಘ ಸಂಸ್ಥೆಗಳಿಗೆ ಕೃತಜ್ಞತೆಗಳು. ಪ್ರತಿನಿತ್ಯ ಆಮಂತ್ರಿತ ಭಜನಾ ಮಂಡಳಿಗಳಿಂದ ಬೆಳಿಗ್ಗೆ 10.00 ಗಂಟೆಗೆ ಹಾಗೂ ಸಾಯಂಕಾಲ 4.00 ಗಂಟೆಗೆ ಭಜನಾಮೃತ ಸೇವೆ
ಶನಿಪೂಜೆ ಮಾಡಲಿಚ್ಛಿಸುವರು ಭಕ್ತರು ಶ್ರೀಜಗದಂಬಾ ಮಂದಿರ ಕಾರ್ಯಕಾರಿ ಸಮಿತಿಗೆ ತಿಳಿಸಬೇಕಾಗಿ ವಿನಂತಿ,
ನವರಾತ್ರಿಯ ಸಮಯ ನಡೆಯುವ ವಿಶೇಷ ಸೇವೆ: ನವರಾತ್ರಿಯ ಸಂದರ್ಭದಲ್ಲಿ ಶ್ರೀ ದೇವಿಯ ಸನ್ನಿಧಾನದಲ್ಲಿ ಪ್ರತಿ ದಿನ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಮಲ್ಲಿಗೆ ಸೇವೆ, ಹೂವಿನ ಪೂಜೆ ದೀಪಾರಾಧನೆ, ಕುಂಕುಮಾರ್ಚನೆ, ಕರ್ಪೂರ ಆರತಿ, ಅನ್ನಸಂತರ್ಪಣೆ ಗಾಗಿ ಹಸಿರು ಹೊರೆ ಕಾಣಿಕೆಗಳನ್ನು ಹಾಗೂ ಎಲ್ಲಾ ತರಹದ ಹರಕೆ ಹಾಗೂ ಧನ ಸಹಾಯವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಲಾಗುವುದು. ದೇವಿಯ ಪಾರಾಯಣ ಮತ್ತು ದುರ್ಗಾಹೋಮ ಮಾಡಿಸುವರು 1 ವಾರ ಮುಂಚೆ ತಿಳಿಸಬೇಕೆಂದು ವಿನಂತಿ.