
ಡೊಂಬಿವಲಿ ಮಾನವ ಸೇವೆಯೇ ಮಾಧವನ ಸೇವೆ ಎಂದು ಅರಿತ ಸುಸಂಸ್ಕೃತ ಡೊಂಬಿವಲಿಯ ಮನಗಳು ಒಂದಾಗಿ ಹತ್ತಾರು ಕೈಗಳು ಮುಂದಾಗಿ ತುಳು- ಕನ್ನಡಿಗರಿಂದ ಅಂದು ಹುಟ್ಟು ಹಾಕಲ್ಪಟ್ಟ ಸಂಸ್ಥಯೇ ಡೊಂಬಿವಲಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗೆ ಈಗ ವಜ್ರ ಮಹೋತ್ಸವದ ಸಂಭ್ರಮ.ಮಹಾರಾಷ್ಟ್ರ ರಾಜ್ಯದ ಅತೀ ದೊಡ್ಡ ಜಿಲ್ಲೆಯಾದ ಥಾಣೆ ಜಿಲ್ಲೆಯ ಉಪನಗರವಾದ ಡೊಂಬಿವಲಿಯಲ್ಲಿ ಅತೀ ಹೆಚ್ಚು ತುಳು – ಕನ್ನಡಿಗರು ವಾಸವಾಗಿದ್ದು ಡೊಂಬಿವಲಿ ನಗರವನ್ನು ಇಂದು ಮಹಾರಾಷ್ಟ್ರದ ತುಳುನಾಡು ಹಾಗೂ ಮಿನಿ ಕರ್ನಾಟಕವೆಂದು ಗುರುತಿಸಲ್ಪಟ್ಟಿದೆ. ಆರು ದಶಕಗಳ ಹಿಂದೆ ಡೊಂಬಿವಲಿಯಲ್ಲಿ ಬೆರಳೆಣಿಕೆಯಲ್ಲಿದ್ದ ತುಳು- ಕನ್ನಡಿಗರನ್ನು ಒಗ್ಗೂಡಿಸಿ ಜನ- ಹಿತ ಕಾರ್ಯದಲ್ಲಿ ತೊಡಗಿಸ ಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆಯೇ ನವರಾತ್ರೋತ್ಸವ ಮಂಡಳಿ.1962 ರಲ್ಲಿ ಇನ್ನ ಕುರ್ಕೀಲ ಬೆಟ್ಟು ಬಾಳಿಕೆ ದಾಸು ಬಾಬು ಶೆಟ್ಟಿಯವರು ತನ್ನ ಹೋಟೆಲ್ ಉದ್ಯಮದಲ್ಲಿ ಮಹಾಬಲ ಶೆಟ್ಟಿ, ಬೋಳ ಮಲಿಯಾಳ ಕುಟ್ಟಿ ಶೆಟ್ಟಿ ಮೂಡುಶೆಡ್ಡೆ ರಘು ಶೆಟ್ಟಿ, ಹೆಜಮಾಡಿ ಪಡುಮನೆ ಕಿಟ್ಟಣ್ಣ ಶೆಟ್ಟಿ, ರಘುರಾಮ ಶೆಟ್ಟಿ, ರವೀಂದ್ರ ಶೆಟ್ಟಿ, ಸುಧಾಕರ ಶೆಟ್ಟಿ, ಜಯರಾಮ ಶೆಟ್ಟಿ, ಪಾದೆಬೆಟ್ಟು ಕೃಷ್ಣ ಎಂ.ಶೆಟ್ಟಿ, ನಂದಳಿಕೆ ಸದಾಶಿವ ಚೌಟ, ಪಾಂಡು ಶೆಟ್ಟಿ ಬಿಲ್ಲರ್, ಅಣ್ಣ ದೇವಾಡಿಕರ್, ರಮೇಶ್ ದೇವಾಡಿಕರ್, ಉಳ್ಳೂರುಗುತ್ತು ವೆಂಕಪ್ಪ ಶೆಟ್ಟಿ ದೇವಣ್ಣ ಪಾಠ್ಕರ್, ಜಯ ಶೆಟ್ಟಿ, ಸಂಜೀವ ಮಾಸ್ತರ್ ಇವರನ್ನೇಲ್ಲಾ ಒಗ್ಗೂಡಿಸಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯನ್ನು ಸ್ಥಾಪಿಸಿ ಪ್ರತೀ ಶುಕ್ರವಾರ ದಂದು ತನ್ನ ಹೋಟೆಲಿನಲ್ಲಿ ಭಜನಾ ಸೇವೆಯನ್ನು ಮಾಡುತ್ತಾ ಬಂದರು. ತದನಂತರ ಎಲ್ಲರ ಅಭಿಪ್ರಾಯವನ್ನು ಪಡೆದು 2 ವರ್ಷದ ನಂತರ 1964 ರಲ್ಲಿ ಸಾರ್ವಜನಿಕವಾಗಿ ನೇರಳೆ ವೃಕ್ಷದಡಿಯಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವವನ್ನು ಅಚರಿಸಿಕೊಂಡು ಬರಲಾಯಿತು. ಇಲ್ಲಿ ನವರಾತ್ರಿ ಉತ್ಸವ ಅಚರಿಸಲು ಸ್ಥಳದ ಅಭಾವವಿದ್ದರೂ ಡೊಂಬಿವಲಿಯ ತುಳು- ಕನ್ನಡಿಗರಲ್ಲಿ ಶ್ರದ್ಧೆ ಹಾಗೂ ಭಕ್ತಿ ಅಭಾವವಿರಲಿಲ್ಲ.1971 ರಿಂದ ಅಂದಿನ ಯುವ ಚೇತನಗಳಾದ ಸಂಜೀವ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಕಸ್ತೂರಿ ಶೆಟ್ಟಿ, ಕೃಷ್ಣ ಶೆಟ್ಟಿ, ಶೇಖರ ಶೆಟ್ಟಿ, ದ್ವಾರಕ ಹೋಟೆಲ್ ಸಾಧು ಶೆಟ್ಟಿ, ಶಂಕರ ಶೆಟ್ಟಿ ( ಮಾಮ) ಗೋಪಾಲ ಕೆ.ಶೆಟ್ಟಿ ಮೊದಲಾದವರು ಮಂಡಳಿಗೆ ಸೇರ್ಪಡೆಗೊಂಡ ಪರಿಣಾಮ ಮಂಡಳಿಯು ಅಭಿವೃದ್ಧಿ ಪಥದತ್ತ ಸಾಗುತ್ತಾ ಬಂದಿದೆ ಎಂದರೂ ತಪ್ಪಾಗಲಾರದು ಇವರೆಲ್ಲರ ನಿಸ್ವಾರ್ಥ ಸೇವೆಯ ಫಲವೇ ಮಂಡಳಿಯು ಪ್ರತಿ ವರ್ಷ ಬೆಳೆಯುತ್ತಾ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಯಿತು. ಅದರಲ್ಲೂ ಸಂಜೀವ ಶೆಟ್ಟಿಯವರ ಧರ್ಮಪತ್ನಿಯ ಸೇವೆ ಅಪಾರ ಅವರು ಮಂಡಳಿಗೆ ಪ್ರಾತ: ಸ್ಮರಣೀಯರು.1989 ಇಸವಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗೆ ರಜತ ಜಯಂತಿಯ ಸಂಭ್ರಮ ಈ ಸಂಧರ್ಭದಲ್ಲಿ ರವೀಂದ್ರ ದಾಸು ಶೆಟ್ಟಿ, ಸಂಜೀವ ಕೆ. ಶೆಟ್ಟಿ, ಹಾಗೂ ಅಂದಿನ ಎಲ್ಲಾ ಕಾರ್ಯಕರ್ತರ ಮುಂದಾಳುತ್ವದಲ್ಲಿ ಅತ್ಯಾಕರ್ಷಕ ಕಾರ್ಯಕ್ರಮಗಳನ್ನು ಅಯೋಜಿಸಿ ಜನ-ಮನ ರಂಜಿಸುವಂತೆ ಅಚರಿಸಿದ ಫಲ ಸ್ವರೂಪ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ರಜತ ಕಿರೀಟ, ರಜತ ಮಂಟಪ,ರಜತ ಪೂಜಾ ಸಾಮಾಗ್ರಿ ರಜತ ಪೀಠ,ರಜತ ಕಲಶವನ್ನು ಸಮರ್ಪಿಸಲಾಯಿತು.1990 ನೇ ಇಸವಿಯಿಂದ ಸುಧಾಕರ್ ಎಲ್. ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪಿಸಲಾದ ಶ್ರೀ ದುರ್ಗಾಪರಮೇಶ್ವರಿ ಶ್ರೀ ಅಯ್ಯಪ್ಪ ಭಕ್ತ ವೃಂದದ ಕಾರ್ಯಕರ್ತರು ಮುಂದೆ ಬಂದು ಶ್ರೀ ದೇವಿಯ ಮಂಟಪದ ಹೂವಿನ ಶೃಂಗಾರದ ಜವಾಬ್ದಾರಿಯನ್ನು ವಹಿಸಿದ ಪರಿಣಾಮ ಉತ್ಸವಕ್ಕೆ ಮತ್ತಷ್ಟು ಮೆರಗು ಬಂತು ಈ ಹೂವಿನ ಶೃಂಗಾರವನ್ನು ನೋಡಲೆಂದೆ ಭಕ್ತಾಧಿಗಳು ಸಾಲುಗಟ್ಟಿ ಬರಲಾರಂಭಿಸಿದರು ಅಂದಿನಿಂದ ನವರಾತ್ರಿ ಉತ್ಸವ ಹಬ್ಬದ ಸಂಭ್ರಮ ಎರ್ಪಟ್ಟಿತು.2014 ನೇ ಇಸವಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗೆ ಸ್ವರ್ಣ ಜಯಂತಿಯ ಸಂಭ್ರಮ ಅದರೆ ರಜತ ಸಂಭ್ರಮದಲ್ಲಿದ್ದ ಮಂಡಳಿಯ ಹೆಚ್ಚಿನ ಹಿರಿಯರೆಲ್ಲರೂ ಕಾಲದ ಕರೆಗೆ ಓಗೊಟ್ಟು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಚರಣ ಕಮಲದಲ್ಲಿ ಲೀನರಾದರು. ಆ ಸಂಧರ್ಬದಲ್ಲಿ ಮಂಡಳಿಯ ಈಗಿನ ಧರ್ಮದರ್ಶಿ ಅಶೋಕ ದಾಸು ಶೆಟ್ಟಿ ಯವರು ಮುಂದಾಳತ್ವ ವಹಿಸಿ ಮಂಡಳಿಯ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಅಚರಿಸಲು ನಿರ್ಧರಿಸಲಾಯಿತು. ಮಂಡಳಿಯ ಹಿರಿಯ- ಕಿರಿಯರು ಕೂಡಿ ಹಾಗೂ ಸುಮಾರು 300 ಕ್ಕಿಂತಲೂ ಹೆಚ್ಚಿನ ಸದಸ್ಯರು ಕೈ ಜೋಡಿಸಿದ ಪರಿಣಾಮ ನಾ ಭೂತೋ ನಾ ಭವಿಷ್ಯತ್ ಎಂಬ ನಾಣ್ನುಡಿಯಂತೆ ಸುವರ್ಣ ಮಹೋತ್ಸವ ಎಲ್ಲರ ಮನದಲ್ಲಿ ಸ್ಥಾಯಿ ಯಾಗಿ ಉಳಿದಿದೆ ಎಂದರೂ ತಪ್ಪಾಗಲಾರದು. ಈ ಸಂದರ್ಭದಲ್ಲಿ ಶ್ರೀ ದೇವಿಗೆ ಸುವರ್ಣ ಕಿರೀಟ, ಸುವರ್ಣ ಕಲಶ, ಸುವರ್ಣ ಅಭರಣಗಳನ್ನು ಸಮರ್ಪಿಸಲಾಯಿತು. ಅಶೋಕ್ ದಾಸು ಶೆಟ್ಟಿಯವರ ಕಾರ್ಯವೈಖರಿಯನ್ನು ಕಂಡ ಪೇಜಾವರ ಮಠಾದೀಶರಾದ ಶ್ರೀ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ಪ್ರಸಾದದ ರೂಪದಲ್ಲಿ ಧರ್ಮದರ್ಶಿ ಬಿರುದನ್ನು ನೀಡಿ ಸನ್ಮಾನಿಸಿದರು.ಶ್ರೀ ದೇವಿ ನೆಲೆನಿಂತ ನೇರಳೆ ವೃಕ್ಷದಡಿಯಲ್ಲಿ ತಮ್ಮ ಕಷ್ಟ ಗಳನ್ನು ಮನದಾಳದಿಂದ ನಿವೇದಿಸಿ ಕೊಂಡರೆ ಖಂಡಿತವಾಗಿಯೂ ತಾಯಿ ತಮ್ಮ ಕಷ್ಟವನ್ನು ಬಗೆಹರಿಸಿ ಕೊಡುತ್ತಾಳೆ ಅದುದರಿಂದ ದಿನೇ ದಿನೇ ಭಕ್ತರ ಸಂಖ್ಯೆಯು ಅಧಿಕ ವಾಗುತ್ತಿದೆ ಅದುದರಿಂದ ನವರಾತ್ರಿ ಸಂದರ್ಭದಲ್ಲಿ ಮಹಾನಗರದಾಂತ್ಯ ಭಕ್ತರು ಅಗಮಿಸಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಾರೆ ನವರಾತ್ರಿ ಸಂದರ್ಬದಲ್ಲಿ ಪ್ರತಿ ನಿತ್ಯ ಮಧ್ಯಾಹ್ನ ಅನ್ನದಾನಕ್ಕೆ ಸುಮಾರು ನಾಲ್ಕೈದು ಸಾವಿರಕ್ಕೂ ಮಿಕ್ಕಿ ಮತ್ತು ರಾತ್ರಿ ಅನ್ನದಾನದಲ್ಲಿ ನಾಲ್ಕೈದು ಸಾವಿರ ಭಕ್ತರು ಅಗಮಿಸಿ ಅನ್ನ ಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿಯ ಪ್ರತಿಯೊಂದು ಕೆಲಸ ಕಾರ್ಯವನ್ನು ಮಹಿಳೆಯರು, ಯುವ ವಿಭಾಗ ಹಾಗೂ ಮಂಡಳಿಯ ಸದಸ್ಯ ಬಾಂಧವರು ಪ್ರೀತಿ ಹಾಗೂ ಭಕ್ತಿಯಿಂದ ಮಾಡುತ್ತಿದ್ದಾರೆ.ಶ್ರೀ ದೇವಿಯ ಸನ್ನಿದಾನದ ಸಮೀಪದಲ್ಲೇ ಭಜನಾ ಮಂದಿರವನ್ನು ಸ್ಥಾಪಿಸಿ ಆಶಕ್ತರಿಗೆ ಭಜನೆ, ಕುಣಿತ ಭಜನೆ, ಶನಿಗೃಂಥ ಪಾರಾಯಣ, ಯಕ್ಷಗಾನ, ತಾಳ ಮದ್ದಳೆಯ ಅರ್ಥಗಾರಿಕೆ, ಮೊದಲಾದ ತುಳು ಪರಂಪರೆಯನ್ನುಮಂಡಳಿಯ ವತಿಯಿಂದ ಕಲಿಸಿ ಕೊಡಲಾಗುತ್ತಿದೆ.
ಮಂಡಳಿಯು ಕಾರಣಿಕ ಸ್ಥಳವಾಗಿ ಪರಿವರ್ತನೆಗೊಳ್ಳ ಬೇಕಾದರೆ ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುವವರು ಶುದ್ಧ ಹಸ್ತ, ವೇದ ಪಾರಂಗತರಾಗಿರ ಬೇಕು ಹಾಗೂ ದೇವರಲ್ಲಿ ಅಪಾರ ಶ್ರದ್ಧಾ ಭಕ್ತಿ ಇರುವವರಾಗಿರ ಬೇಕು ಆಮಟ್ಟಿಗೆ ಮಂಡಳಿಯ ಸದಸ್ಯರು ಭಾಗ್ಯವಂತರು ಮಂಡಳಿಯ ಸ್ಥಾಪನೆಯಿಂದ 26 ವರ್ಷ ನಿರಂತರ ಪೂಜೆ ಮಾಡಿಕೊಂಡು ಬಂದವರು ವೇದಮೂರ್ತಿ ಲಕ್ಷ್ಮೀ ನಾರಾಯಣ ಭಟ್ ಅವರು ದೈವಾದೀನರಾದ ಬಳಿಕ ಅವರ ಶಿಷ್ಯರಾದ ಶುಭಕರ್ ಭಟ್ ತಮ್ಮ ಶಿಷ್ಯರಾದ ರಾಜೇಶ್ ಭಟ್ ಮತ್ತು ರವೀಶ್ ಭಟ್ ರವರೊಂದಿಗೆ ಬಹಳ ನಿಷ್ಠೆ ಹಾಗೂ ಶ್ರದ್ಧೆಯಿಂದ ದೇವತಾ ಕಾರ್ಯವನ್ನು ಮಾಡಿಕೊಂಡು ಬರುತ್ತಾ ಇದ್ದಾರೆ. ಈ ವರ್ಷದ ದೇವಿಯ ಮೂರ್ತಿ ದಾನಿಗಳಾಗಿ ನಿಂಜೂರು ಕಾರ್ಕಳದ ಶ್ರೀಮತಿ ಮತ್ತು ಶ್ರೀ ಉಪೇಂದ್ರ ನಾಯಕ್ ವಹಿಸಿದ್ದು ಮುಂದಿನ ಹದಿನೈದು ವರ್ಷಗಳ ವರೆಗೆ ಮೂರ್ತಿ ದಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ ಇದು ಕ್ಷೇತ್ರದ ಲೀಲೆ ಎಂದೇ ಹೇಳಬಹುದು.
ಈ ವರ್ಷ ಮಂಡಳಿಗೆ ವಜ್ರ ಮಹೋತ್ಸವದ ಸಂಭ್ರಮ ಶರನ್ನವರಾತ್ರಿಯ ಪ್ರತಿ ನಿತ್ಯ ವಿವಿಧ ಮನರಂಜನಾ ಕಾರ್ಯಕ್ರಮ, ಗಣಹೋಮ, ಚಂಡಿಕಾ ಹೋಮ, ರಂಗ ಪೂಜೆ, ಹಳದಿ- ಕುಂಕುಮ, ಒಂದು ದಿನದ ಅಖಂಡ ಭಜನೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ತುಲಾಭಾರ, ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ, ತಾಳ ಮದ್ದಳೆ, ಧಾರ್ಮಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ದಿನಾಂಕ 2-10-24 ರ ಬುಧವಾರ ಸಂಜೆ 6.00 ಘಂಟೆಗೆ ಡೊಂಬಿವಲಿ ಪೂರ್ವದಿಂದ ಶ್ರೀ ದೇವಿಯ ಮೂರ್ತಿ ಆಗಮನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ. ಅದರೊಂದಿಗೆ ಪ್ರತಿ ವರ್ಷ ವಿಜಯ ದಶಮಿಯಂದು ಡೊಂಬಿವಲಿಯ ಎಲ್ಲಾ ತುಳು- ಕನ್ನಡಿಗರು ಸಾಂಪ್ರದಾಯಿಕ ಉಡುಗೆ ತೊಡುಗೆ ಯೊಂದಿಗೆ ತಾಯ್ನಾಡಿನ ವಿವಿಧ ವೇಷ ಭೂಷಣಗಳೊಂದಿಗೆ ಮೂರ್ತಿ ವಿಸರ್ಜಾನ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡುತ್ತಿದ್ದಾರೆ.
ಈ ವರ್ಷ ವಜ್ರ ಮಹೋತ್ಸವದ ನಿಮಿತ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು
ದಿ. 3-10-24 ರ ಗುರುವಾರ ಸಂಜೆ 6.00 ಘಂಟೆಗೆ ಮಹಾರಾಷ್ಟ್ರ ಜನರಲ್ ಸ್ಟೋರ್ಸ್ ಉಳ್ಳೂರುಗುತ್ತು ಶ್ರೀ ಮತ್ತು ಶ್ರೀಮತಿ ಭಾಸ್ಕರ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಕಲ್ಲಡ್ಕ ವಿಠಲ್ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ,
ದಿ. 4-10-24 ರ ಶುಕ್ರವಾರ ಸಂಜೆ 6.00 ಘಂಟೆಗೆ ಮೋಡರ್ನ್ ಕೆಫೆ ದಿ|| ಕಿಟ್ಟಣ್ಣ ಶೆಟ್ಟಿ ಸ್ಮರಣಾರ್ಥ ಅವರ ಮಕ್ಕಳಿಂದ ಮತ್ತು ಬಂಟರ ಸಂಘ ಮುಂಬಯಿ ಇದರ ಗೌ.ಪ್ರ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ ಇವರ ವತಿಯಿಂದ ಡೊಂಬಿವಲಿ ಸ್ಥಾನಿಕ ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ,
ದಿ. 5-10-24 ರ ಶನಿವಾರ ಸಂಜೆ 6.00 ಘಂಟೆಗೆ ದಿ|| ಸಂಜೀವ ಕೆ.ಶೆಟ್ಟಿ ಸ್ಮರಣಾರ್ಥ ಶ್ರೀಮತಿ ಶುಭಾ ಸುರೇಶ್ ಮತ್ತು ಇವರಿಂದ ಪುತ್ತೂರು ಜಗದೀಶ್ ಅಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ,
ದಿ. 6-10-24 ರ ಭಾನುವಾರ ಸಂಜೆ 6.00 ಘಂಟೆಗೆ ಸಿಎ ಅಸ್ಮೀತಾ ಸಿ.ರೈ ಮತ್ತು ಮಮತಾ ಡೆಂಟಲ್ ಲ್ಯಾಬ್ ಸತೀಶ್ ಕೋಟ್ಯಾನ್ ದಂಪತಿಗಳಿಂದ ಮರಾಠಿ ಕಲಾವಿದರಿಂದ ವಿವಿಧ ಕಾರ್ಯಕ್ರಮ,
ದಿ. 7-10-24 ರ ಸೋಮವಾರ ಸಂಜೆ 6.00 ಘಂಟೆಗೆ ಸುಯೋಗ್ ಹೋಟೆಲ್ ಶ್ರೀಮತಿ ಮತ್ತು ಶ್ರೀ ಕರುಣಾಕರ ಶೆಟ್ಟಿ ಕಲ್ಲಡ್ಕ ದಂಪತಿ ಮತ್ತು ಬಂಟರ ಸಂಘ ಮುಂಬಯಿ ಇದರ ಜೊತೆ ಕೋಶಾಧಿಕಾರಿ ಇನ್ನಂಜೆ ಶಶಿಧರ ಶೆಟ್ಟಿ ದಂಪತಿಯ ಪ್ರಾಯೋಜಕತ್ವದಲ್ಲಿ ಮಂಡಳಿಯ ಮಹಿಳಾ ಸದಸ್ಯರಿಂದ ಶ್ರೀ ಶನೀಶ್ವರ ಮಹಾತ್ಮೆ ತುಳು ತಾಳ ಮದ್ದಳೆ,
ದಿ. 8-10-24 ರ ಮಂಗಳವಾರ ಸಂಜೆ 6.00 ಘಂಟೆಗೆ ಹುಬ್ಬಳ್ಳಿ ಪಂಜುರ್ಲಿ ಗ್ರೂಪ್ ಹೋಟೆಲ್ ನ ರಾಜೇಂದ್ರ ವಿ. ಶೆಟ್ಟಿ ದಂಪತಿ ಪ್ರಾಯೋಜಕತ್ವದಲ್ಲಿ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಇದರ ನುರಿತ ಕಲಾವಿದರಿಂದ ಸುದರ್ಶನ ವಿಜಯ ತುಳು ಯಕ್ಷಗಾನ,
ದಿ. 9-10-24 ರ ಬುಧವಾರ ಸಂಜೆ. 6.00 ರಿಂದ ಹೋಟೆಲ್ ಅಂಬಿಕಾ ಪ್ರಭಾಕರ್ ಶೆಟ್ಟಿ ದಂಪತಿ ಪ್ರಾಯೋಜಕತ್ವದಲ್ಲಿ ಡೊಂಬಿವಲಿ ಪರಿಸರದ ಸಂಘ- ಸಂಸ್ಥೆಯ ಕಲಾವಿದರಿಂದ ನಾಟ್ಯ ವೈಭವ,
ದಿ. 10-10-24 ರ ಗುರುವಾರ ಸಂಜರ 6.00 ಘಂಟೆಗೆ ದಿ. ಸಂಜೀವ್ ಕೆ. ಶೆಟ್ಟಿಯವರ ಸ್ಮರಣಾರ್ಥ ವ್ಯಾಲ್ಯೂ ಸೆಕ್ಯುರಿಟೀಸ್ ಇದರ ಶ್ರೀಮತಿ ಕಸ್ತೂರಿ ಸಂಜೀವ್ ಶೆಟ್ಟಿ ಮತ್ತು ಸುನೀಲ್ ಎಸ್. ಶೆಟ್ಟಿ ದಂಪತಿಯ ಪ್ರಯೋಜಕತ್ವದಲ್ಲಿ ಪವಿತ್ರ ಭಟ್ ಅವರಿಂದ ಭರತ ನಾಟ್ಯ ವೈಭವ,
ದಿ. 11-10-24 ರ ಶುಕ್ರವಾರ ಸಂಜೆ 6.00 ಘಂಟೆಗೆ ಹೋಟೆಲ್ ದ್ವಾರಕದ ಶ್ರೀಮತಿ ಲತಾ ಸಾಧು ಶೆಟ್ಟಿ ಮತ್ತು ವಿಜೀತ್ ಶೆಟ್ಟಿ ದಂಪತಿಯ ವತಿಯಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇದರ ನುರಿತ ಹಾಗೂ ತಾಯ್ನಾಡಿನ ನುರಿತ ಕಲಾವಿದರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.ಈ ಸಂದರ್ಭದಲ್ಲಿ ಮಂಡಳಿಯ ಸಂಸ್ಥಾಪಕರಾದ ಇನ್ನ ಕುರ್ಕಿಲಬೆಟ್ಟು ಬಾಳಿಕೆ ದಿ| ದಾಸು ಬಾಬು ಶೆಟ್ಟಿ ಇವರ ಸ್ಮರಣಾರ್ಥ ನೀಡುವ ಪ್ರಶಸ್ತಿಯನ್ನು ಪುಣೆಯ ಉದ್ಯಮಿ ಹಾಗೂ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇದರ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಇವರಿಗೆ ನೀಡಿ ಸನ್ಮಾನಿಸಲಾಗುವುದು. ವಜೃ ಮಹೋತ್ಸವದ ನಿಮಿತ್ತ ಶ್ರೀ ದೇವಿಗೆ ವಜ್ರದ ತಿಲಕ, ವಜ್ರದ ಬೆಂಡೋಲೆ, ವಜ್ರದ ಮೂಗುತಿ, ವಜ್ರದ ಕಂಠಹಾರ ಸಮರ್ಪಿಸ ಬೇಕೆಂದು ತಿರ್ಮಾನಿಸಲಾಗಿದೆ ಈ ಎಲ್ಲಾ ಕಾರ್ಯ ಯಶಸ್ವಿಯಾಗಿ ನಡೆಯಲು ಭಕ್ತರ ತನು -ಮನ – ಧನದ ಸಹಕಾರವನ್ನು ಮಂಡಳಿ ಬಯಸುತ್ತದೆ.ಮಹಾನಗರದ ಎಲ್ಲಾ ತುಳು- ಕನ್ನಡಿಗರು ಡೊಂಬಿವಲಿಯ ಹಿರಿಯ ಸಂಸ್ಥೆಯಾದ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸ ಬೇಕೆಂದು ಮಂಡಳಿಯ ಧರ್ಮದರ್ಶಿ ಅಶೋಕ್ ಡಿ. ಶೆಟ್ಟಿ, ಅಧ್ಯಕ್ಷ ಗೋಪಾಲ ಕೆ. ಶೆಟ್ಟಿ, ಕಾರ್ಯಾಧ್ಯಕ್ಷ ನಿತ್ಯಾನಂದ ಜತ್ತನ್, ಉಪಾಧ್ಯಕ್ಷ ಬ್ರಹ್ಮಾನಂದ ಶೆಟ್ಟಿಗಾರ್, ಉಪ ಕಾರ್ಯಾಧ್ಯಕ್ಷ ಜಯಪ್ರಸನ್ನ ಶೆಟ್ಟಿ, ಕಾರ್ಯದರ್ಶಿ ಕಿಶೋರ್ ಡಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಸುನೀಲ್ ಎಸ್. ಶೆಟ್ಟಿ, ಕೋಶಾಧಿಕಾರಿ ತಾರನಾಥ ಅಮೀನ್, ಜತೆ ಕೋಶಾಧಿಕಾರಿ ರಘುವೀರ್ ಭಟ್, ಜಯರಾಮ ಡಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಲಾಸಿನಿ ಎಸ್. ಶೆಟ್ಟಿ ವಿನಂತಿಸಿದ್ದಾರೆ.
( ಶ್ರೀ ದೇವಿ ನೆಲೆನಿಂತ ನೇರಳೆ ವೃಕ್ಷದಡಿಯಲ್ಲಿ ತಮ್ಮ ಕಷ್ಟ ಗಳನ್ನು ಮನದಾಳದಿಂದ ನಿವೇದಿಸಿ ಕೊಂಡರೆ ಖಂಡಿತವಾಗಿಯೂ ತಾಯಿ ತಮ್ಮ ಕಷ್ಟವನ್ನು ಬಗೆಹರಿಸಿ ಕೊಡುತ್ತಾಳೆ )
( ದೇವಿ ಅಗಮನ ಮೆರವಣಿಗೆ ಹಾಗೂ ವಿಶೇಷವಾಗಿ ದೇವಿ ವಿಸರ್ಜನಾ ಮೆರವಣಿಗೆಗೆ ತಾಯ್ನಾಡಿನ ಕಂಗೀಲು ನೃತ್ಯ, ಹುಲಿ ವೇಷ, ತಾಲೀಮು, ಯಕ್ಷಗಾನದ ವೇಣ ಭೂಷಣಗಳು, ವಿಸರ್ಜನಾ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡುತ್ತದೆ. )
( ಮಹಿಳಾ ಸದಸ್ಯರ, ಯುವ ವಿಭಾಗ ಹಾಗೂ ಮಂಡಳಿಯ ಸದಸ್ಯರ ನಿಸ್ವಾರ್ಥ ಭಾವನೆಯ ಸೇವೆಯಿಂದಾಗಿ ಮಂಡಳಿ ಶ್ರದ್ಧಾ ಕೇಂದ್ರವಾಗಿ ಮೆರೆಯುತ್ತಿದೆ )
( ಮುಂದಿನ ಹದಿನೈದು ವರ್ಷಕ್ಕೂ ಮಿಕ್ಕಿ ಮೂರ್ತಿ ಸೇವೆಗೆ ಭಕ್ತರು ಸರತಿ ಸಾಲು ಗಟ್ಟಿ ನಿಂತಿದ್ದಾರೆ )
- ರವಿ.ಬಿ.ಅಂಚನ್ ಪಡುಬಿದ್ರಿ