
ಚಿತ್ರ, ವರದಿ : ಧನಂಜಯ್ ಪೂಜಾರಿ
ಮುಂಬಯಿ : ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 80ನೇ ವರ್ಷಾಚರಣೆಯ ಅಂಗವಾಗಿ ಶ್ರೀ ಶನಿಶಿಂಗ್ನಪುರ ಕ್ಷೇತ್ರದಲ್ಲಿ ದಿನಾಂಕ 28 / 9 / 2024 ರಂದು ಶ್ರೀ ಶನಿ ಗ್ರಂಥ ಪಾರಾಯಣ ಪೂಜೆಯು ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಅಂದು ಬೆಳಗ್ಗೆ ವಿವಿಧ ಪೂಜಾ ಸಮಿತಿಗಳ, ಭಕ್ತರ ಕೂಡುಕೆಯಿಂದ ಭಜನಾ ಕಾರ್ಯಕ್ರಮ, ಭಕ್ತಿ ಭಜನೆ, ಮಧ್ಯಾಹ್ನ ಸತೀಶ್ ಕೋಟ್ಯಾನ್ ರವರಿಂದ ಕಳಸ ಪ್ರತಿಷ್ಠಾಪನೆ ನಡೆದು ನಂತರ ಶನಿ ಗ್ರಂಥ ಪಾರಾಯಣ ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಜರುಗಿತು. ಸಂಜೆ ಮಹಾ ಮಂಗಳಾರತಿ ನಡೆದು ಪ್ರಸಾದ ವಿತರಣೆ ಜರುಗಿತು.
ಅರ್ಚಕರಾಗಿ ಹರೀಶ್ ಶಾಂತಿ ಸಂತೋಷ ಶಾಂತಿ ಮತ್ತು ಸುರೇಶ್ ಪೂಜಾರಿ ಸಹಕರಿಸಿದರು, ಮಧ್ಯಾಹ್ನ ಮತ್ತು ಸಂಜೆ ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಅಧ್ಯಕ್ಷರಾದ ರವಿ ಎಲ್ ಬಂಗೇರ, ಧಾರ್ಮಿಕ ಸಲಹೆಗಾರರಾದ ಜೆ ಜೆ ಕೋಟ್ಯಾನ್, ಸಹಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಸಾದ್ ಕರ್ಕೇರ, ಸಮಿತಿಯ ಸದಸ್ಯರು ಮತ್ತು ಮಹಿಳಾ ವಿಭಾಗದವರು ಹಾಗೂ ಶನಿ ಶಿಗ್ನಾಪುರ ಮಂದಿರದ ಆಡಳಿತ ಸಮಿತಿಯ ಸಹಕಾರದೊಂದಿಗೆ ಈ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.















