24.7 C
Karnataka
April 3, 2025
ಸುದ್ದಿ

ದೇಗುಲಗಳು ಸರಕಾರದ ವಶದಿಂದ ಮುಕ್ತಗೊಳ್ಳಲಿ : ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ




ನಮ್ಮ ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಇನ್ನೂ ಹಿಂದೂ ದೇವಾಲಯಗಳು ಸರಕಾರದ ವಶದಲ್ಲಿದೆ.
ಸರಕಾರದ ಹಿಡಿತದಿಂದ ದೇಗುಲಗಳು ಮುಕ್ತಗೊಳ್ಳುವ ಅಗತ್ಯವಿದ್ದು, ಅಯೋಧ್ಯೆಯ ರಾಮಮಂದಿರದ ಮಾದರಿಯಲ್ಲಿ ಎಲ್ಲಾ ದೇವಾಲಯಗಳಿಗೆ ಪ್ರತ್ಯೇಕ ವಿಶ್ವಸ್ಥ ಮಂಡಳಿ ರೂಪುಗೊಳ್ಳಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ಹಾಗೂ ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ಟ್ರಸ್ಟ್ ನ ವಿಶ್ವಸ್ಥರಾಗಿರುವ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಚೀನ ದೇವಾಲಯಗಳನ್ನು ಸರಕಾರ ತನ್ನ ವಶದಲ್ಲಿ ಇರಿಸಿಕೊಂಡಿದೆ, ಸರಕಾರದ ವರ್ಷದಲ್ಲಿರುವ ದೇವಾಲಯಗಳನ್ನು ಹಿಂದುಗಳ ವಶಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ, ಅದರ ಹೊರತಾಗಿಯೂ ಇದುವರೆಗೆ ಯಾವುದೇ ದೇವಾಲಯಗಳನ್ನು ಸರಕಾರ ತನ್ನ ಹಿಡಿತದಿಂದ ಮುಕ್ತಗೊಳಿಸಿಲ್ಲ. ಇತರ ಆರಾಧನಾ ಸ್ಥಳಗಳು ಅವರ ಹಿಡಿತದಲ್ಲಿವೆ, ದೇವಸ್ಥಾನಗಳು ಸರಕಾರದ ವಶದಲ್ಲಿ ಇರುವುದರಿಂದ ಶ್ರದ್ಧಾ ಕೇಂದ್ರಗಳಲ್ಲಿ ಅಪಚಾರವಾಗಲು ಅವಕಾಶವಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಇದೇ ಸಂದರ್ಭ ತಿರುಪತಿಯ ಲಡ್ಡು ಅಪವಿತ್ರವಾದ ಘಟನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ಅಪವಿತ್ರವಾಗದಂತ್ತೆ ನೋಡಿಕೊಳ್ಳುವುದು
ಸರಕಾರಗಳ ಕರ್ತವ್ಯ. ದೇವಾಲಯಗಳು ಸ್ವಂತ ಗೋಶಾಲೆ ಹೊಂದುವಂತಾದರೆ ಇಂಥ ಘಟನೆಗಳಿಗೆ ಕಡಿವಾಣ ಹಾಕಬಹುದು ಎಂದು ಸ್ವಾಮೀಜಿ ತಿಳಿಸಿದರು.

Related posts

ಪ್ರೇಕ್ಷಾ ಬಂಗೇರಾಗೆ ಎಂ. ಎಸ್. ಸಿ. ಯಲ್ಲಿ ಚಿನ್ನದ ಪದಕ

Mumbai News Desk

ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರಚಿತ ಕವನ ಸಂಕಲನ “ತಂಬೂರಿ” ಹಾಗೂ ‘ಕಾಯ ತಂಬೂರಿ’ ನಾಟಕ ಕೃತಿ ಬಿಡುಗಡೆ

Mumbai News Desk

ಕರಾವಳಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಪೂರೈಸಲು ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಉಪಮುಖ್ಯಮಂತ್ರಿಗಳಿಗೆ ಮನವಿ

Mumbai News Desk

ಡ್ರಾಮಾ ಜ್ಯೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಸಿಎಂ ಮೆಚ್ಚುಗೆ

Mumbai News Desk

ಬಜೆಟ್ ನಲ್ಲಿ ನಿರ್ಲಕ್ಷ್ಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಗ್ರಹ* ಬಂಟರ ಅಭಿವೃದ್ದಿ ನಿಗಮ ಸ್ಥಾಪಿಸಿ : ಐಕಳ ಹರೀಶ್ ಶೆಟ್ಟಿ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

Mumbai News Desk