
ಮುಂಬಯಿ : ತುಳು ಸಂಘ ಬೊರಿವಲಿಯ 14ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಯೋಗಿ ನಗರ ಹೌಸಿಂಗ್ ಸೊಸೈಟಿ ಹಾಲ್, ಬೊರಿವಲಿ ಪಶ್ಚಿಮ, ಇಲ್ಲಿ ಸಂಘದ ಗೌರವ ಅಧ್ಯಕ್ಷ ವಿರಾರ್ ಶಂಕರ ಶೆಟ್ಟಿಯವರ ಉಪಸ್ಥಿತಿಯಲ್ಲಿ, ಕರುಣಾಕರ ಎಂ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ, ಹರೀಶ್ ಮೈಂದನ್ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಮುಂಬಯಿ ಫೋರ್ಟ್ ಪರಿಸರದ ಜನತಾ ಶಿಕ್ಷಣ ಸಂಘದಲ್ಲಿ ಸುಮಾರು 25 ವರ್ಷಗಳ ಕಾಲ ಗೌ. ಪ್ರ. ಕಾರ್ಯದರ್ಶಿಯಾಗಿ ನಂತರ ಕಳೆದ 14 ವರ್ಷಗಳಿಂದ ಮದರ್ ಇಂಡಿಯಾ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌ. ಪ್ರ. ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಹರೀಶ್ ಮೈಂದನ್ ಇವರು ತುಳು ಸಂಘ ಬೊರಿವಲಿಯಲ್ಲಿ ಪ್ರಾರಂಭದಿಂದಲೇ ವಿವಿಧ ಜವಾಬ್ಧಾರಿಯೊಂದಿಗೆ ಸೇವೆ ಸಲ್ಲಿಸುತ್ತಾ ಸಂಘದ ನಿಕಟ ಪೂರ್ವ ಉಪಾಧ್ಯಕ್ಷರಾಗಿದ್ದರು. ಸಂಘದ ಗೌರವ ಅಧ್ಯಕ್ಷರಾಗಿ ವಿರಾರ್ ಶಂಕರ ಶೆಟ್ಟಿ ಯವರು ಮುಂದುವರಿಯಲಿದ್ದು, ಉಪಾಧ್ಯಕ್ಷರನ್ನಾಗಿ ಯುವ ಸಮಾಜ ಸೇವಕ ರಜಿತ್ ಎಲ್. ಸುವರ್ಣ ಆಯ್ಕೆಯಾಗಿದ್ದಾರೆ.
ಆ ನಂತರ ಜರಗಿದ ಕಾರ್ಯಕಾರಿ ಸಭೆಯಲ್ಲಿ ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಕೃಷ್ಣರಾಜ್ ಸುವರ್ಣ (ಗೌ. ಪ್ರ. ಕಾರ್ಯದರ್ಶಿ), ದಿವಾಕರ ಕರ್ಕೇರ (ಗೌ. ಕೋಶಾಧಿಕಾರಿ), ತಿಲೋತ್ತಮ ವೈದ್ಯ (ಗೌ. ಜೊತೆ ಕಾರ್ಯದರ್ಶಿ), ಟಿ. ವಿ. ಪೂಜಾರಿ (ಗೌ. ಜೊತೆ ಕೋಶಾಧಿಕಾರಿ), ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶೋಭಾ ಶೆಟ್ಟಿ, ಕಾರ್ಯದರ್ಶಿಯಾಗಿ ವಿಜಯಲಕ್ಷ್ಮೀ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ನ್ಯಾ. ರಾಘವ ಎಂ. ಆಯ್ಕೆಯಾಗಿರುವರು. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಸವಿತ ಸಿ. ಶೆಟ್ಟಿ, ಚಂದ್ರಹಾಸ ಬೆಳ್ಚಡ, ಎಂ. ಜಿ. ಶೆಟ್ಟಿ, ಕಸ್ತೂರಿ ಎಸ್. ಶೆಟ್ಟಿ, ರಾಜೇಶ್ವರಿ ಜಿ. ಸುವರ್ಣ, ಜಯಂತಿ ಕೆ. ಶೆಟ್ಟಿ, ಸುಮತಿ ಸಾಲ್ಯಾನ್, ವಿಜಯಕುಮಾರ್ ಮೂಲ್ಕಿ, ಕುಸುಮ ಬಿ. ಶೆಟ್ಟಿ, ಪೂರ್ಣಿಮಾ ಆರ್. ಪೂಜಾರಿ, ವೇದ ಶೆಟ್ಟಿ, ಅಶೋಕ್ ಪೂಜಾರಿ, ಲಕ್ಷ್ಮಿ ದೇವಾಡಿಗ, ಜಯರಾಮ್ ಶೆಟ್ಟಿ, ಸರಸ್ವತಿ ರಾವ್, ಸುನಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ವಿಶೇಷ ಆಮಂತ್ರಿತರಾಗಿ ಈಶ್ವರ್ ಎಂ. ಐಲ್, ಯಶವಂತ್ ಪೂಜಾರಿ, ಬಾಲಕೃಷ್ಣ ಬಂಗೇರ, ವತ್ಸಲ ಪೂಜಾರಿ, ನಿತ್ಯಾನಂದ ಶೆಟ್ಟಿ , ಪ್ರಿಯ ಲಕ್ಷ್ಮಿ ಡಿ. ಉಪ್ಪೂರು ಮತ್ತು ವತ್ಸಲ ಪೈ ಗಡೇಕರ್ ಆಯ್ಕೆಯಾಗಿದ್ದಾರೆ. ಸಂಘದ ಸ್ಥಾಪಕ ಅಧ್ಯಕ್ಷ ವಾಸು ಕೆ. ಪುತ್ರನ್, ಪ್ರಕಾಶ್ ಪೇಟೆಮನೆ, ಶ್ರೀನಿವಾಸ ಸಾಫಲ್ಯ, ಪ್ರದೀಪ್ ಶೆಟ್ಟಿ, ಕರುಣಾಕರ ಶೆಟ್ಟಿ ಮತ್ತು ಮುಂಡಪ್ಪ ಪಯ್ಯಡೆ (ಸಲಹೆಗಾರರು).
.