
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಅ. 13: ಮಹಾರಾಷ್ಟ್ರದ ತುಳುನಾಡೇಂದೇ ಖ್ಯಾತಿಯನ್ನು ಪಡೆದ ಡೊಂಬಿವಲಿ ನಗರದ ಹಿರಿಯ ಧಾರ್ಮಿಕ ಸಂಸ್ಥೆ ದಾಸು ಬಾಬು ಶೆಟ್ಟಿಯವರಿಂದ ಸ್ಥಾಪನೆಗೊಂಡ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಕಳೆದ 60 ವರ್ಷಗಳಿಂದ ಶ್ರೀ ದೇವಿಯ ಮೂರ್ತಿಯನ್ನಿಟ್ಟು ಪೂಜಿಸುತ್ತಿದ್ದು ಈ ವರ್ಷ ಮಂಡಳಿಯ ವಜ್ರ ಮಹೋತ್ಸವದ ನಿಮಿತ್ತ ನವರಾತ್ರಿಯ ಒಂಬತ್ತು ದಿನ ಧರ್ಮದರ್ಶಿ ಅಶೋಕ್ ಡಿ. ಶೆಟ್ಟಿ , ಅದ್ಯಕ್ಷ ಗೋಪಾಲ ಶೆಟ್ಟಿ, ಕಸರ್ಯಾಧ್ಯಕ್ಷರಾದ ನಿತ್ಯಾನಂದ ಜತ್ತನ್ ಮತ್ತು ಕಾರ್ಯಕಾರಿ ಸಮಿತಿಯ ಸಹಕಾರದೊಂದಿಗೆ ಅಚ್ಚುಕಟ್ಟಾದ ಪೂಜಾ ವಿಧಿವಿದಾನ, ಅಮಂತ್ರಿತ ಭಜನಾ ಮಂಡಳಿಗಳಿಂದ ಭಜನೆ, ನವರಾತ್ರಿಯಲ್ಲಿ ನಿರಂತರ ಅನ್ನಸಂತರ್ಪಣೆ, ಒಂಬತ್ತು ದಿನ ದಾನಿಗಳ ಪ್ರಾಯೋಜಕತ್ವದಲ್ಲಿ ವಿವಿಧ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಿ ಡೊಂಬಿವಲಿಯ ಕಲಾರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಂಡಳಿಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸೇವೆ ಅಪ್ರತಿಮವಾಗಿತ್ತು ಎಂದರೂ ತಪ್ಪಾಗಲಾರದು,

ವಿಜಯ ದಶಮಿಯಂದು ಸಂಜೆ 6 ಗಂಟೆಗೆ ಶ್ರೀ ದೇವಿಯ ವಿಸರ್ಜಾನ ಮೆರವಣಿಗೆಯೂ ಅಸಂಖ್ಯಾತ ಭಕ್ತ ಜನಸಾಗರದ ನಡುವೆ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ನಡೆಯಿತು ಈ ವಿಸರ್ಜನಾ ಮೆರವಣಿಗೆಯಲ್ಲಿ ಸುರೇಶ್ ಚೌಟ ಇವರ ಮುಂದಾಳುತ್ವದಲ್ಲಿ ತಾಯ್ನಾಡಿನ ಹುಲಿ ವೇಷ, ಉಡುಪಿಯ ಯುವತಿಯರಿಂದ ಕಂಗೀಲು ನೃತ್ಯ, ಯುವಕ ಸಂಘ ಬಡಾಜೆ ಮಂಜೇಶ್ವರ ಇವರ ತಾಲೀಮು, ಕೇರಳದ ಚಂಡೆ, ಪಶ್ಚಿಮ ವಿಭಾಗ ಚಿಣ್ಣರಿಂದ ಕುಣಿತ ಭಜನೆ, ಮಹಿಳೆಯರ ಭಜನಾ ತಂಡ, ಯಕ್ಷಗಾನದ ವೇಷ ಭೂಷಣ, ಹನುಮಂತ, ಗೊಂಬೆ, ಬೇತಾಳ, ವಾದ್ಯ, ಮರಾಠಿಗರ ಡೋಲು ಇವೆಲ್ಲವೂ ಮೆರವಣಿಗೆಯಲ್ಲಿ ಅಕರ್ಷಣೆಯಾಗಿತ್ತು ತಾಲೀಮು, ಹುಲಿ ವೇಷ, ಕಂಗೀಲು, ಚಿಣ್ಣರ ಕುಣಿತ ಭಜನೆ ಕೇಂದ್ರ ಬಿಂದುವಾಗಿ ಭೂಮಿ ಪುತ್ರರ ಮನಸ್ಸಲ್ಲಿ ಬೆರೂರಿತು ಹಾಗೂ ಜಗಜ್ಯೋತಿ ಕಲಾ ವೃಂದದ ಸದಸ್ಯರಿಂದ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಪಾನಕ ಸೇವೆ ಹಾಗೂ ಒರ್ವ ಭೂಮಿ ಪುತ್ರನಿಂದ ಸುಮಾರು ಒಂದುವರೆ ಸಾವಿರಕ್ಕೂ ಮಿಕ್ಕಿ ಸಮೋಸ ಸೇವೆ ನಡೆಯಿತು.

ವಿಸರ್ಜನೆಯ ಮೆರವಣಿಗೆಯಲ್ಲಿ ಡೊಂಬಿವಲಿ ಪರಿಸರದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ತಾರಾನಾಥ ಅಮೀನ್, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೀವ್ ಭಂಡಾರಿ, ಜಗನ್ನಾಥ ಶೆಟ್ಟಿ, ವಸಂತ ಸುವರ್ಣ, ಚಂದ್ರ ನಾಯ್ಕ್, ಮಹಿಳಾ ವಿಭಾಗ ಮಾಜಿ ಕಾರ್ಯಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ಮತ್ತಿತರರು, ತುಳು ಚಲನ ಚಿತ್ರ ನಟ ಪ್ರತೀಕ್ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾದ್ಯಕ್ಷರಾದ ಅನಂದ ಶೆಟ್ಟಿ ಎಕ್ಕಾರ್, ಕೋಶಾದಿಕಾರಿ ಸಚಿನ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಯೋಗೀನಿ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆ ಮಂಜುಳಾ ಶೇಖರ್ ಶೆಟ್ಟಿ ಮತ್ತು ಸಮಿತಿ ಸದಸ್ಯರು, ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯದರ್ಶಿ ಸಚಿನ್ ಪೂಜಾರಿ, ಮತ್ತಿತರರು ಹಾಗೂ ಮಹಿಳಾ ವಿಭಾಗದ ಸದಸ್ಯರು, ಜಗಜ್ಯೋತಿ ಕಲಾವೃಂದ ಇದರ ಅಧ್ಯಕ್ಷ ರಮೇಶ್ ಎ . ಶೆಟ್ಟಿ, ಸಂತೋಷ್ ಶೆಟ್ಟಿ, ಬಾಬು ಮೋಗವೀರ, ಸದಾಶಿವ ಶ್ರೀಯಾನ್, ರಾಜು ಅರ್. ಸುವರ್ಣ, ಉಮೇಶ್ ಡಿ.ಸುವರ್ಣ, ಸಂದೀಪ್ ಕೋಟ್ಯಾನ್, ಅನಂದ ಪೂಜಾರಿ, ಸುರೇಂದ್ರ ನಾಯ್ಕ್, ಚಂದ್ರ ನಾಯ್ಕ್, ಸಂತೋಷ್ ಪುತ್ರನ್, ಯಕ್ಷಕಲಾ ಸಂಸ್ಥೆಯ ಗೌ.ಅಧ್ಯಕ್ಷ ಹರೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಶೃಂಗೇರಿ, ಮಾಧವ ಪೂಜಾರಿ, ಡೊಂಬಿವಲಿಯ ಅನ್ನದಾತ ಅಶೋಕ್ ಶೆಟ್ಟಿ ಮೂಂಡ್ಕೂರು, ಸತೀಶ್ ವಿ. ಶೆಟ್ಟಿ, ಸಾಯಿನಾಥ್ ಮಿತ್ರ ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್, ಸುರೇಶ್ ಸಮ್ರಾಟ್, ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಗಳಿ ಇದರ ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಸಿರಿನಾಡ ವೇಲ್ಫರ್ ಅಸೋಸಿಯೇಷನ್ ಇದರ ಉಪಾಧ್ಯಕ್ಷ ಅಜೆಕಾರ್ ಜಯ ಶೆಟ್ಟಿ ಮತ್ತು ಪದಾಧಿಕಾರಿಗಳು, ತುಳು ವೇಲ್ಫೇರ್ ಅಸೋಸಿಯೇಷನ್ ಇದರ ಪದಾಧಿಕಾರಿಗಳು, ಮೋಗವೀರ ಮಂಡಳಿಯ ಪದಾಧಿಕಾರಿಗಳು ಮತ್ತಿತರ ತುಳು- ಕನ್ನಡಿಗರು ಉಪಸ್ಥಿತರಿದ್ದರು.
