April 2, 2025
ಮುಂಬಯಿ

ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ 35ನೇ ವಾರ್ಷಿಕ ಶರವನ್ನರಾತ್ರಿ ಮಹೋತ್ಸವ ಚಂಡಿಕಾ ಹೋಮ,ಙ ಧಾರ್ಮಿಕ ಕಾರ್ಯಕ್ರಮಗಳು.

ಚಿತ್ರ, ವರದಿ: ರಮೇಶ್ ಉದ್ಯಾವರ

ಸನಾತನ ಧರ್ಮ ಜಾಗೃತಿ ಸತ್ಕಾರ್ಯಗಳಿಂದ ದೇವಸ್ಥಾನಗಳ ಅಭಿವೃದ್ಧಿ : ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ.

ಬೊರಿವಲಿ ಅ. 13::   ಶ್ರೀ ಮಹಿಷಮರ್ಧಿನಿ ದೇವಸ್ಥಾನ ಶ್ರೀ ಕ್ಷೇತ್ರ ಜಯರಾಜ್ ನಗರ ಬೊರಿವಲಿ ಪಶ್ಚಿಮ ಇಲ್ಲಿ ಅ.  12 ರಂದು ಶರವನ್ನ ರಾತ್ರಿಯ ಪುಣ್ಯಪರ್ವದ ದುರ್ಗಾಷ್ಟಮಿಯ ದಿನದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ರಾದ ದೇವರಾಜ್ ನೆಲ್ಲಿಕಾರು, ಪ್ರಶಾಂತ್  ಮತ್ತು ದೇವಸ್ಥಾನದ ಅರ್ಚಕ ವೃಂದದವರ ಸಹಕಾರ್ಯದಲ್ಲಿ ಸಾರ್ವಜನಿಕ ಚಂಡಿಕಾ ಹೋಮ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತಿ ಭಾವ ಹಾಗೂ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.   

       ಬೆಳಿಗ್ಗೆ 9:30ಕ್ಕೆ ಪ್ರಾರಂಭಗೊಂಡ ಧಾರ್ಮಿಕ ಚಂಡಿಕಾ ಹೋಮಕುಂಡದಲ್ಲಿ ಪೂಜಾ ವಿಧಿವಿಧಾನಗಳು ತುಪ್ಪ ದ್ರವ್ಯಾಧಿಗಳನ್ನು ಸಮರ್ಪಿಸಿದ ಬಳಿಕ ಧಾರ್ಮಿಕ ವಿಧಿವತ್ತಾಗಿ ಭಕ್ತರು ದವಸ ಧಾನ್ಯ ವಸ್ತ್ರಾಧಿಗಳನ್ನು ಹೋಮಕುಂಡದಲ್ಲಿ ಸಮರ್ಪಿದರು. ಬಳಿಕ ಅರ್ಚಕ ವೃಂದದವರಿಂದ ವಿವಿಧ ಧಾರ್ಮಿಕ ಕೈಂಕರ್ಯಗಳು, ಸಾರ್ವಜನಿಕ ಸೇವಾ ಪೂಜೆ ನೆರವೇರಿದ ಬಳಿಕ, ಮಹಾ ಮಂಗಳಾರತಿ ಜರುಗಿತು.     

        ಧಾರ್ಮಿಕ ಕಾರ್ಯಕ್ರಮದ ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೊಳಕ್ಕೆ ಬೈಲು ಪ್ರದೀಪ್ ಸಿ. ಶೆಟ್ಟಿ, ಭಕ್ತಿಪರಶೆಯ ಮೂಲಕ ಆತ್ಮಪ್ರಜ್ಞೆ  ಜಾಗ್ರೃತಗೊಂಡು ಸ್ವಾಸ್ಥ್ಯ ಮನಸ್ಸು ಒಗ್ಗೂಡಿದಾಗ ಆಧ್ಯಾತ್ಮಿಕತೆ ಧಾರ್ಮಿಕತೆಯಂತಹ ಮಹತ್ಕಾರ್ಯಗಳು ನಡೆಯಲು ಸಾಧ್ಯ.  ಆರಾಧ್ಯ ಧಾರ್ಮಿಕ ಕ್ಷೇತ್ರಗಳು ಪುನರ್ ಚೇತನಗೊಳ್ಳಲು ನಮ್ಮ ಧಾರ್ಮಿಕ ನಂಬಿಕೆ ಆಚರಣೆಗಳು, ಆತ್ಮನಿಷ್ಠೆಯಿಂದ ಬೆಳೆಯಬೇಕು. ಸನಾತನ ಧರ್ಮ ಜಾಗೃತಿ,  ಸತ್ಕಾರ್ಯಗಳಿಂದ ದೇವಸ್ಥಾನಗಳ ಅಭಿವೃದ್ಧಿ ಹೊಂದಲು ಸಾಧ್ಯ. ಲೌಕಿಕ ಮತ್ತು ಅಲೌಕಿಕ ಬದುಕಿನಲ್ಲಿ ತನು ಮನ ಮನೆ ಶುದ್ಧೀಕರಣ ಗೊಳ್ಳಲು ಭಕ್ತಿ ಮತ್ತು ಶ್ರದ್ಧೆಯಿಂದ ಅಂತರಂಗದ ಸಂಪತ್ತನ್ನು ಹೆಚ್ಚಿಸಬೇಕು.  ಬದಲಾವಣೆಯ ಕಾಲಘಟ್ಟದಲ್ಲಿ ನಾವು ನಮ್ಮ ಸನಾತನ ಧರ್ಮದ ಪರಂಪರೆ ಸಂಪ್ರದಾಯಗಳನ್ನು ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕರಗತ ನಮ್ಮಲ್ಲಿ ಬೆಳೆಯಬೇಕು   ಎಂದು ಹೇಳಿದ ಅವರು ದೇವಸ್ಥಾನದ ಅಧಿದೇವತೆ ಮಹಿಷಮರ್ದಿನಿ ದೇವಿಗೆ ಸತತ ವಿಧಿವತವಾದ ಪೂಜೆ ಅನುಷ್ಠಾನಗಳು ಪುಣ್ಯಕಾರ್ಯಚರಣೆಗಳಿಂದ ಈ ಸ್ಥಳವು ಹಲವು ಮಹಿಮೆಗಳನ್ನು ದೃಢಕರಿಸಿದ್ದು, ದೈನಂದಿನ ಪೂಜೆ,  ವಾರ್ಷಿಕ ಪೂಜಾ ಮಹೋತ್ಸವ ಹಾಗೂ ನವರಾತ್ರಿ ಪುಣ್ಯ ಪರ್ವಕಾಲದಲ್ಲಿ ಸಾವಿರಾರು ಭಕ್ತರಿಗೆ ಅನ್ನದಾನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನ ವತಿಯಿಂದ ನಿರಂತರವಾಗಿ ಜರಗುತಿದೆ ಎಂದು ಹೇಳಿದರು.

     ಧಾರ್ಮಿಕ ಕಾರ್ಯಕ್ರಮದ ವಿಧಿವಿಧಾನಗಳನ್ನು ಪೂರೈಸಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಆಶೀರ್ವರ್ಚನೆ ನೀಡಿದ ಬ್ರಹ್ಮ ಶ್ರೀ  ಕೊಯ್ಯೂರು ನಂದ ಕುಮಾರ ತಂತ್ರಿ ಮಹಾನವಮಿಯ ನವರಾತ್ರಿಯ ಪರ್ವಕಾಲದಲ್ಲಿ  ದುಷ್ಟ ಸಂಹಾರದ ನಾಶದ ಬಳಿಕ ಪ್ರಥ್ವಿಯಲ್ಲಿ ಧರ್ಮ ಸಂಸ್ಥಾಪನೆಗಾಗಿ ದೇವಿಯು ಮತ್ತೆ ಅವತಾರ ತಾಳುತ್ತಾಳೆ ಮಹಿಷಮರ್ಧಿನಿ ದೇವಸ್ಥಾನದ ಸನ್ನಿಧಿಯಲ್ಲಿ ದೇವಸ್ಥಾನದ ಯಜಮಾನಿಕೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರು ದೇವಿಯನ್ನು ಮಂಡಲ ಮಧ್ಯದಲ್ಲಿ ಆರಾಧಿಸಿ ಅಷ್ಟೋತ್ತರ ನಾಮಾರ್ಚನೆ ಶ್ಲೋಕಗಳ  ಮೂಲಕ ಆರಾಧನೆಯ, ಈ ಪುಣ್ಯ ಕಾಲದಲ್ಲಿ ಭಕ್ತರಿಗೆ ಬರುವ ಕಷ್ಟ ನಷ್ಟ ರೋಗ ರುಜಿನ  ದಿನಗಳು ದೂರವಾಗಿ ಸಮಸ್ತ ಭಕ್ತ ವರ್ಗಕ್ಕೆ ಮತ್ತು ಯಜಮಾನ ಕುಟುಂಬಕ್ಕೆ ಈ ಮಂಗಳ ಕಾರ್ಯದಿಂದ ಸುಖ ಸಮೃದ್ಧಿ ಆರೋಗ್ಯ ಶ್ರೀ ದೇವಿ ಕರುಣಿಸಲಿ ಎಂದು ಆಶೀರ್ವದಿಸಿದ್ದರು 

    ಭಕ್ತರು ತಮ್ಮ ಹರಕೆ ಸಾಮಗ್ರಿಗಳನ್ನು ಹೋಮಕುಂಡ ಮಧ್ಯಮಂಡಲದಲ್ಲಿ ಸಮರ್ಪಿಸಿದರು .  ಪ್ರಸಾದ ವಿತರಣೆ ಬಳಿಕ ಸಾವಿರಾರು ಭಕ್ತರು ಅನ್ನ ಸಂತರ್ಪಣೆಯ ಪ್ರಸಾದ ಸ್ವೀಕರಿಸಿದರು.

      ಈ ವಿಶೇಷ ದಿನದಲ್ಲಿ ದೇವಸ್ಥಾನದಲ್ಲಿ ಸ್ಥಾಪಿಸಲ್ಪಟ್ಟ ಮಹಾ ಗಣಪತಿ ಶ್ರೀ ಆಂಜನೇಯ ಕೊಡಿಮನಿತ್ತಾಯ ದೈವ ಮತ್ತು ನಾಗದೇವರ ಸನ್ನಿಧಿಗೆ ವಿಶೇಷ ಪೂಜೆ ನೆರವೇರಿತು. 

     ಕಾರ್ಯಕ್ರಮದಲ್ಲಿ ಮಹಿಷಮರ್ಧಿನಿ ದೇವಸ್ಥಾನ ಟ್ರಸ್ಟ್ ನ ವಂಶಸ್ಥ ಮೊಕ್ತೇಸರರಾದ ಜಯರಾಜ್ ಶ್ರೀಧರ್ ಶೆಟ್ಟಿ ಡಾ.  ಸ್ವಪ್ನಾ  ಜಯರಾಜ್ ಶೆಟ್ಟಿ ಶ್ರೀಮತಿ ಶಾಲಿನಿ ಪ್ರದೀಪ್ ಶೆಟ್ಟಿ ಮೊಕ್ತೇಸರರಾದ ಜಯಪಾಲಿ ಅಶೋಕ್ ಶೆಟ್ಟಿ , ಅರ್ಚಕವೃಂದ, ಬೆಳ್ಮಣ್ಣು ವೆಂಕಟರಮಣ ತಂತ್ರಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಅಶೋಕ್ ಶೆಟ್ಟಿ, ದೇವಸ್ಥಾನ ಯಜಮಾನತ್ವ ಕುಟುಂಬಸ್ಥರು, ಉದ್ಯಮಿ ಬಾಲಕೃಷ್ಣ ರೈ  ಮಹಿಷಮರ್ಧಿನಿ ಭಜನ ಮಂಡಳಿ ಸದಸ್ಯರು ಬಾಲಕೃಷ್ಣ ರೈ ದಿವಾಕರ ಮಾತ್ರೆ ಮಂಡಪ್ಪ ಎಸ್ ಪಯ್ಯಡೆ ಪದ್ಮನಾಭ ಎಸ್ ಪಯ್ಯಡೆ, ಡಾ. ಪಿ.ವಿ. ಶೆಟ್ಟಿ ಪಯ್ಯಡೆ ಗ್ರೂಪ್ ಆಫ್ ಹೋಟೆಲ್ ಜಗದೀಶ್ ಶೆಟ್ಟಿ ಪ್ರೇಮ್ ನಾಥ್ ಶೆಟ್ಟಿ ಶೋಭಾ ಕುಲಕರ್ಣಿ ಸುಗುಣ ಕಾಮತ್ ನಿಟ್ಟೆ ಎಂ ಜಿ ಶೆಟ್ಟಿ ಕೇಶವ ಪುತ್ರನ್ ರೋಹಿಣಿ ಕೋಟ್ಯಾನ್ ಪುಷ್ಪ ರಾಮಚಂದ್ರ ,ಶೇಖರ್ ರಾವ್ ,ಬಿಲ್ಡರ್ ಸಂತೋಷ್ ರಾಮಚಂದ್ರನ್, ಅಶೋಕ್ ಶೆಟ್ಟಿ, ಗುರುದೇವ ಸೇವಾ ಬಳಗ ಮುಂಬಯಿ ಗೌ. ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ,  ಮತ್ತು ಸದ್ಭಕರು, ಗಣ್ಯರು ಸ್ಥಳೀಯ ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕಲ್ಲಮುಂಡ್ಕೂರು ಹರಿಯಾಳಗುತ್ತು ದಿ. ಶ್ರೀಧರ್ ಶೆಟ್ಟಿ ಅವರ ದೃಢಸಂಕಲ್ಪ ಅವಿರತ ಪ್ರಯತ್ನದಿಂದ ಅಸಾಧಾರಣವಾದ ಕಾರ್ಯವನ್ನು ಸಾಧಿಸಿ ಬೊರಿವಲಿಯ ಸುಂದರ ಪರಿಸರದಲ್ಲಿ ದೇವಸ್ಥಾನವನ್ನು ಸ್ಥಾಪಿಸುವ ಮೂಲಕ ಜನತೆಗೆ ಭಕ್ತಿಯ ಮಾರ್ಗ ತೋರಿಸಿ ಕೃತಾರ್ಥರಾಗಿದ್ದಾರೆ.    

     1990ರಲ್ಲಿ ನಡೆದ ಈ ಶುಭ ಕಾರ್ಯಕ್ಕೆ ಸ್ಥಳೀಯ ಹಾಗೂ ಹೊರ ವಲಯದ ಭಕ್ತರು ಈ ಮಂಗಳ ಕಾರ್ಯಕ್ಕೆ ಸಾಕ್ಷಿಯಾದರು. ಶ್ರೀಧರ್ ಶೆಟ್ಟಿಯವರ ಕುಟುಂಬ ಸಂಸಾರ ಮೊದಲಿನಿಂದಲೂ ದೇವಿ ಭಕ್ತರಾಗಿದ್ದರು. ಕುಟುಂಬ ಬಾಂಧವರು ಈಗಲೂ ದೇವಸ್ಥಾನ ಸರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಇತರರಿಗೆ ಆದರ್ಶಪ್ರಾಯರಾಗಿದ್ದಾರೆ. 

      ಶ್ರೀ ಮಹಿಷ ಮರ್ದಿನಿ ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿಕೊಂಡು ಶರಣಾಗತರಾದರೆ ಭಕ್ತರು ಇಚ್ಛೆಯನ್ನು ಅನುಗ್ರಹಿಸಿದ ಘಟನೆಗಳು ಇಲ್ಲಿ ಸಂಭವಿಸಿದೆ.  ಪ್ರತಿವರ್ಷ ದಸರಾ ಪೂಜೆ, ದೇವಸ್ಥಾನದ ವಾರ್ಷಿಕ ಮಹಾಪೂಜೆ ಸಂಭ್ರಮದಿಂದ ಜರಗುವುದರ ಜೊತೆಗೆ ದೇವಸ್ಥಾನದಲ್ಲಿ ದೈನಂದಿನ ಹೋಮ ಅವನಾದಿಗಳು ಮತ್ತು ಪೂಜೆ ಮಂತ್ರೋಚ್ಚಾರಣೆಗಳು ಪರಿಸರವನ್ನು ಪವಿತ್ರ ಗೊಳಿಸಿ ದೇವಿ ಸಾಕ್ಷಾತ್ಕಾರದ ಆಧ್ಯಾತ್ಮಿಕ ಅನುಭವ ಇಲ್ಲಿ ದೊರೆಯುವುದು. ದೈನಂದಿನ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ಭಜನೆ ನಿರಂತರವಾಗಿ ಜಯಗುವುದರ ಜೊತೆಗೆ ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪನಣೆ ಉದಾತ್ತ ಭಕ್ತರಿಂದ ವಸ್ತು ರೂಪ ಹಾಗೂ ಧನಸಾಯ ಮಾಡುವ ಭಕ್ತ ಸಂಕುಲ ಈ ದೇವಸ್ಥಾನದಲ್ಲಿ ಆಗಮಿಸಿ ಭಕ್ತಿ ಪರವಶರಾಗುತ್ತಾರೆ. ಪ್ರಸಕ್ತ ಆಡಳಿತ ಮೊಕ್ತೇಸರರಾದ ಪ್ರದೀಪ್ ಸಿ ಶೆಟ್ಟಿ ಯವರು ತಮ್ಮನ್ನು ದೇವಿಯ ಸೇವೆಯಲ್ಲಿ ಜೊತೆಗೆ ಸಮಾಜ ಸೇವೆಯಲ್ಲಿ ಕಳುಹಿಸಿಕೊಂಡಿದ್ದಾರೆ

Related posts

ಮೀರಾ- ಬಾಯಂದರ್ ನ  ರೈ  ಸುಮತಿ  ಎಜ್ಯುಕೇಶನ್ ಟ್ರಸ್ಟ್(ರಿ)   ನ ಸೈಂಟ್  ಆಗ್ನೆಸ್ ಇಂಗ್ಲಿಷ್ ಹೈ ಸ್ಕೂಲ್ ಗೆ  100% ಫಲಿತಾಂಶ.

Mumbai News Desk

ಸದ್ಗುರು ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟಿನ ಮೀರಾರೋಡ್ ಉಪಾಸನಾ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ.

Mumbai News Desk

ಕರ್ನಾಟಕ ಸಂಘ ಕಲ್ಯಾಣ:ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಹಾಗೂ 22ನೇಯ ವಾರ್ಷಿಕೋತ್ಸವ

Mumbai News Desk

ಬಂಟರ ಸಂಘ ಮುಂಬಯಿ, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿವೇತನ,   ಆರ್ಥಿಕ ನೆರವು ವಿತರಣೆ,

Mumbai News Desk

ಆರೋಹಿ(ಖುಷಿ )ಶಿವ ಪ್ರಸಾದ ಪೂಜಾರಿಗೆ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಬಂಗಾರದ ಪದಕ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಿಯಾನ್ ಸತೀಶ್ ಕೋಟ್ಯಾನ್ ಗೆ ಶೇ 94.20 ಅಂಕ.

Mumbai News Desk