23.5 C
Karnataka
April 4, 2025
ಮುಂಬಯಿ

ಆಸರೆ ಸೇವಾ ಮಿತ್ರ ಬಳಗ ವಸಯಿ : ಇದರ ಉದ್ಘಾಟನಾ ಕಾರ್ಯಕ್ರಮ, ಮಕ್ಕಳ ಯಕ್ಷಗಾನ




ಜನಪರ ಕಾರ್ಯಗಳ ಮೂಲಕ ಸಂಸ್ಥೆ ಬೆಳಗಲಿ – ಉದ್ಯಮಿ ರತ್ನಾಕರ್ ಶೆಟ್ಟಿ


ಆಸರೆ ಸೇವಾ ಮಿತ್ರ ಬಳಗ ವಸಯಿ ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ರಾಮಾಂಜನೇಯ ಯಕ್ಷ ನಾಟ್ಯಾಲಯ ಅಂಗರಗುಡ್ಡೆ ಕೆಂಚನಕರೆ, ಮುಲ್ಕಿ ಇವರ ಕದಂಬ ಕೌಶಿಕಿ ಎಂಬ ಮಕ್ಕಳ ಯಕ್ಷಗಾನ ಪ್ರದರ್ಶನವು ತಾ 13-10-24ರಂದು ವಿರಾರ್ ಪೂರ್ವದ ಹೋಟೆಲ್ ಲೀ ವಿವಂತ ಇದರ ಜ್ಯುಪಿಟರ್ ಸಭಾಗ್ರಹದಲ್ಲಿ ನಡೆಯಿತು.
ಸಂಸ್ಥೆಯ ಉದ್ಘಾಟನೆಯನ್ನು ಉದ್ಯಮಿ ರತ್ನಾಕರ್ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಸಂಘಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ಈ ಸಂಸ್ಥೆ ಜನಪರ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆಯಾಗಿರುವುದರಿಂದ ಮುಂದೆ ಈ ಸಂಸ್ಥೆಯ ಮುಖಾಂತರ ಅನೇಕ ಉತ್ತಮ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ. ಇವರ ಈ ಸಮಾಜಪರ ಕಾರ್ಯಗಳಿಗೆ ಸದಾ ನನ್ನ ಬೆಂಬಲಿವಿದೆ” ಎಂದು ಶುಭ ಹಾರೈಸಿದರು.


ಪ್ರಸ್ತಾವಿಕ ಭಾಷಣವನ್ನು ಮಾಡಿದ ಸಂಸ್ಥೆಯ ನೇತಾರ ಸತೀಶ್ ಶೆಟ್ಟಿ ಕೆಂಚನಕೆರೆಯವರು ಎಲ್ಲರನ್ನೂ ಸ್ವಾಗತಿಸಿ, ಸಂಘದ ಉದ್ದೇಶ ಮತ್ತು ಮುಂದಿನ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಿ, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸರ್ವರಿಗೂ ಧನ್ಯವಾದ ಅರ್ಪಿಸಿದರು.
ಮುಖ್ಯ ಅತಿಥಿ ಉದ್ಯಮಿ, ಯಕ್ಷಗಾನ ಕಲಾವಿದ ಶಂಕರ್ ಆಳ್ವಾ ಕರ್ನೂರು ಅವರು “ಮನುಷ್ಯ ಎಲ್ಲೇ ಇದ್ದರೂ ತಾನು ಹುಟ್ಟಿ ಬೆಳೆದ ಊರು ಮತ್ತು ಕರ್ಮ ಭೂಮಿಯನ್ನು ಎಂದು ಮರೆಯಬಾರದು. ಸತೀಶ್ ಶೆಟ್ಟಿ ಕೆಂಚನಕೆರೆ ಎರಡನ್ನು ನೆನಪಿಸುವ ಕೆಲಸವನ್ನು ಈ ಕಾರ್ಯಕ್ರಮದ ಮೂಲಕ ಮುಂಬೈಯಲ್ಲಿ ಮಾಡಿದ್ದಾರೆ. ಊರಿನ ಮಕ್ಕಳ ಯಕ್ಷಗಾನ ಕಲಾವಿದರನ್ನು ಮುಂಬೈಗೆ ತರಿಸಿ ಕಲೆಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದಾರೆ. ಕಲಾವಿದರಾದ ಮಕ್ಕಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಿ ಜನಸೇವೆಗೆ ನಾಂದಿ ಹಾಡಿದ್ದಾರೆ, ಮುಂದೆಯೂ ಇಂಥ ಜನ ಸೇವಾ ಕಾರ್ಯಗಳು ಈ ಸಂಸ್ಥೆ ಮುಖಾಂತರ ನಡೆಯಲಿ” ಎಂದು ಶುಭ ಹಾರೈಸಿದರು.


ಕರ್ನಾಟಕ ಸಂಘ ವಸಾಯಿ ಇದರ ಅಧ್ಯಕ್ಷರಾದ ಉದ್ಯಮಿ ಪಾಂಡು ಶೆಟ್ಟಿ ಅವರು ಮಾತನಾಡುತ್ತಾ “ಜೀವದಾನಿ ಮಂದಿರದ ಸನ್ನಿಧಿಯಲ್ಲಿ ದಸರಾದ ಈ ಸಂದರ್ಭದಲ್ಲಿ ಕದಂಬ ಕೌಶಿಕೆ ಎಂಬ ದೇವಿಯ ಪುಣ್ಯ ಕಥೆಯನ್ನು ಯಕ್ಷಗಾನ ರೂಪದಲ್ಲಿ ಪ್ರದರ್ಶನ ನೀಡಿ ಜನಮನ ರಂಜಿಸಿದ್ದಾರೆ. ಇಂತಹ ಕಾರ್ಯಕ್ರಮದ ಮೂಲಕ ನಮ್ಮ ಸನಾತನ ಸಂಸ್ಕೃತಿ ಉಳಿಯಲು ಕಾರಣವಾಗುತ್ತದೆ, ಸಂಸ್ಥೆಯಿಂದ ಮತ್ತಷ್ಟು ಜನಪರ ಸೇವೆಗಳು ನಡೆಯುತ್ತಿರಲಿ” ಎಂದರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಸಾಹಿತಿ, ಯಕ್ಷಗಾನ ಪ್ರಸಂಗ ಕರ್ತ ಕೊಲ್ಯಾರು ರಾಜು ಶೆಟ್ಟಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿಗಳಾದ ಪ್ರದೀಪ್ ಶೆಟ್ಟಿ, ಶಂಕರ್ ಭಂಡಾರಿ, ಸುಂದರ್ ಪೂಜಾರಿ, ಜಿತೇಶ್ ಆಚಾರ್ಯ, ಗಣೇಶ್ ಆಚಾರ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ಊರಿನಿಂದ ಬಂದ ಎಲ್ಲ ಬಾಲಕಲಾವಿದರನ್ನು ಗೌರವಿಸಿ, ಯಕ್ಷ ಗುರುಗಳಾದ ಹರಿರಾಜ್ ಶೆಟ್ಟಿಗಾರ್ ಕಿನ್ನಿಗೋಳಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಮನೋರಂಜನ ಕಾರ್ಯಕ್ರಮದ ಅಂಗವಾಗಿ ರಾಮಾಂಜನೇಯ ಯಕ್ಷ ನಾಟ್ಯಲಯ ಅಂಗರಗುಡ್ಡೆ ಕೆಂಚನಕೆರೆ, ಮುಲ್ಕಿ ತಂಡದ ಮಕ್ಕಳಿಂದ ಕದಂಬ ಕೌಶಿಕೆ ಎಂಬ ಯಕ್ಷಗಾನ ಪ್ರದರ್ಶನ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮವನ್ನು ಕಲಾಸಂಘಟಕ ಪ್ರವೀಣ್ ಶೆಟ್ಟಿ ಕಣಂಜಾರು ನಿರೂಪಿಸಿದರು.

Related posts

ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್ ಮುಂಬಯಿ, 41 ನೇ ವಾರ್ಷಿಕ ಮಹಾಪೂಜೆ, ಇರುಮುಡಿ ಸೇವೆ ಸಂಪನ್ನ

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk

ಮಲಾಡ್ ಗೋವಿಂದ್ ನಗರ್ ದ ಶ್ರೀ ಅಂಬಿಕಾ  ಮಂದಿರದಲ್ಲಿ ಭಕ್ತಿ ಸಂಭ್ರಮದ ದಸರಾ ಮಹೋತ್ಸವ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಶ್ರೀಶ ಕುಶಾಲಪ್ಪ ಮೂಲ್ಯ ಗೆ ಶೇ 93.60 ಅಂಕ.

Mumbai News Desk

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ಅರಸಿನ ಕುಂಕುಮ,

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk