
ಜಯ ಸುವರ್ಣರ ಬದುಕು ಯುವ ಸಮುದಾಯಕ್ಕೆ ಆದರ್ಶ: ಎಚ್ ಶಿವರಾಮ್.
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಅ21. ಬಿಲ್ಲವ ಸಮಾಜದ ಹಿರಿಯ ಮುಖಂಡ, ಬಿಲ್ಲವರ ಅಸೋಸಿಯೇಷನ್ ಮುಂಬೈಯ ಮಾಜಿ ಅಧ್ಯಕ್ಷ , ಬಿಲ್ಲವರ ಮಹಾಮಂಡಳದ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕಿನ ಅಭಿವೃದ್ಧಿಯ ರೂವಾರಿ ದಿವಂಗತ ಜಯ ಸಿ ಸುವರ್ಣ ರ ನಾಲ್ಕನೇ ವರ್ಷದ ಪುಣ್ಯಸಂಸ್ಮರಣ ಕಾರ್ಯಕ್ರಮ ಅಕ್ಟೋಬರ್ 21ರಂದು ಗೊರೇಗಾಂವ್ ಪೂರ್ವದ ಅವರ ನಿವಾಸದಲ್ಲಿ ನಡೆಯಿತು.
ದಿ. ಜಯ ಸಿ ಸುವರ್ಣರ ಹಿರಿಯ ಸುಪುತ್ರ ಸೂರ್ಯಕಾಂತ್ ಜಯ ಸುವರ್ಣ ದಂಪತಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಪ್ರಜ್ವಲಿಸಿದರು .ಬಳಿಕ ಸುಭಾಷ್ ಜಯ ಸುವರ್ಣ ದಂಪತಿ, ದಿನೇಶ್ ಜಯ ಸುವರ್ಣ ದಂಪತಿ, ಯೋಗೀಶ್ ಜಯ ಸುವರ್ಣ ದಂಪತಿ,ಕುಟುಂಬಸ್ಥರಾದ ರಾಮ ಸುವರ್ಣ, ಎಚ್ ಶಿವರಾಮ್., ರವಿ ಎಂ ಸುವರ್ಣ, ಭಾಸ್ಕರ್ ಎಂ ಸುವರ್ಣ, ಹರೀಶ್ ಸೂರು ಪೂಜಾರಿ ವಡಾಲ
ಮತ್ತಿತರರು ಪುಷ್ಪ ನಮನವನ್ನು ಸಲ್ಲಿಸಿದರು.

ಜಯ ಸುವರ್ಣರ ಬಗ್ಗೆ ಅವರ ಕುಟುಂಬಿಕರಾಗಿರುವ ಎಚ್ ಶಿವರಾಮ್ ಮಾತನಾಡಿ ಜಯ ಸಿ. ಸುವರ್ಣರು ತನ್ನ ನಿಸ್ವಾರ್ಥ ಸಮಾಜ ಸೇವೆಯಿಂದ, ಸಮಾಜ ಬಾಂಧವರ ಹಾಗೂ ಅಭಿಮಾನಿಗಳ ಎಲ್ಲರ ಪ್ರೀತಿಗೆ ಪಾತ್ರರಾದವರು, ತನ್ನ ಸಮಾಜ ಸೇವೆಯಲ್ಲಿ ಯಶಸ್ವಿಯನ್ನು ಸಾಧಿಸಿದರು. ಕುಟುಂಬವನ್ನು ಹಿತೈಷಿಗಳನ್ನು ಮತ್ತು ಸಮಾಜವನ್ನು ಬಹಳಷ್ಟು ಪ್ರೀತಿಸಿದವರು. ಮುಂಬೈಯಲ್ಲಿ ಬಿಲ್ಲವ ಸಮಾಜವನ್ನು ಬಲಿಷ್ಠ ಗೊಳಿಸುವಲ್ಲಿ ಅವರ ಕೊಡುಗೆ ಅಪಾರವಾದದ್ದು. ಭಾರತ್ ಬ್ಯಾಂಕ್ ಅಭಿವೃದ್ಧಿಗೆ ಯೋಗದಾನ ಮಾಡಿದವರು. ಜಿಲ್ಲೆಯ ಬಿಲ್ಲವ ಸಮಾಜಕ್ಕೆ ಮತ್ತು ವಿವಿಧ ಸಂಘ-ಸಂಸ್ಥೆಗಳಿಗೆ ಬಹಳಷ್ಟು ದಾನ ನೀಡಿದ ಮಹಾದಾನಿಯಾಗಿರುವವರು, ಅವರು ಬದುಕು ಯುವ ಪೀಳಿಗೆಗೆ ಆದರ್ಶವಾಗಿದೆ ಎಂದು ನುಡಿದರು.

ಬಿಲ್ಲವ ಸಮಾಜದ ಮುಖಂಡರಾದ ಹಿರಿಯ ರಾಜಕಾರಣಿ ಲಕ್ಷ್ಮಣ್ ಸಿ ಪೂಜಾರಿ , ಬಿಲ್ಲವರ ಅಸೋಷಿಯೇಶನ್ ನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಎಸ್ ಪೂಜಾರಿ, ನಿತ್ಯಾನಂದ ಕೋಟ್ಯಾನ್, ಭಾರತ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ನ್ಯಾ. ಸೋಮನಾಥ್ ಅಮೀನ್, ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ ಪೂಜಾರಿ, ನಾರಾಯಣ ಸುವರ್ಣ ಕಲ್ವ, ಮೋಹನ್ ದಾಸ್ ಜಿ ಪೂಜಾರಿ. ಸಂತೋಷ್ ಕೆ ಪೂಜಾರಿ, ಸುರೇಶ್ ಬಿ ಸುವರ್ಣ, ನರೇಶ್ ಕೆ ಪೂಜಾರಿ, ಗಣೇಶ್ ಡಿ ಪೂಜಾರಿ, ನಿರಂಜನ್ ಎಲ್ ಪೂಜಾರಿ, ಹಾಗೂ ಸದಾಶಿವ ಕರ್ಕೇರಝೆಡ್ ಅಶೋಕ್ ಕೋಟ್ಯಾನ್ ಥಾಣೆ, ಸಬಿತ ಜಿ ಪೂಜಾರಿ, ಭಾರತ್ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾನಂದ ಎಸ್ ಕರ್ಕೇರ, ಜಂಟಿ ಆಡಳಿತ ನಿರ್ದೇಶಕ , ದಿನೇಶ್ ಬಿ ಸಾಲ್ಯಾನ್ ಉಪಸ್ಥಿತರಿದ್ದರು.