April 2, 2025
ಪ್ರಕಟಣೆ

ಕರ್ನಾಟಕ ಸಂಘ ಡೊಂಬಿವಲಿ: ಅಕ್ಟೋಬರ್ 27ರಂದು 57 ನೇ ವಾರ್ಷಿಕ ಮಹಾಸಭೆ.   

               

  ಮುಂಬಯಿ ಹಾಗೂ ಉಪನಗರಗಳಲ್ಲಿಯ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಎಂಬ ಹೆಗ್ಗಳಿಕೆ ಗೆ ಪಾತ್ರವಾದ ಕರ್ನಾಟಕ ಡೊಂಬಿವಲಿಯ 57ನೇಯ ವಾರ್ಷಿಕ ಮಹಾ ಸಭೆ ಅಕ್ಟೋಬರ್ 27ರಂದು  ರವಿವಾರ ಸಂಜೆ 4-30ಕ್ಕೆ ಡೊಂಬಿವಲಿ ಪೂರ್ವದ ಗೋಪಾಲ್ ನಗರ ಪರಿಸರದ ಮಂಜುನಾಥ್ ವಿಧ್ಯಾಲಯದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಸುಕುಮಾರ ಎನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಮಹಾ ಸಭೆಯ ನಿಗದಿತ ಸಮಯದಲ್ಲಿ ಸಭೆಗೆ ಅವಶ್ಯಕ ಸದಸ್ಯರ ಸಂಖ್ಯೆ ಕಡಿಮೆ ಇದ್ದರೆ ಅರ್ಧ ಗಂಟೆಯ ವರೆಗೆ ಸಭೆಯನ್ನು ಮುಂದೂಡಿ ನಂತರ ಅದೆ ಸ್ಥಳದಲ್ಲಿ ಮಹಾಸಭೆ ನಡೆಯಲಿದ್ದು, ಲೇಖ್ಖ ಪತ್ರ ಪರಿಶೋಧಕರ ಹೇಳಿಕೆಯ ಕುರಿತು ಸದಸ್ಯರಿಗೆ ಯಾವದೇ ಅನುಮಾನ , ಪ್ರಶ್ನೆ, ಸಲಹೆ ಸೂಚನೆಗಳು ಇದ್ದರೆ  ವಾರ್ಷಿಕ ಮಹಾಸಭೆಯ ಕನಿಷ್ಟ ಮೂರು ದಿನಗಳ ಮುಂಚಿತವಾಗಿ ಸಂಘದ ಗೌ.ಕಾರ್ಯದರ್ಶಿ ಅಥವಾ ಸಂಘದ ಮುಖ್ಯಾಲಯದಲ್ಲಿ ಸಾಯಂಕಾಲ 6ರಿಂದ ರಾತ್ರಿ 8ರ ವರೆಗೆ ಲಿಖಿತ ರೂಪದಲ್ಲಿ ತಿಳಿಸಬಹದಾಗಿದೆ ಅಲ್ಲದೆ ಸಂಘದ ವಾರ್ಷಿಕ ಮಹಾ ಸಭೆಗೆ ಬರುವಾಗ ಪ್ರತಿಯೋಬ್ಬ ಸದಸ್ಯರು 2023-2024 ನೇ ಸಾಲಿನ ವಾರ್ಷಿಕ ವರದಿಯನ್ನು ತರಬೇಕೆಂದು ಸಂಘದ ಗೌ ಕಾರ್ಯದರ್ಶಿ ಪ್ರೋ ಅಜೀತ ಉಮರಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.                                             

   ಮಹಾಸಭೆಯ 2023-2024 ನೇಯ ಸಾಲಿನ   ವಾರ್ಷಿಕ ವರದಿಯನ್ನು ಈಗಾಗಲೇ ಸರ್ವ ಸದಸ್ಯರಿಗೆ ಕೋರಿಯರ್ ಮುಖಾಂತರ ಕಳುಹಿಸಲಾಗಿದ್ದು,ಒಂದು ವೇಳೆ ತಲುಪದೆ ಇದ್ದಲ್ಲಿ ವಸಂತ  ಚೆಂಬರ್ಸ   ,ಎರಡನೇಯ ಮಹಡಿ ಘನಶ್ಯಾಮ ಗುಪ್ತೆ ಡೊಂಬಿವಲಿ  ಪಶ್ಚಿಮದ ಸಂಘದ ಮುಖ್ಯಾಲಯದಲ್ಲಿ ಮಧ್ಯಾಹ್ನ 1ರಿಂದ ರಾತ್ರಿ 8ರವರೆಗೆ ಸಂಪರ್ಕಿಸಿ ಪಡೆಯಬಹುದಾಗಿದೆ.                                               

  ಈ ಮಹತ್ವದ ವಾರ್ಷಿಕ ಮಹಾ ಸಭೆಗೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ತಿತರಿದ್ದು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ವಾರ್ಷಿಕ ಮಹಾ ಸಭೆಯನ್ನು ಯಶಸ್ವಿ ಗೋಳಿಸಬೇಕೆಂದು ಸಂಘದ ಕಾರ್ಯಾಧ್ಯಕ್ಷ ಡಾ ಇಂದ್ರಾಳಿ ದಿವಾಕರ ಶೆಟ್ಟಿ,ಗೌ.ಪ್ರಧಾನ ಕಾರ್ಯದರ್ಶಿ ಪ್ರೋ ಅಜೀತ ಉಮರಾಣಿ ಹಾಗೂ ಕೋಶಾಧಿಕಾರಿ ತಾರಾನಾಥ ಎಸ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Related posts

ಶ್ರೀ ದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ ವಿರಾರ್ , ಜು 7:ಯಕ್ಷಗಾನ ತರಬೇತಿ ಶಿಬಿರದ ಮುಹೂರ್ತ.

Mumbai News Desk

ಮಾ.8. ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಆಚರಣೆ

Mumbai News Desk

ಜೀವ ರಕ್ಷಕ, ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ 10ನೇ ಮೂಲತ್ವ ವಿಶ್ವ ಪ್ರಶಸ್ತಿ 2024

Mumbai News Desk

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್, ಡಿ.22ರಂದು 30ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ, ಅನ್ನಸಂತರ್ಪಣೆ, ಗುರುವಂದನೆ,

Mumbai News Desk

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ನ. 8-9, ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಡೊಂಬಿವಲಿ66ನೇ ವಾರ್ಷಿಕ ಮಂಗಳೋತ್ಸವ

Mumbai News Desk