July 23, 2026
Mumbai News Kannada
ಪ್ರಕಟಣೆ

ನ.29 ರಂದು ಮುಂಬಯಿ ವಿವಿಯ ಕನ್ನಡ ವಿಭಾಗದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭ







ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

​ದಿನಾಂಕ 29-11-2025, ಶನಿವಾರದಂದು, ಅಪರಾಹ್ನ 2.30 ರಿಂದ, ಸಾಂತಾಕ್ರೂಜ್ ಪೂರ್ವದಲ್ಲಿರುವ ಕಲೀನಾ ಕ್ಯಾಂಪಸ್‌ನ ಜೆ.ಪಿ.ನಾಯಕ್ ಭವನದಲ್ಲಿ ಈ ಸಮಾರಂಭ ನಡೆಯಲಿದೆ.

​ಸಮಾರಂಭದಲ್ಲಿ ಲೇಖಕ ಶ್ರೀನಿವಾಸ ಜೋಕಟ್ಟೆ ಅವರ ಮೂರು ಕೃತಿಗಳು ಮತ್ತು ಅನಿತಾ ಪಿ. ತಾಕೊಡೆ ಅವರ ಒಂದು ಕೃತಿ ಲೋಕಾರ್ಪಣೆಗೊಳ್ಳಲಿವೆ.

​ಬಿಡುಗಡೆಗೊಳ್ಳಲಿರುವ ಕೃತಿಗಳ ವಿವರ:

  1. “ಅದೆಲ್ಲಾ ಬಿಟ್ಟು” (ಕತೆಗಳು – ಸಾಹಿತ್ಯ ಸುಗ್ಗಿ ಪ್ರಕಾಶನ, ಬೆಂಗಳೂರು) – ಶ್ರೀನಿವಾಸ ಜೋಕಟ್ಟೆ
  2. “ಪ್ರಚಂಡ ಮತ್ತು ಮಹಾಕಾಲ” (ಲೇಖನಗಳು) – ಶ್ರೀನಿವಾಸ ಜೋಕಟ್ಟೆ
  3. “ಬದುಕು ಬತ್ತದ ಭರವಸೆ” (ಲೇಖನಗಳು – ಶ್ರೀರಾಮ ಪ್ರಕಾಶನ, ಮಂಡ್ಯ) – ಶ್ರೀನಿವಾಸ ಜೋಕಟ್ಟೆ
  4. “ಮೇಣಕ್ಕಂಟಿದ ಬತ್ತಿ” (ತಾಕೊಡೆ ಎಂಟರ್ ಪ್ರೈಸಸ್, ಮುಂಬಯಿ) – ಅನಿತಾ ಪಿ. ತಾಕೊಡೆ (ಈ ಕೃತಿಯು ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ವಿಜೇತವಾಗಿದೆ.)

​ಕಾರ್ಯಕ್ರಮದ ವಿವರ:

  • ಅಧ್ಯಕ್ಷತೆ: ಡಾ. ಜಿ.ಎನ್. ಉಪಾಧ್ಯ (ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು)
  • ಕೃತಿಗಳ ಬಿಡುಗಡೆ:
    • ​ಸೂರ್ಯಕಾಂತ್ ಜಯ ಸುವರ್ಣ (ಕಾರ್ಯಾಧ್ಯಕ್ಷರು: ಭಾರತ್ ಬ್ಯಾಂಕ್, ಅಧ್ಯಕ್ಷರು: ರಾಷ್ಟ್ರೀಯ ಬಿಲ್ಲವ ಮಹಾಮಂಡಲ)
    • ​ಮಿತ್ರಾ ವೆಂಕಟ್ರಾಜ್ (ಪ್ರಶಸ್ತಿ ಪುರಸ್ಕೃತ ಕತೆಗಾರರು, ಕಾದಂಬರಿಕಾರರು)
    • ​ವಿಕ್ರಾಂತ್ ಎಸ್. ಉರ್ವಲ್ (ಆಡಳಿತ ನಿರ್ದೇಶಕರು: ಐಐಟಿಸಿ ಮುಂಬಯಿ)
  • ಕೃತಿಗಳ ಪರಿಚಯ:
    • ​ಡಾ| ದಿನೇಶ್ ಶೆಟ್ಟಿ ರೆಂಜಾಳ (ಪತ್ರಕರ್ತರು, ಉದಯವಾಣಿ – ಮುಂಬಯಿ)
    • ​ಅಮಿತಾ ಭಾಗ್ವತ್ (ಸಾಹಿತಿ, ‘ಹವ್ಯಕ ಸಂದೇಶ’ದ ಮಾಜಿ ಸಂಪಾದಕರು)
  • ಪ್ರಾಸ್ತಾವಿಕ: ಸರಿತಾ ಸುರೇಶ ನಾಯಕ್ (ಉಪಾಧ್ಯಕ್ಷರು: ಗೋರೆಗಾಂವ್ ಕರ್ನಾಟಕ ಸಂಘ)
  • ಕಾರ್ಯಕ್ರಮ ನಿರ್ವಹಣೆ: ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ (ಸಹಪ್ರಾಧ್ಯಾಪಕರು, ಕನ್ನಡ ವಿಭಾಗ ಮುಂಬಯಿ ವಿ.ವಿ.)

​ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಪದಾಧಿಕಾರಿಗಳು ಎಲ್ಲಾ ಪುಸ್ತಕ ಪ್ರೇಮಿಗಳಿಗೆ ಈ ಸಮಾರಂಭಕ್ಕೆ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.



Related posts

ದೊಡ್ಡಣ್ಣ ಗುಡ್ಡೆಯ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ

Mumbai News Desk

ಆಗಸ್ಟ್ 22 ರಂದು ಭಾರತ್ ಬ್ಯಾಂಕಿನ 49ನೇ ವಾರ್ಷಿಕ ಮಹಾಸಭೆ

Mumbai News Desk

ಜ  5 :  ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತ ಸಮಿತಿ,   47ನೇ ವಾರ್ಷಿಕ ಶ್ರೀ ಅಯ್ಯಪ್ಪ  ಮಹಾಪೂಜೆ

Mumbai News Desk

ಎ. 14ರಂದು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ ಇಲ್ಲಿ ಶ್ರೀ ಶನಿ ಗ್ರಂಥ ಪಾರಾಯಣ, ಶ್ರೀ ಸತ್ಯನಾರಾಯಣ ಮಹಾಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು.

Mumbai News Desk

ಜುಲೈ 12-ರಂದು ಅಂಧೇರಿ ಮೊಗವೀರ ಭವನದಲ್ಲಿ “ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ

Mumbai News Desk

ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನ, ಕಿಲ್ಪಾಡಿ, ಮೂಲ್ಕಿ : ಫೆ. 7ಕ್ಕೆ. ಸಿರಿಸಿಂಗಾರದ ನೇಮೋತ್ಸವ

Mumbai News Desk