
ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಪುಣ್ಯ ಕಟ್ಟಿಕೊಳ್ಳೋಣ– ಪ್ರವೀಣ್ ಬಿ. ಶೆಟ್ಟಿ
ಮುಂಬಯಿ ಅ15: ಶ್ರೀ ದತ್ತಾತ್ರೇಯ ದುರ್ಗಾಂಭಿಕಾ ದೇವಸ್ಥಾನದಲ್ಲಿ ನನ್ನ ಸುಪುತ್ರಿಯೊಂದಿಗೆ ಅಗಮಿಸಿ ನಾನು ಪ್ರಾರ್ಥನೆಯನ್ನು ಸಲ್ಲಿಸಿದ್ದೆ. ಈಗ ಹಲವಾರು ವರ್ಷದ ನಂತರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೇನೆ. ದೇವಸ್ಥಾನದ ಕಾರ್ಯಕ್ರಮಗಳನ್ನು ಪತ್ರಿಕೆಯ ಮೂಲಕ ನಾನು ಗಮನಿಸುತ್ತಿರುವೆ ಮುಂಬಯಿಯ ಹೃದಯ ಭಾಗದ ಘಾಟ್ಕೋಪರ್ ಅಸಲ್ಪದಂತ ಸ್ಥಳದಲ್ಲಿ ಕನ್ನಡಿಗರ ಭವ್ಯವಾದ ದೇವಸ್ಥಾನ ಕಂಡು ಸಂತೋಷವಾಗಿದೆ. ದೇವರ ಕೃಪೆಯಿಂದ ನವರಾತ್ರಿಯ ಸಂದರ್ಭ ದೇವರ ದರ್ಶನ ಪಡೆಯುವ ಯೋಗ ಅದರೊಂದಿಗೆ ಅಮ್ಮನ ದೇವಸ್ಥಾನದ ಜೀರ್ಣೋದ್ಧಾರದ ಕರ ಪತ್ರ ಹಾಗೂ ಶಿಲಾ ಸೇವೆಯ ರಶೀದಿ ಪುಸ್ತಕ ನನ್ನ ಕೈಯಲ್ಲಿ ಬಿಡುಗಡೆಮಾಡುವಂತ ಬಾಗ್ಯ ಸಿಕಿತು ಇಂತಹ ಪುಣ್ಯ ಕಾರ್ಯದಿಂದ ನಾನು ಧನ್ಯನಾದೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನನ್ನ ವ್ಯಕ್ತಿಕ ಶಿಲಾ ಸೇವೆಯನ್ನು ನೀಡುತೇನೆ ಹಾಗೂ ಭಂಟರ ಸಂಘದ ಸಂಪೂರ್ಣ ಸಹಕಾರವನ್ನು ನೀಡುತೇನೆ, ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಪುಣ್ಯ ಕಟ್ಟಿಕೊಳ್ಳೊಣ ಎಂದು ಬಂಟರ ಸಂಘ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು.
ಅವರು ಶ್ರೀ ಕ್ಷೇತ್ರ ಅಸಲ್ಪಾ ಶ್ರೀ ದತ್ತಾತ್ರೇಯ ದುರ್ಗಾಂಭಿಕಾ ಭಜನಾ ಮಂಡಳಿ ಸಂಚಾಲಿತ ಶ್ರೀ ದತ್ತಾತ್ರೇಯ ದುರ್ಗಾಂಭಿಕಾ ದೇವಸ್ಥಾನದ ಜೀರ್ಣೋದ್ಧಾರದ ಕರಪತ್ರ ಹಾಗೂ ಶಿಲಾ ಸೇವೆಯ ರಶೀದಿ ಪುಸ್ತಕವನ್ನು ಬಿಡುಗಡೆ ಮಾಡುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಶ್ರೀ ದತ್ತಾತ್ರೇಯ ಭಜನಾ ಮಂಡಳಿಯ ಅಧ್ಯಕ್ಷರಾದ ಧರ್ಮದರ್ಶಿ ದೇವು ಪೂಜಾರಿ ಮಾತನಾಡುತ್ತಾ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಕರ ಪತ್ರ ಹಾಗೂ ಶೀಲ ಸೇವೆಯ ರಶೀದಿ ಪುಸ್ತಕವನ್ನು ಬಿಡುಗಡೆಗೊಳಿಸಿ ತಮ್ಮ ವಯಕ್ತಿಕ ಶೀಲ ಸೇವೆಯನ್ನು ನೀಡಿ ಧನ ಸಂಗ್ರಹಕ್ಕೆ ಚಾಲನೆಯನ್ನು ದೈವ ಭಕ್ತರಾದ ಭಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿಯವರು ನೀಡಿದಾರೆ ಮುಂಬಯಿಯ ಎಲ್ಲಾ ದುರ್ಗೆಯ ಭಕ್ತರು ಈ ಭವ್ಯ ದೇಗುಲದ ನಿರ್ಮಾಣಕೆ ಕೈ ಜೋಡಿಸಿ ಕನಿಷ್ಠ ಪಕ್ಷ ಹತ್ತು ಶಿಲೆಯನ್ನು ನೀಡಿ ಭವ್ಯ ದೇವಸ್ಥಾನ ನಿರ್ಮಾಣ ಹಾಗೂ ದೇವರ ಕೃಪೆಗೆ ಪಾತ್ರರಾಗಬೇಕು ಜನವರಿ ತಿಂಗಳಲ್ಲಿ ದೇವಸ್ಥಾನದ ವಜ್ರ ಮಹೋತ್ಸವ ವರ್ಷ, 60 ನೇ ವಾರ್ಷಿಕ ಉತ್ಸವ ನಡೆದ ನಂತರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಮಾಡುವ ಯೋಜನೆಯನ್ನು ಹಮ್ಮಿ ಕೊಂಡಿದೇವೆ ಈ ಕಾರ್ಯಕ್ಕೆ ನಿಮ್ಮೆಲರ ಸಹಕಾರವನ್ನು ಬಯಸುತೇವೆ ಎಂದರು
ಗಣೇಶ್ ಅಮೀನ್ ಪಾಂಗಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
ವೇದಿಕೆಯಲ್ಲಿ ಧರ್ಮದರ್ಶಿ ದೇವ್ ಪೂಜಾರಿ, ಪ್ರವೀಣ್ ಶೆಟ್ಟಿ , ಶಿವಪ್ಪ ಪೂಜಾರಿ, ಜಗದೀಶ್ ಭಟ್ , ಭವಾನಿ ಮೊಹಿಲಿ ಉಪಸ್ಥಿತರಿದ್ದರು.