
ಸನಾತನ ಸಂಸ್ಕೃತಿ ಯಕ್ಷಗಾನದಿಂದ ಉಳಿದಿದೆ – ಡಾ. ದಿವಾಕರ ಶೆಟ್ಟಿ ಇಂದ್ರಾಳಿ
ಚಿತ್ರ ವರದಿ ರವಿ .ಬಿ.ಅಂಚನ್ ಪಡುಬಿದ್ರಿ
ಕಲ್ಯಾಣ್ ಅ. 22: ಕರಾವಳಿ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನ, ನಮ್ಮ ಸನಾತನ ಸಂಸ್ಕೃತಿ ಯಕ್ಷಗಾನದಿಂದ ಉಳಿದಿದೆ ಎನ್ನಲು ಅಭಿಮಾನವಾಗುತ್ತಿದೆ. ಸುಧೀರ್ ಶೆಟ್ಟಿಯವರು ಕಳೆದ 26 ವರ್ಷಗಳಿಂದ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರ್ ಇವರ ಯಕ್ಷಗಾನವನ್ನು ಮಹಾನಗರದಲ್ಲಿ ಪ್ರದರ್ಶಿಸಿ ಅದರಲ್ಲಿ ಉಳಿತಾಯವಾದ ಹಣವನ್ನು ಸಮಾಜಪರ ಕಾರ್ಯಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ ಈ ಯಕ್ಷಗಾನದಲ್ಲಿ ಉಳಿತಾಯವಾದ ಹಣವನ್ನು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ ಅಭಿವೃದ್ಧಿಗೆ ನೀಡಿ ಪುಣ್ಯಕಟ್ಟಿಕೊಂಡಿದ್ದಾರೆ. ವೇದಿಕೆಯ ಮೇಲಿದ್ದ ಗಣ್ಯರೆಲ್ಲರೂ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವವರು, ಮಳೆಗಾಲದಿಂದ ಈ ತನಕ ಸುಮಾರು ಇದಕ್ಕೂ ಮಿಕ್ಕಿ ಯಶಸ್ವಿ ಯಕ್ಷಗಾನ ಪ್ರದರ್ಶನ ಕಲ್ಯಾಣ್ ನಲ್ಲಿ ನಡೆದಿದೆ ಎಂದು ಡಾ.ದಿವಾಕರ ಶೆಟ್ಟಿ ಇಂದ್ರಾಳಿ ನುಡಿದರು.
ಅವರು ಅಕ್ಟೋಬರ್21 ರ ಸೋಮವಾರದಂದು ಕಲ್ಯಾಣ್ ಪಶ್ಚಿಮದ ಅಚಾರ್ಯ ಅತ್ರೆ ಸಭಾಗೃಹದಲ್ಲಿ ಸುದೀರ್ ಶೆಟ್ಟಿ ವಂಡ್ಸೆ ಇವರ ಮುಂದಾಳುತ್ವದಲ್ಲಿ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇವರ ಅಶ್ರಯದಲ್ಲಿ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರ್ ಇವರ ಪ್ರಬುದ್ಧ ಕಲಾವಿದರಿಂದ ಜರಗಿದ ಗಂಗೆ- ತುಂಗೆ- ಕಾವೇರಿ ಯಕ್ಷಗಾನದ ಮಧ್ಯಂತರದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಸುನೀಲ್ ಭಂಡಾರಿ ಕಡತೋಕಾ ಇವರನ್ನು ಸನ್ಮಾನಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು
ಅತಿಥಿ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ ಮಾತನಾಡುತ್ತಾ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಿ ಕಲೆಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ವಜ್ರ ಮಹೋತ್ಸವವನ್ನು ಅದ್ಧೂರಿಯಾಗಿ ಅಚರಿಸಿದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಶಹಾಡ್ ಕಲೆಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ ಇಲ್ಲಿ ದೇವಸ್ಥಾನಕ್ಕೆ ಸ್ಥಳದ ಅಭಾವವಿದೆ ಸಮೀಪದ ಸ್ಥಳವನ್ನು ಪಡೆಯುವ ಯೋಜನೆ ದೇವಸ್ಥಾನಕ್ಕಿದೆ ಈ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದರು.
ಅತಿಥಿ ಸುಬ್ಬಯ್ಯ ಶೆಟ್ಟಿ ಮಾತನಾಡುತ್ತಾ ಕಲ್ಯಾಣ್ ತುಳು- ಕನ್ನಡಿಗರು ಕಲೆಗೆ ಸದಾ ಪ್ರೋತ್ಸಾಹವನ್ನು ನೀಡಿ ಕಲೆಯನ್ನು ಬೆಳೆಸಿದ್ದಾರೆ ಕಲ್ಯಾಣ್ ನಲ್ಲಿ ಸುಮಾರು ಐದಕ್ಕೂ ಮಿಕ್ಕಿ ತಾಯ್ನಾಡಿನ ಮೇಳಗಳ ಯಶಸ್ವಿ ಯಕ್ಷಗಾನ ಪ್ರದರ್ಶನ ನಡೆದಿದೆ. ಸುಧೀರ್ ಶೆಟ್ಟಿಯವರು ಪ್ರತಿವರ್ಷ ಪೆರ್ಡೂರು ಮೇಳದ ಯಕ್ಷಗಾನ ಪ್ರದರ್ಶನವನ್ನು ಅಯೋಜಿಸಿ ಅದರಲ್ಲಿ ಉಳಿದ ಹಣವನ್ನು ಸಂಘ- ಸಂಸ್ಥೆ, ಅನಾರೋಗ್ಯ ಪೀಡಿತರಿಗೆ ನೀಡಿ ಪುಣ್ಯಕಟ್ಟಿಕೊಂಡವರು ಈ ಯಕ್ಷಗಾನದಲ್ಲಿ ಉಳಿತಾಯವಾದ ಹಣವನ್ನು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನಕ್ಕೆ ನೀಡುವ ಯೋಚನೆ ಅವರದ್ದು ನಿಮ್ಮಿ ಈ ಕಾರ್ಯಕ್ಕೆ ಶ್ರೀ ಮೂಕಾಂಬಿಕಾ ದೇವಿಯ ಅನುಗ್ರಹ ಸದಾ ಇರಲಿ ಎಂದರು.
ಮಂಡಳಿಯ ಭಾಗವತರಾದ ರಾಘವೇಂದ್ರ ಜನ್ಸಾಲೆ ಮಾತನಾಡುತ್ತಾ ನಮ್ಮ ಮೇಳಕ್ಕೆ ಯಕ್ಷಗಾನ ಪ್ರದರ್ಶನ ನೀಡಿ ಸಹಕರಿಸುತ್ತಿರುವ ಕಲಾಪೋಷಕರಿಗೆ ಧನ್ಯವಾದಗಳು. ನನ್ನ ಯಕ್ಷಗಾನ ರಂಗಕ್ಕೆ 25 ವರ್ಷ ತುಂಬಿದ ಸಂದರ್ಬದಲ್ಲಿ ಜನ್ಸಾಲೆ ಪ್ರತಿಷ್ಠಾನವನ್ನು ಹುಟ್ಟುಹಾಕಿ ಕಳೆದ ವರ್ಷ 26 ಕಲಾವಿದರಿಗೆ ಪ್ರಶಸ್ತಿ, ಅರ್ಥಿಕ ಸಹಾಯವನ್ನು ನೀಡಿದ್ದೇವೆ ಈ ವರ್ಷವೂ ಹಲವು ಪ್ರತಿಭೆಗಳಿಗೆ ಪುರಸ್ಕಾರ, ಪ್ರಶಸ್ತಿಯೊಂದಿಗೆ ಸುಮಾರು ಮೂರುವರೆ ಲಕ್ಷಕ್ಕೂ ಮಿಕ್ಕಿ ಧನಸಹಾಯವನ್ನು ನೀಡಿ ಗೌರವಿಸಲಿದ್ದೇವೆ ಈ ಕಾರ್ಯಕ್ಕೆ ತಾವೆಲ್ಲರೂ ಕೈ ಜೋಡಿಸ ಬೇಕೆಂದು ಕರೆ ನೀಡಿದರು.
ಇದೇ ಸಂದರ್ಬದಲ್ಲಿ ಖ್ಯಾತ ಮದ್ಧಳೆ ವಾದಕರಾದ ಸುನೀಲ್ ಭಂಡಾರಿ ಕಾಡತೋಡ ಇವರನ್ನು ವೇದಿಕೆಯ ಮೇಲಿದ್ದ ಗಣ್ಯರು ಶಾಲು, ಫಲ, ಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು ಮತ್ತು ವಂಡ್ಸೆ ಸುಧೀರ್ ಶೆಟ್ಟಿ ಯವರನ್ನು ವಿಶೇಷವಾಗಿ ಗೌರವಿಸಿಸಲಾಯಿತು. ಹಾಗೂ ದಾನಿಗಳನ್ನು ಸತ್ಕರಿಸಲಾಯಿತು
ವೇದಿಕೆಯ ಮೇಲೆ ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಸುಬೋದ್ ಭಂಡಾರಿ,ರಾಜೇಶ್ ಶೆಟ್ಟಿ, ಅನಂದ ಶೆಟ್ಟಿ ಎಕ್ಕಾರ್, ಸುಬ್ಬಯ್ಯ ಎ. ಶೆಟ್ಟಿ, ಸದಾಶಿವ ಸುವರ್ಣ, ಸತೀಶ್ ಎನ್. ಶೆಟ್ಟಿ, ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಸದಾನಂದ ಶೆಟ್ಟಿ, ಪ್ರಕಾಶ್ ಅರ್. ಶೆಟ್ಟಿ, ಯುವರಾಜ್ ಪೂಜಾರಿ, ದೀಪಕ್ ಬಂಗೇರಾ ಜಯ ಶೆಟ್ಟಿ, ಸುಧೀರ್ ಶೆಟ್ಟಿ ವಂಡ್ಸೆ, ಅನಿಲ್ ಶೆಟ್ಟಿ ವಕ್ಕೇರಿ, ಕರುಣಾಕರ ಶೆಟ್ಟಿ, ಸತೀಶ್ ಶೆಟ್ಟಿ ನಂದ್ರೊಳಿ, ಜ್ಯೋತಿ ಶೆಟ್ಟಿ, ಸುಜಾತ ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
ಶೋಭಾ ಸುರೇಂದ್ರ ಶೆಟ್ಟಿ ಪ್ರಾರ್ಥನೆಗೈದರು, ಜಗದೀಶ್ ಶೆಟ್ಟಿ ಬೆಳಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು