
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗಾಗಿ ಉಭಯ ಜಿಲ್ಲೆಗಳ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುವುದರೊಂದಿಗೆ ಜಿಲ್ಲೆಗಳ ಅಭಿವೃದ್ಧಿಗಾಗಿ ಕ್ರೀಯಾಶೀಲವಾರಿಗುವ ಮುಂಬಯಿಯಲ್ಲಿರುವ ಜಿಲ್ಲೆಗಳ ಎಲ್ಲಾ ಸಮುದಾಯಗಳ ಮುಖಂಡರನ್ನೊಳಗೊಂಡ ಏಕೈಕ ಸರಕಾರೇತರ ಸಂಘಟನೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಹೆಸರಾಂತ ಸಂಘಟಕ, ಸಮಾಜ ಸೇವಕ, ಕನ್ನಡಾಭಿಮಾನಿ ನಿತ್ಯಾನಂದ ಡಿ ಕೋಟ್ಯಾನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇಂದು (ಅ. 26) ಸಂಜೆ ಸಾಕಿನಾಕ ಪೆನಿನ್ಸುಲ ಹೋಟೆಲ್ ನ ಸಭಾಗ್ರಹದಲ್ಲಿ ನಡೆದ ಸಮಿತಿಯ 24ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಅಧ್ಯಕ್ಷ ಎಲ್. ವಿ. ಅಮೀನ್ ಅವರ ಉಪಸ್ಥಿತಿಯಲ್ಲಿ ನಿತ್ಯಾನಂದ ಕೋಟ್ಯಾನ್ ಅವರ ಹೆಸರನ್ನು ಅಧ್ಯಕ್ಷ ಪದವಿಗೆ ಘೋಷಿಸಲಾಯಿತು.
ನಿತ್ಯಾನಂದ ಕೋಟ್ಯಾನ್ ಅವರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಲ್ಲಿ ಪ್ರಾರಂಭದಿಂದ ಸೇವಾ ನಿರತರಾಗಿದ್ದು, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿ, ಇದೀಗ ಅಧ್ಯಕ್ಷ ಪದವಿಯನ್ನು ಅಲಂಕರಿಸಿರುವರು.
ಬಿಲ್ಲವ ಸಮಾಜದ ಜನ ನಾಯಕ ದಿ. ಜಯ ಸುವರ್ಣ ಅವರ ನಿಕಟವರ್ತಿಯಾಗಿದ್ದ,ನಿತ್ಯಾನಂದ ಕೋಟ್ಯಾನ್ ಅವರು ಮುಂಬೈ ಬಿಲ್ಲವರ ಬಲಿಷ್ಠ ಸಂಘಟನೆ ಬಿಲ್ಲವರ ಎಸೋಸಿಯೇಶನ್ ವಿವಿಧ ಪದವಿಗಳನ್ನು ನಿಭಾಯಿಸಿ ಅಧ್ಯಕ್ಷರಾಗಿ ಸಮಾಜ ಭಾಂದವರ ಐಕ್ಯತೆ, ಏಳಿಗೆಗಾಗಿ ದುಡಿದಿದ್ದರು.
ವಿವಧ ಸಂಘಟನೆಗಳ್ಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಿತ್ಯಾನಂದ ಕೋಟ್ಯಾನ್ ಅವರು ಮುಂಬಯಿ ಕನ್ನಡಿಗರ ಪ್ರತಿಷ್ಟಿತ ಸಂಸ್ಥೆ ಗೊರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ಅಪಾರ ಸೇವೆಗೈದ್ದಿದ್ದಾರೆ.
ದೇಶದ ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕ್ ಭಾರತ್ ಬ್ಯಾಂಕ್ ನಲ್ಲಿ ಉನ್ನತ ಮಟ್ಟದ ಪದವಿಯಲ್ಲಿ, ಕೆಲವು ವರ್ಷ ಸೇವೆಗೈದು ಬ್ಯಾಂಕ್ ನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದರು , ಪ್ರಸ್ತುತ ಭಾರತ್ ಬ್ಯಾಂಕ್ ನ ಬೋರ್ಡ್ ಅಪ್ ಮ್ಯಾನೇಜ್ಮೆಂಟ್ ನ ಸದಸ್ಯರಾಗಿರುವರು.
ಮುಂಬಯಿ ಹಾಗೂ ಊರಿನ ಧಾರ್ಮಿಕ, ಸಾಮಾಜಿಕ ಸಂಘಟನೆಗಳ್ಳಲ್ಲಿ ಕ್ರಿಯಾಶೀಲತರಾಗಿರುವ ನಿತ್ಯಾನಂದ ಕೋಟ್ಯಾನ್ ಸಮಾಜ ಸೇವೆಯಲ್ಲಿ ಅಪಾರ ಅನುಭವಹೊಂದಿದ್ದು, ಅವಿಭಜಿತ ಜಿಲ್ಲೆಯ ಅಭಿವೃದ್ಧಿಗಾಗಿ ಕಾರ್ಯವೆಸಗುತ್ತಿರುವ ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನೂತನ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಅವರ ಕಾರ್ಯವಧಿಯಲ್ಲಿ ಸಮಿತಿಯು ಹಮ್ಮಿಕೊಂಡ ಹಾಗೂ ಭವಿಷ್ಯದ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಕಾರ್ಯಗತಗೊಳ್ಳಲ್ಲಿ ಎಂಬ ಶುಭ ಹಾರೈಕೆ ನಮ್ಮದು.