September 6, 2026
Mumbai News Kannada
ಸುದ್ದಿ

ಮುಂಬೈಯ ಬಾಂದ್ರ ಟರ್ಮಿನಸ್ ನಲ್ಲಿ ನೂಕುನುಗ್ಗಲು, ಕಾಲ್ತುಳಿತ; 9 ಮಂದಿಗೆ ಗಾಯ





ಮುಂಬೈ, ಅಕ್ಟೋಬರ್ 27: ಮಹಾರಾಷ್ಟ್ರ ರಾಜಧಾನಿನಗರಿಯ ಬಾಂದ್ರಾ ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ ಒಂದರಲ್ಲಿ ಜನರ ನೂಕುನುಗ್ಗಲಿಂದಾಗಿ ಕಾಲ್ತುಳಿತದ ದುರ್ಭಟನೆ ಸಂಭವಿಸಿ 9 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ, ಗಾಯಾಳುಗಳನ್ನು ಭಾಭಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಂದ್ರಾ ಟರ್ಮಿನಸ್​ನ ಒಂದನೇ ಪ್ಲಾಟ್​ಫಾರ್ಮ್​ನಲ್ಲಿ ಭಾನುವಾರ ಬೆಳಗ್ಗೆ 5:56ಕ್ಕೆ ಈ ಘಟನೆ ಸಂಭವಿಸಿರುವುದು ತಿಳಿದುಬಂದಿದೆ.

ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಬಂದ ಮಾಹಿತಿ ಪ್ರಕಾರ, ಬಾಂದ್ರಾ ಟರ್ಮಿನಸ್​ನ ಪ್ಲಾಟ್​ಫಾರ್ಮ್ 1ರಲ್ಲಿ ಬಾಂದ್ರಾ ಗೋರಖ್​ಪುರ್ ಎಕ್ಸ್​ಪ್ರೆಸ್ ರೈಲಿಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಕಾಯುತ್ತಿದ್ದರು. ದೀಪಾವಳಿ ಆದ ಕಾರಣ ತಂತಮ್ಮ ಊರುಗಳಿಗೆ ಹೋಗಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈಲ್ವೆ ಸ್ಟೇಷನ್​ನಲ್ಲಿ ಇದ್ದರು. ಟ್ರೈನ್ ಹತ್ತುವಾಗ ನೂಕುನುಗ್ಗುಲು ತೀವ್ರಗೊಂಡು ಕಾಲ್ತುಳಿತವಾಗಿದೆ. ಗಾಯಗೊಂಡ ಒಂಬತ್ತು ಮಂದಿ ಪೈಕಿ ಏಳು ಮಂದಿ ಸ್ಥಿತಿ ಚಿಂತೆ ಪಡುವಷ್ಟು ಇಲ್ಲ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಶಬೀರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ್ ಸುಖದರ್ ಗುಪ್ತಾ (28), ರವೀಂದ್ರ ಹರಿಹರ್ ಚುಮಾ (30), ರಾಮಸೇವಕ್ ರವೀಂದ್ರ ಪ್ರಸಾದ್ ಪ್ರಜಾಪತಿ (29), ಸಂಜಯ್ ತಿಲಕ್​ರಾಮ್ ಕಂಗಯ್ (27), ದಿವ್ಯಾಂಶು ಯೋಗೇಂದ್ರ ಯಾದವ್ (18), ಮೊಹಮ್ಮದ್ ಶರೀಫ್ ಶೇಖ್ (25), ಇಂದ್ರಜಿತ್ ಸಹಾನಿ (19), ಮತ್ತು ನೂರ್ ಮೊಹಮ್ಮದ್ ಶೇಖ (18) ಎಂದು ಗುರುತಿಸಲಾಗಿದೆ.

.



Related posts

ತಿರುಮಲದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ ಸಂಪನ್ನ: ಮುಂಬೈನ ತಂಡದಿಂದ ಭಕ್ತಿ ಸಮರ್ಪಣೆ

Mumbai News Desk

ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ವ್ರತಾಚರಣೆಉಪ್ಪಳ ಜು:    ಕೊಂಡೆವೂರು

Mumbai News Desk

ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ಶ್ರೀ ಗೆ ನುಡಿ ನಮನ,

Mumbai News Desk

ಸುರತ್ಕಲ್: ಸಿಲಿಂಡರ್ ಸ್ಫೋಟ ಪ್ರಕರಣ ತೀವ್ರವಾಗಿ ಗಾಯಗೊಂಡ ಮಹಿಳೆಯರಿಬ್ಬರ ಸಾವು

Mumbai News Desk

ಶೋಲೆ ಚಿತ್ರದ ಐಕಾನಿಕ್ ಜೈಲರ್ ಅಸ್ರಾನಿ ನಿಧನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸ್ತನ್ಯಪಾನ ಕೊಠಡಿ ಉದ್ಘಾಟನೆ

Mumbai News Desk