
ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್
ಡೊಂಬಿವಲಿ: ಇಲ್ಲಿನ ನ್ಯೂ ದೇವೀಚಪಾಡಾ, ಜಗದಂಬಾ ರೋಡ್, ಗೋಪಿನಾಥ ಚೌಕ್ನಲ್ಲಿರುವ ಶ್ರೀ ಜಗದಂಬಾ ಮಂದಿರದಲ್ಲಿ ಯಕ್ಷಕಲಾ ಸಂಸ್ಥೆಯ (ರಿ.) ಸಂಚಾಲಕತ್ವದಲ್ಲಿ 12ನೇ ವರ್ಷದ ಶರನ್ನವರಾತ್ರಿ ಹಾಗೂ ವಿಜಯದಶಮಿ ಮಹೋತ್ಸವವು ಅಕ್ಟೋಬರ್ 11 ರಿಂದ 21ರವರೆಗೆ ಅತ್ಯಂತ ವಿಜೃಂಭಣೆಯಿಂದ ಆರಂಭಗೊಂಡಿದೆ.

ಈ ಧಾರ್ಮಿಕ ಮಹೋತ್ಸವವು ಶ್ರೀಕ್ಷೇತ್ರ ತಂತ್ರಿಯವರ ಶುಭ ಆಶೀರ್ವಾದದೊಂದಿಗೆ, ಪ್ರಧಾನ ಅರ್ಚಕರಾದ ಶ್ರೀ ಸುಬ್ರಮಣ್ಯ ಭಟ್ (ಮೀರಾ ರೋಡ್) ಹಾಗೂ ಶ್ರೀ ಜಗದೀಶ ಭಟ್ ಅವರ ನೇತೃತ್ವದಲ್ಲಿ ಸಾಂಗವಾಗಿ ನೆರವೇರುತ್ತಿದೆ.

ಅಕ್ಟೋಬರ್ 11ರ ಭಾನುವಾರ ಮುಂಜಾನೆ ಸಾಮೂಹಿಕ ಪ್ರಾರ್ಥನೆ, ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ ಹಾಗೂ ತೋರಣ ಮುಹೂರ್ತದೊಂದಿಗೆ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಪ್ರಥಮ ದಿನದಂದು ರಜಕ ಸಂಘ ಡೊಂಬಿವಲಿ ವಲಯ ಹಾಗೂ ದೇವಾಡಿಗ ಸಂಘ ಡೊಂಬಿವಲಿ ವಲಯದ ವತಿಯಿಂದ ದೇವಿಗೆ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು.

ಅಕ್ಟೋಬರ್ 11 (ಭಾನುವಾರ): ಮುಂಜಾನೆ ಸಾಮೂಹಿಕ ಪ್ರಾರ್ಥನೆ, ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ತೋರಣ ಮುಹೂರ್ತ, ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ.

ಅಕ್ಟೋಬರ್ 12 (ಸೋಮವಾರ): ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ.

ಅಕ್ಟೋಬರ್ 13 (ಮಂಗಳವಾರ): ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ರಾತ್ರಿ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ.

ಅಕ್ಟೋಬರ್ 14 (ಬುಧವಾರ): ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ.

ಅಕ್ಟೋಬರ್ 15 (ಗುರುವಾರ): ಮಧ್ಯಾಹ್ನ ಮಹಾಮಂಗಳಾರತಿ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು.

ಅಕ್ಟೋಬರ್ 16 (ಶುಕ್ರವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 7.00ಕ್ಕೆ ರಂಗಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ ನೆರವೇರಲಿದೆ.

ಅಕ್ಟೋಬರ್ 17 (ಶನಿವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.

ಅಕ್ಟೋಬರ್ 18 (ಭಾನುವಾರ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 7.00ಕ್ಕೆ ರಂಗಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.

ಅಕ್ಟೋಬರ್ 19 (ಸೋಮವಾರ): ಮುಂಜಾನೆ 9.00ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.
ಅಕ್ಟೋಬರ್ 20 (ಮಂಗಳವಾರ): ಮುಂಜಾನೆ 9.00ಕ್ಕೆ ದುರ್ಗಾಹೋಮ (ಸಂಪೂರ್ಣ ಆಹುತಿ), ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1.00ಕ್ಕೆ ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ 6.00ಕ್ಕೆ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ, ರಾತ್ರಿ 8.00ಕ್ಕೆ ಮಹಾಮಂಗಳಾರತಿ ಹಾಗೂ 8.30ಕ್ಕೆ ಅನ್ನಸಂತರ್ಪಣೆ.
ಅಕ್ಟೋಬರ್ 21 (ಬುಧವಾರ – ವಿಜಯದಶಮಿ): ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಹಾಗೂ 1.00ಕ್ಕೆ ಪಲ್ಲ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಲಿದೆ.
ಸಾಂಸ್ಕೃತಿಕ ಸಿಂಚನ – ಯಕ್ಷಗಾನ ಬಯಲಾಟ: ಅಕ್ಟೋಬರ್ 18ರ ಭಾನುವಾರ ಸಂಜೆ 5.00 ಗಂಟೆಯಿಂದ ಪುಣೆಯ ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಪರಿವಾರದವರ ಪ್ರಾಯೋಜಕತ್ವದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಜತೆಗೆ ಪ್ರತಿದಿನ ಬೆಳಿಗ್ಗೆ 10.00 ಗಂಟೆಗೆ ಹಾಗೂ ಸಂಜೆ 4.00 ಗಂಟೆಗೆ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾಮೃತ ಸೇವೆ ನಡೆಯುತ್ತಿದೆ.
ದಿನವಾರು ಅನ್ನದಾನ ಸೇವಾಕರ್ತರ ವಿವರ:
11/10/2026 (ಭಾನುವಾರ): ಮಧ್ಯಾಹ್ನ: ಶಿವರಾಮ್ ಶೆಟ್ಟಿ – ಹೋಟೆಲ್ ಮೂನ್ಲೈಟ್, ಕೇಶವ್ ಸುವರ್ಣ – ಹೋಟೆಲ್ ಸಂತೋಷ್ ಪ್ಯಾಲೇಸ್, ಸಾಹಿಲ್ ಸುರೇಶ್ ಐಶ್ವರ್ಯ ಕೋಟ್ಯಾನ್, ರೂಪ ಜಗದೀಶ್ ಅಂಚನ್ ಮತ್ತು ಪರಿವಾರ. ರಾತ್ರಿ: ಲಕ್ಷ್ಮಣ್ ಪೂಜಾರಿ – ಹೋಟೆಲ್ ಪ್ರೀತಿ ಗ್ರೂಪ್ಸ್.
12/10/2026 (ಸೋಮವಾರ): ಮಧ್ಯಾಹ್ನ: ಸಂತೋಷ್ ಶೆಟ್ಟಿ – ಆರ್ಯ ಲಾಡ್ಜ್, ರಘುರಾಮ್ ಶೆಟ್ಟಿ ಮತ್ತು ಪರಿವಾರ – ಹೋಟೆಲ್ ಸಚಿನ್ ಡೊಂಬಿವಲಿ, ರವಿ ಪೂಜಾರಿ ಮತ್ತು ಪರಿವಾರ – ಹೋಟೆಲ್ ವರ್ಷಾ ಡೊಂಬಿವಲಿ, ಶರಣ್ ರೈ – ಹೋಟೆಲ್ ಆನಂದ ಭವನ್ ಡೊಂಬಿವಲಿ, ಸುಧಾಕರ್ ಪೂಜಾರಿ ಮತ್ತು ಪರಿವಾರ ಡೊಂಬಿವಲಿ. ರಾತ್ರಿ: ಅಶ್ವಿನ್ ಆರಿನ್ ಮೆಂಡನ್, ಗಿಯಾನ್ಶ್ ಅಂಬೇಡ್ಕರ್ ಹಾಗೂ ಬೇಬಿ ನವಿಶಾ ಪೂಜಾರಿ, ಸಂತೋಷ್ ಮತ್ತು ದಿವ್ಯಾ ಶೆಟ್ಟಿ ಮತ್ತು ಪರಿವಾರ.
13/10/2026 (ಮಂಗಳವಾರ): ಮಧ್ಯಾಹ್ನ: ಪ್ರಕಾಶ್ ಶೆಟ್ಟಿ ಮತ್ತು ಪರಿವಾರ – ಕುತ್ಯಾರು ಬೀಡು ಪೆರ್ಡೂರು, ಸುರೇಶ್ ಅಂಚನ್ ಮತ್ತು ಪರಿವಾರ. ರಾತ್ರಿ: ಬಂಟ್ಸ್ ಸಂಘ ಡೊಂಬಿವಲಿ ಪ್ರಾದೇಶಿಕ, ಆನಂದ್ ಶೆಟ್ಟಿ ಯೆಕ್ಕಾರು ಮತ್ತು ಪರಿವಾರ, ಪ್ರಭಾಕರ್ ಶೆಟ್ಟಿ ಮತ್ತು ಪರಿವಾರ – ಹೋಟೆಲ್ ಅಂಬಿಕಾ, ನಾಗೇಶ್ ವಿ. ಶೆಟ್ಟಿ, ಚಂದ್ರಹಾಸ ಪಾಲನ್ ಮತ್ತು ಪರಿವಾರ – ಹೋಟೆಲ್ ಚಂದ್ರಹಾಸ ಡೊಂಬಿವಲಿ, ಸಂತೋಷ್ ಮತ್ತು ಶಿಲ್ಪಾ ಶೆಟ್ಟಿ ಮತ್ತು ಪರಿವಾರ ಮುಕ್ಕ.
14/10/2026 (ಬುಧವಾರ): ಮಧ್ಯಾಹ್ನ: ರಾಜೀವ್ ಭಂಡಾರಿ ಮತ್ತು ಪರಿವಾರ, ಶ್ರುತಿ ಶೆಟ್ಟಿ ಮತ್ತು ಪರಿವಾರ. ರಾತ್ರಿ: ಸುಂದರ್ ಮೊಯ್ಲಿ ಮತ್ತು ಪರಿವಾರ, ಹೇಮಾನಂದ್ ದೇವಾಡಿಗ ಮತ್ತು ಪರಿವಾರ, ಜಯಂತ್ ದೇವಾಡಿಗ ಮತ್ತು ಪರಿವಾರ.
15/10/2026 (ಗುರುವಾರ): ಮಧ್ಯಾಹ್ನ: ಮಾಲತಿ ಮುರಳೀಧರ್ ಶೆಟ್ಟಿ ಮತ್ತು ಪರಿವಾರ – ಹೋಟೆಲ್ ಸನ್ನಿ ಡೊಂಬಿವಲಿ, ಗಣೇಶ್ ಶೆಟ್ಟಿ ಮತ್ತು ಪರಿವಾರ – ಹೋಟೆಲ್ ರಂಜಿತ್ ಪ್ಯಾಲೇಸ್, ಯೋಷ್ನಾ ಯೋಗೇಶ್ ಶೆಟ್ಟಿ ಕಾರ್ಕಳ. ರಾತ್ರಿ: ಶ್ರೀ ಬಾಲಕೃಷ್ಣ ಶೆಟ್ಟಿ – ಹೋಟೆಲ್ ನ್ಯೂ ಪ್ರಸಾದ್, ವಿನಾಯಕ ಸೇವಾ ಸಮಿತಿ, ಸೋಮನಾಥ್ ಆರ್. ಪೂಜಾರಿ ಮತ್ತು ಪರಿವಾರ, ಮಧು ಶೆಟ್ಟಿ ಮತ್ತು ಪರಿವಾರ.
16/10/2026 (ಶುಕ್ರವಾರ): ಮಧ್ಯಾಹ್ನ: ರವಿ ಸನಿಲ್ ಮತ್ತು ಪರಿವಾರ, ಸುಬ್ಬಯ್ಯ ಶೆಟ್ಟಿ ಮತ್ತು ಪರಿವಾರ. ರಾತ್ರಿ: ಪ್ರಭಾವತಿ ಕೃಷ್ಣ ಬಂಗೇರ, ರಶ್ಮಿ ದಯಾನಂದ್ ಪೂಜಾರಿ, ಅಶ್ವಿನಿ ಸೂರಜ್, ಸ್ವಮಂತ್, ಕಲ್ಪನಾ ರತ್ನಾಕರ್ ಶೆಟ್ಟಿ ಮತ್ತು ಪರಿವಾರ, ಶ್ರೀ ಸೀತಾರಾಮ್ ಮತ್ತು ಮಾಲತಿ ಶೆಟ್ಟಿ ಮತ್ತು ಪುತ್ರರು, ಪ್ರಿತೇಶ್ ಶೇಖರ್ ಶೆಟ್ಟಿ ಮತ್ತು ಪರಿವಾರ.
17/10/2026 (ಶನಿವಾರ): ಮಧ್ಯಾಹ್ನ: ಹರೀಶ್ ಡಿ. ಶೆಟ್ಟಿ ಮತ್ತು ಪರಿವಾರ – ಹೋಟೆಲ್ ಗೌರವ್, ಸಾವಿತ್ರಿ ಎಸ್. ಬಂಗೇರ, ಲೋಕೇಶ್ ದೇವಾಡಿಗ ಮತ್ತು ಪರಿವಾರ, ರಾಜು ಮೊಗವೀರ ಮತ್ತು ಪರಿವಾರ, ಸಚಿನ್ ಎಸ್. ಕೋಟ್ಯಾನ್ ಮತ್ತು ಪರಿವಾರ, ಕೆ. ಟಿ. ಸಾಲ್ಯಾನ್ ಮತ್ತು ಪರಿವಾರ – ಪ್ರಿಯಾ ಕ್ಯಾಟರರ್, ಶ್ರೀಮತಿ ಸುನೀತಾ ಶೇಖರ್ ಅಂಚನ್. ರಾತ್ರಿ: ನೈರಂಜನ್ ಬಾಬು ಮತ್ತು ಪರಿವಾರ, ದೇವಕರ್ ಶೆಟ್ಟಿ ಮತ್ತು ಪರಿವಾರ, ತೃಪ್ತಿ ಪಾಟೀಲ್ ಮತ್ತು ಪ್ರೇಮ್ಜೀತ್ ಪಾಟೀಲ್ ಮತ್ತು ಪರಿವಾರ, ಕಮಲಾಬಾಯಿ ರಮಾಕಾಂತ್ ವೆರ್ಣೇಕರ್ ಮತ್ತು ಪರಿವಾರ.
18/10/2026 (ಭಾನುವಾರ): ಮಧ್ಯಾಹ್ನ: ಸತೀಶ್ ಶೆಟ್ಟಿ ಅಜಕಾರು ಮತ್ತು ಪರಿವಾರ – ಹೋಟೆಲ್ ಫ್ರೆಂಡ್ಸ್. ರಾತ್ರಿ: ಅಜೀತ್ ಕುಮಾರ್ ಶೆಟ್ಟಿ.
19/10/2026 (ಸೋಮವಾರ): ಮಧ್ಯಾಹ್ನ: ಶ್ರೀ ಜಗದಂಬಾ ಮಂದಿರ ಮಹಿಳಾ ವಿಭಾಗ. ರಾತ್ರಿ: ರವೀಂದ್ರ ವೈ. ಶೆಟ್ಟಿ ಮತ್ತು ಪರಿವಾರ, ವಿಜಯ್ ಶೆಟ್ಟಿ ಮತ್ತು ಪರಿವಾರ – ದೇವ್ ಲಾಡ್ಜ್, ಸುಧಾಕರ್ ಶೆಟ್ಟಿ ಮತ್ತು ಪರಿವಾರ – ದೇವ್ ಲಾಡ್ಜ್, ಹರೀಶ್ ಶೆಟ್ಟಿ ಪಡುಕುದುರು ಮತ್ತು ಪರಿವಾರ.
20/10/2026 (ಮಂಗಳವಾರ): ಮಧ್ಯಾಹ್ನ: ದೇವದಾಸ್ ಶೆಟ್ಟಿ – ಹೋಟೆಲ್ ಶಿವಂ, ರಾಜೇಶ್ ಸಿ. ಕೋಟ್ಯಾನ್ ಮತ್ತು ಪರಿವಾರ, ಹರೀಶ್ ಕೋಟ್ಯಾನ್ ಮತ್ತು ಪರಿವಾರ, ಸಚಿನ್ ಪೂಜಾರಿ ಪಾಲಿಮಾರ್ ಮತ್ತು ಪರಿವಾರ. ರಾತ್ರಿ: ಶ್ರೀ ಜಗದಂಬಾ ಮಂದಿರ ಭಕ್ತ ವೃಂದ.
ಪದಾಧಿಕಾರಿಗಳ ಉಪಸ್ಥಿತಿ: ಈ ಧಾರ್ಮಿಕ ಮಹೋತ್ಸವದ ನೇತೃತ್ವವನ್ನು ಶ್ರೀ ಜಗದಂಬಾ ಮಂದಿರ ಟ್ರಸ್ಟ್ನ ಗೌರವಾಧ್ಯಕ್ಷರು, ಅಧ್ಯಕ್ಷರಾದ ದಿವಾಕರ್ ರೈ, ಉಪಾಧ್ಯಕ್ಷರಾದ ರವೀಂದ್ರ ವೈ. ಶೆಟ್ಟಿ ಹಾಗೂ ದಿನೇಶ್ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಮಾಜಿ ಗೌರವಾನ್ವಿತ ಅಧ್ಯಕ್ಷ ಹರೀಶ್ ಡಿ. ಶೆಟ್ಟಿ, ಕೋಶಾಧಿಕಾರಿ ಹರೀಶ್ ಕೋಟ್ಯಾನ್, ಗೌರವ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವಹಿಸಿದ್ದಾರೆ. ಮಂದಿರದ ಶನಿಪೂಜಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸರ್ವ ಸದಸ್ಯರು ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಡೊಂಬಿವಲಿ ಮತ್ತು ಕಲ್ಯಾಣ್ ಪರಿಸರದ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ತಾಯಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಿದ್ದಾರೆ. ನವರಾತ್ರಿಯ ದಿನಗಳಲ್ಲಿ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಮಲ್ಲಿಗೆ ಸೇವೆ, ಹೂವಿನ ಪೂಜೆ, ದೀಪಾರಾಧನೆ, ಕುಂಕುಮಾರ್ಚನೆ, ಕರ್ಪೂರ ಆರತಿ, ದುರ್ಗಾಹೋಮ ಹಾಗೂ ಹಸಿರು ಹೊರೆಕಾಣಿಕೆಗಳನ್ನು ಭಕ್ತರು ಶ್ರದ್ಧೆಯಿಂದ ಸಮರ್ಪಿಸುತ್ತಿದ್ದಾರೆ.



