September 6, 2026
Mumbai News Kannada
ಮುಂಬಯಿ

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ – ಭಾಯಂದರ್ ವತಿಯಿಂದ ಗುರು ಪೂರ್ಣಿಮೆ ಆಚರಣೆ





ನಾರಾಯಣ ಗುರುಗಳ ತತ್ವ ಆದರ್ಶ ಪರಿಪಾಲನೆ ಮುಖ್ಯ ಉದ್ದೇಶ: ಉದಯ ಸುವರ್ಣ

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ-ಭಾಯಂದರ್ ವತಿಯಿಂದ ಆಯೋಜಿಸಲ್ಪಟ್ಟ ಪ್ರಥಮ ಗುರು ಪೂರ್ಣಿಮಾ ಪೂಜಾ ಕಾರ್ಯಕ್ರಮವು ಮಂಡಳಿಯ ಮಹಿಳಾ ಸದಸ್ಯರ ವಿಘ್ನಹರ್ತನ ಸ್ಥುತಿಯೊಂದಿಗೆ ಪ್ರಾರಂಭಗೊಂಡು, ಗುರು ಹಿರಿಯರು ಹಾಗೂ ಅತಿಥಿ ಗಣ್ಯರಿಂದ ದೀಪ ಪ್ರಜ್ವಲನೆಯ ಬಳಿಕ ಭಜನಾ ಕೀರ್ತನೆಗೆ ಚಾಲನೆ ನೀಡಲಾಯಿತು.

ವಿಶೇಷವಾಗಿ ಮಕ್ಕಳ ಭಜನಾ ಸಂಕೀರ್ತನೆಯು ಭಕ್ತಾದಿಗಳ ಮನತುಂಬಿತು.

ಅತಿಥಿ ಗಣ್ಯರಲ್ಲಿ ಪ್ರಮುಖರಾದ ಭಾರತ್ ಬ್ಯಾಂಕ್    ಕಾರ್ಯಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ, ನಿರ್ದೇಶಕ ನರೇಶ್ ಪೂಜಾರಿ ಮತ್ತಿತರ ನಿರ್ದೇಶಕರನ್ನು ಮಂಡಳಿಯ ಅಧ್ಯಕ್ಷ, ಗೌರವಾಧ್ಯಕ್ಷರುಗಳು ಹಾಗೂ ಸಮಿತಿಯ ಎಲ್ಲಾ ಸದಸ್ಯರುಗಳು ಗೌರವ ಪೂರ್ವಕವಾಗಿ ಪ್ರಸಾದ ನೀಡಿ ಗೌರವಿಸಿದರು

ಪೂಜೆಗೆ ಆಗಮಿಸಿದ ಗಣ್ಯರನ್ನು ಹಾಗೂ ದಾನಿಗಳನ್ನು ಗೌರವಿಸಿದ ಭಜನಾ ಮಂಡಳಿಯ ಅಧ್ಯಕ್ಷ ಉದಯ ಸುವರ್ಣ ಮಾತನಾಡಿ ನಾರಾಯಣ ಗುರುಗಳ ತತ್ವದಂತೆ ನಮ್ಮ ಮಂಡಳಿಯ ಸೇವಾಕಾರ್ಯಗಳು ನಡೆಯುತ್ತದೆ, ಪ್ರತಿ ಮನೆ – ಮನೆಯಲ್ಲಿ ಭಜನೆ ಮಾಡುವ ಮೂಲಕ ಧರ್ಮ ಜಾಗೃತಿಯ ಸೇವೆಯನ್ನು ಮಾಡುವ ಮೂಲಕ ಗುರುಗಳ ತತ್ವವನ್ನು ಪರಿಪಾಲನೆ ಮಾಡುವ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.

ಪರಿಸರದ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಭಕ್ತಾದಿಗಳು ತನು- ಮನ -ಧನದಿಂದ  ಪೂಜಾ ಕಾರ್ಯಕ್ರಮವು ವಿಜ್ರಂಭಣೆಯಿಂದ ನೆರವೇರುವಲ್ಲಿ ಸಹಕರಿಸಿದರು.

ಕಿಕ್ಕಿರಿದು ನೆರೆದಿದ್ದ ಭಕ್ತಾದಿಗಳು ಪೂಜಾ ವಿಧಿ- ವಿಧಾನಗಳ ಬಳಿಕ ಶ್ರೀ ಗುರು ಪ್ರಸಾದ ಹಾಗೂ ಅನ್ನ ಪ್ರಸಾದವನ್ನು ನೀಡಲಾಯಿತು.

B. Dinesh Kulal

Mob.: 9821868674



Related posts

ಮಾಲಾಡ್ ಪೂರ್ವ  ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್  ನವರಾತ್ರಿ ಪೂಜೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ತ್ರಿಷಾ ಯೋಗೇಶ್ ಕರ್ಕೇರ ಗೆ ಶೇ. 93 ಅಂಕ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬಯಿ ಶಾಖೆಯ ಮಹಿಳಾ ವಿಭಾಗದಿಂದ ಅರಿಶಿನ ಕುಂಕುಮ ಕಾರ್ಯಕ್ರಮ

Mumbai News Desk

ಅನಿತಾ ಪಿ.ತಾಕೊಡೆಯವರಿಗೆ ಚೆಂಬೂರು ಕರ್ನಾಟಕ ಸಂಘ ಕೊಡಮಾಡುವ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ”

Mumbai News Desk

ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಅರಶಿನ ಕುಂಕುಮ, ವಿಧವೆಯರಿಗೆ  ಸೀರೆ, ಧನ ಸಹಾಯ ವಿತರಣೆ

Mumbai News Desk

ಚಿಣ್ಣರ ಬಿಂಬ: ನೈರುತ್ಯ ವಲಯದ ಮಕ್ಕಳ ಉತ್ಸವದ ಸಮಾರೋಪ ಸಮಾರಂಭ

Mumbai News Desk