23.5 C
Karnataka
April 4, 2025
ಸುದ್ದಿ

ದರ್ಶನ್ ಗೆ 6 ವಾರ ಕಾಲ ಶರತ್ತು ಬದ್ದ ಜಾಮೀನು



ದರ್ಶನ್​ಗೆ ಕೊನೆಗೂ ಜಾಮೀನು ದೊರೆತಿದೆ. ಆದರೆ ಈಗ ಕೇವಲ ಆರು ವಾರಗಳ ಮಧ್ಯಂತರ ಜಾಮೀನು ಲಭ್ಯವಾಗಿದೆ. ದರ್ಶನ್​ಗೆ ಜಾಮೀನು ಲಭ್ಯವಾದ ಬೆನ್ನಲ್ಲೆ ದರ್ಶನ್ ಪರ ವಕೀಲರ ತಂಡದ ಸುನಿಲ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದು, ಪ್ರಕರಣದ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್​ಗೆ ಇರುವ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಮಾನ್ಯ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಎಲ್ಲ ಕಾನೂನು ಪ್ರಕ್ರಿಯೆಗಳು ಇಂದೇ ಮುಗಿದು ಇಂದೇ ದರ್ಶನ್ ಜೈಲಿನಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ ಸುನಿಲ್.

‘ನಾವು, ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದೆವು. ದರ್ಶನ್ ಅವರಿಗೆ ಬೆನ್ನು ಹುರಿಯಲ್ಲಿ ಸಮಸ್ಯೆ ಇದೆ. ಅವರ ಎಲ್​5 ಮತ್ತು ಎಸ್​1 ಅಲ್ಲಿ ಸಮಸ್ಯೆಯಿದ್ದು ಸೂಕ್ತ ಚಿಕಿತ್ಸೆ ತುರ್ತು ಅಗತ್ಯವಿದೆ. ದರ್ಶನ್​ಗೆ ಈ ಸಮಸ್ಯೆ ಈಗ ಬಂದಿದ್ದಲ್ಲ, ಅಥವಾ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆದ ಬಳಿಕ ಬಂದಿದ್ದಲ್ಲ, ಅವರಿಗೆ ಈ ಸಮಸ್ಯೆ 2022-23 ರಿಂದಲೂ ಇದೆ. ಅದಕ್ಕೆ ಅವರು ಚಿಕಿತ್ಸೆ ಪಡೆದಿದ್ದರು ಆದರೆ ಅದು ಸರಿ ಹೋಗಿರಲಿಲ್ಲ. ಅದರ ವರದಿಗಳನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು’ ಎಂದಿದ್ದಾರೆ ವಕೀಲ ಸುನಿಲ್.

ಈಗ ದರ್ಶನ್​ರನ್ನು ತಪಾಸಣೆ ಮಾಡಿರುವ ವೈದ್ಯರು ಸಹ ಮುಚ್ಚಿದ ಲಕೋಟೆಯನ್ನು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದನ್ನೆಲ್ಲ ಪರಿಗಣಿಸಿ ಈಗ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಇನ್ನು ದರ್ಶನ್ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಅವರು ಮತ್ತು ಅವರ ಕುಟುಂಬದವರು ನಿರ್ಧಾರ ಮಾಡುತ್ತಾರೆ. ಅವರು ನಿರ್ಧಾರ ಮಾಡಿದ ಬಳಿಕ ಅದರ ವಿವರವನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದೇವೆ’ ಎಂದು ವೈದ್ಯರು ಹೇಳಿದರು.

ಈಗ ದರ್ಶನ್​ಗೆ ಮಧ್ಯಂತರ ಜಾಮೀನು ಮಾತ್ರವೇ ಮಂಜೂರಾಗಿದೆ. ಆದರೆ ನಿಯಮಿತ ಜಾಮೀನು ಮಂಜೂರಾಗಿಲ್ಲ. ಮಧ್ಯಂತರ ಜಾಮೀನು ಅವಧಿ ಮುಗಿದ ಬಳಿಕ ನಿಯಮಿತ ಜಾಮೀನಿಗೆ ನಾವು ಅರ್ಜಿ ಹಾಕಲಿದ್ದೇವೆ. ಅದು ನಮ್ಮ ಜವಾಬ್ದಾರಿಯಾಗಿದ್ದು, ದರ್ಶನ್​ಗೆ ನಿಯಮಿತ ಜಾಮೀನು ಕೊಡಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ’ ಎಂದಿದ್ದಾರೆ ಸುನಿಲ್.

Related posts

ಕರ್ನಿರೆ ಸುವರ್ಣ ಪ್ರತಿಷ್ಠಾನದಿಂದ ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ   ಸಮ್ಮಾನ 

Mumbai News Desk

ಮಲಾಡ್ ಕುರಾರ್ ಶನೇಶ್ವರ ಮಂದಿರದ ವತಿಯಿಂದ ಉಳ್ಳಾಳ ಸೋಮೇಶ್ವರದಲ್ಲಿ, ಶ್ರೀ ಶನಿ ಮಹಾಪೂಜೆ.

Mumbai News Desk

ಖ್ಯಾತ ಆರ್ಥಿಕ ಸಲಹೆಗಾರ ಡಾ. ಆರ್. ಕೆ. ಶೆಟ್ಟಿಯವರಿಗೆ “ಸಂಸ್ಕೃತಿ ಸಿರಿ” ಪ್ರಶಸ್ತಿ

Mumbai News Desk

ತಿರುಮಲದಲ್ಲಿ ವಿಜೃಂಭಣೆಯಿಂದ ನಡೆದ ಪುರಂದರ ದಾಸರ ಆರಾಧನ ಮಹೋತ್ಸವ

Mumbai News Desk

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೆ.ವಾಸುದೇವಾಚಾರ್ಯ ದತ್ತಿ ಪುರಸ್ಕಾರ

Mumbai News Desk

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾ ದಳದ ದಳಪತಿಯಗಿ ಪ್ರದೀಪ್ ಅತ್ತಾವರ ಆಯ್ಕೆ

Mumbai News Desk