




ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆದ ದೀಪಾವಳಿ ಹಬ್ಬದ ಆಚರಣೆಯ ಕಾರ್ಯಕ್ರಮವು ತಾರೀಕು 31/10/24 ರಂದು ಮಂಗಳೂರು ಮೂಲತ್ವ ಸಾನಿಧ್ಯದಲ್ಲಿ ತಾರೆ ತೋಟ ಸುವರ್ಣ ರೆಸಿಡೆನ್ಸಿ ಇಲ್ಲಿ ನಡೆಯಿತು. ಆ ದಿನ ಬೆಳಗಿನ ಜಾವ ಅರ್ಚನೆಯಾಗಿ, ತದನಂತರ ಸ್ಪೂರ್ತಿ ಭಜನಾ ಮಂಡಳಿ ಪದವಿನಂಗಡಿ ಇವರಿಂದ ಭಜನಾ ಸಂಕೀರ್ತನ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ವೇದಮೂರ್ತಿ ಶ್ರೀ ರವಿ ಶಾಂತಿ, ಪ್ರಧಾನ ಅರ್ಚಕರು, ಮಾರಿಕಾಂಬ ದೇವಸ್ಥಾನ ಮಂಗಳೂರು ಇವರನ್ನು ಇವರ ಪ್ರಾಮಾಣಿಕ ದೇವ ಸೇವೆಗೆ ಸನ್ಮಾನಿಸಲಾಯಿತು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಪೂರ್ತಿ ಭಜನಾ ಮಂಡಳಿಯ ಎಲ್ಲಾ ಸದಸ್ಯರು, ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಜಿ ಆರ್ ಪ್ರಸಾದ್, ಉಪಾಧ್ಯಕ್ಷರಾದ ಪ್ರಶಾಂತ್ ಪೈ, KREC ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು, ಲಕ್ಷ್ಮಣ್ ಗುರುಸ್ವಾಮಿ, ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ಕಲ್ಪನಾ ಪಿ ಕೋಟ್ಯಾನ್, ಶೈನಿ, ಲಕ್ಷ್ಮೀಶ ಪಿ ಕೋಟ್ಯಾನ್, ಅಕ್ಷತ ಕದ್ರಿ, ಸಂಚಾಲಕರಾದ ಪ್ರಶಾಂತ್ ರೈ, ಮಹಿಳಾ ಸಂಘಟನೆಯ ಜಯಶ್ರೀ ಸಂದೇಶ್, ಉಪಾಧ್ಯಕ್ಷರಾದ ಮಹೇಶ ಅಮೀನ್, ಟ್ರಸ್ಟ್‌ನ ಸದಸ್ಯರುಗಳಾದ ರಾಮ್ ಪ್ರಸಾದ್, ಸೌಮ್ಯ ಶೆಟ್ಟಿ, ಮನೀಶ್ ಕದ್ರಿ, ಕಾಂಚನ, ಉಷಾ ಶೆಟ್ಟಿ ಮತ್ತು ಊರಿನ ಪರ ಊರಿನ ಎಲ್ಲಾ ಭಕ್ತಾದಿಗಳು ಸೇರಿದ್ದರು.
ಹಬ್ಬದ ಅಂಗವಾಗಿ ಎಲ್ಲರಿಗೂ ಸಿಹಿ ತಿಂಡಿಯನ್ನು ಹಾಗೂ ಅನ್ನಪ್ರಸಾದವನ್ನು ಹಂಚಲಾಯಿತು ಎಂದು ಟ್ರಸ್ಟ್‌ನ ಅಧ್ಯಕ್ಷರು ಪ್ರಕಾಶ್ ಮೂಲತ್ವ ತಿಳಿಸಿರುವರು.