ನ 9 ಮತ್ತು 10: ಮುಂಬಯಿಯಲ್ಲಿ ಶಿವಪುರ್ಸಾದ ಬಬ್ಬರ್ಯೆ ತುಳು ನಾಟಕ. ಮಾಯಾನಗರಿಯಲ್ಲಿ ಬಬ್ಬರ್ಯನ ಮಾಯೆಮುಂಬಯಿ: ಕಡಲಕರೆಯ ಸತ್ಯದೈವ ಬಬ್ಬರ್ಯನ ಕಾರಣಿಕ ಪ್ರಚುರಪಡಿಸುವ ಶಿವಪುರ್ಸಾದ ಬಬ್ಬರ್ಯೆ ಜಾನಪದ-ಐತಿಹಾಸಿಕ ನಾಟಕ ಮಾಯಾನಗರಿ ಮುಂಬಯಿಯಲ್ಲಿ ನವೆಂಬರ 9 ಮತ್ತು 10 ರಂದು ಪ್ರದರ್ಶನ ಕಾಣಲಿದೆ. “ಪರಮ ಪದ್ಮ ಕಲಾವಿದರು” ತಂಡದ ನೇತೃತ್ವದಲ್ಲಿ 27 ಮಂದಿ ಕಲಾವಿದರ ತಂಡ ಮುಂಬಯಿಗೆ ಆಗಮಿಸಲಿದ್ದು ರಂಗಸಜ್ಜಿಕ, ಬೆಳಕಿನ ವ್ಯವಸ್ಥೆಯನ್ನು ಊರಿನ ತಂಡವೆ ಮಾಡಲಿದೆ.
ನವೆಂಬರ 9 ರಂದು ಶನಿವಾರ ಮೊದಲ ಪ್ರದರ್ಶನ ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಶ್ರಯದಲ್ಲಿ ಅಂಧೇರಿಯ ಮೊಗವೀರ ಭವನದಲ್ಲಿ ನಡೆಯಲಿದ್ದರೆ, ಎರಡನೆಯ ಪ್ರದರ್ಶನ ರಂಗ ಸುದರ್ಶನ, ಸಸಿಹಿತ್ಲು ಇದರ ಆಶ್ರಯದಲ್ಲಿ ಸಂಸ್ಥೆಯ ಮುಂಬಯಿ ಅಭಿಮಾನಿ ಬಳಗ ಸಂಪೂರ್ಣ ಸಹಕಾರದಲ್ಲಿ. ನ 10 ರಂದು ಸಾಂತಕ್ರೂಸ್ ಬಿಲ್ಲವರಲ್ ಭವನದಲ್ಲಿ ನಡೆಯಲಿದೆ., ನಾಟಕ ಪ್ರದರ್ಶನಕ್ಕೆ ಮೊದಲು ಬಬ್ಬರ್ಯನ ದೈವನಡೆ ಎಂಬ ಚಿಂತನ-ಮಂಥನ ಕಾರ್ಯಕ್ರಮ ಅತಿಥಿಗಳ ಸಮ್ಮುಖದಲ್ಲಿ ನಡೆಯಲಿದ್ದು, ವೈಚಾರಿಕತೆಗೆ ಧರ್ಮದ ಚೌಕಟ್ಟು ನಿರ್ಮಾಣ ಮಾಡುವ ಮೂಲ ಉದ್ದೇಶ ಈ ಕಾರ್ಯಕ್ರಮದಲ್ಲಿ ಅಡಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಡಲಕರೆಯ ಶ್ರಮಜೀವಿಗಳ ಪಾಲಿನ ಆರಾಧ್ಯ ದೈವ ಬಬ್ಬರಜ್ಜ ಕೇವಲ ಒಂದು ಸಮಾಜಕ್ಕೆ ಸೀಮಿತ ಶಕ್ತಿಯಲ್ಲ.ಬಬ್ಬರಜ್ಜನ ಬದುಕಿನ ಇತಿಹಾಸವೇ ಅದೊಂದು ರೋಮಾಂಚನ .ದೈವಗಳ ಕಾರಣಿಕ ಬಗ್ಗೆ ನಾಟಕ ಇತ್ತೀಚಿನ ದಿನಗಳಲ್ಲಿ ಸವಾಲಿನ ವಿಷಯವಾಗಿರುವಾಗ ಪಾಡ್ದನ ಮತ್ತು ಮೌಖಿಕ ಸಾಹಿತ್ಯಮೂಲಗಳ ಮೂಲಕ ಈ ನಾಟಕವನ್ನು ವಸ್ತುನಿಷ್ಠವಾಗಿ ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನವನ್ನು ಈ ನಾಟಕದ ಕರ್ತೃ ಪರಮಾನಂದ. ವಿ.ಸಾಲಿಯಾನ್ ಅವರು ಮಾಡಿದ್ದಾರೆ.
ನಂಬಿಕೆಯ ಪುರಾಣ ಕಾಲದಲ್ಲಿ ದೈವದೇವರು ಏನು ಮಾತನಾಡಿದ್ದಾರೆಂದು ಯಾರಿಗೂ ಗೊತ್ತಿಲ್ಲ.ಸಂಭಾಷಣೆ ರಚನೆ ಅದು ಕವಿ ಚಮತ್ಕಾರ.ಆದರೆ ಬರೆಯುವ ಅಬ್ಬರದಲ್ಲಿ ನಂಬಿಕೆಗಳಿಗೆ ಧಕ್ಕೆ ಬಂದಾಗ ಗೊಂದಲ ನಿರ್ಮಾಣ ಆಗುತ್ತದೆ.ಇಂಥಹ ಸಾಮ್ಯತೆಗಳನ್ನು ಅನುಭವದಿಂದ ತಿಳಿದುಕೊಡಿರುವ ಪರಮಾನಂದ ಸಾಲಿಯಾನ್ ಅವರು ಎಚ್ಚರಿಕೆಯಿಂದ ಸಂಭಾಷಣೆ ರಚಿಸಿದ್ದಾರೆ.
ಈಗಾಗಲೇ ಶಿವದೂತ ಗುಳಿಗೆ ಯಂತಹ ಯಶಸ್ವಿ ನಾಟಕಗಳಿಗೆ ಸಂಭಾಷಣೆ ಬರೆದಿರುವ ಸಾಲಿಯಾನ್ ಅವರು ಮುಂಬಯಿ ಪ್ರೇಕ್ಷಕರು ತನ್ನನ್ನು ಸ್ವೀಕರಿಸುವನಂಬಿಕೆ ಇರಿಸಿಕೊಂಡಿದ್ದಾರೆ. ಶಾಪಗ್ರಸ್ಥ ಎರಡು ವಿಷ ನಾಗಗಳು,ಪಟ್ರಮೆಯ ದುರಂತ ಬದುಕು,ಅಣ್ಣ ತಂಗಿ,ಮಾವ ಅಳಿಯ,ದೈವ ಮನುಷ್ಯರ ಪವಿತ್ರ ಸಂಬಂಧ ಈ ನಾಟಕದ ಸಂದರ ಕಥಾವಸ್ತು. ಬಬ್ಬರ್ಯನನ್ನು ಮುಖಾಮುಖಿ ಯಾಗು ವ ಗುಳಿಗ ಮುತ್ತು ಪಿಲಿ ಚಾಮುಂಡಿ ದೈವದ ಅಬ್ಬರದ ಪ್ರವೇಶ ಇಲ್ಲಿನ ರೋಮಾಂಚನ. ನಿಮ್ಮ ಕುತೂಹಲ ತಣಿಸಲು ನಿರೀಕ್ಷಿಸಿ ” ಶಿವಪುರ್ಸಾದ ಬಬ್ಬರ್ಯೆ”
ದಿನೇಶ್ ಕುಲಾಲ್