
ಸಮಿತಿಯ ಸಮಾಜ ಸೇವೆಗೆ ಭಕ್ತರ ಸಹಕಾರ ಅಗತ್ಯ – ಮಾಧವ ಎಸ್. ಶೆಟ್ಟಿ.
ಚಿತ್ರ, ವರದಿ : ಉಮೇಶ್ ಕೆ. ಅಂಚನ್.
ಮುಂಬಯಿ, ನ. 3: ಸಮಿತಿಯು ಕಳೆದ ಐದು ದಶಕಗಳಿಂದ ಧಾರ್ಮಿಕ ಸೇವೆಯೊಂದಿಗೆ ಆರ್ಥಿಕವಾಗಿ ಶೈಕ್ಷಣಿಕ ಹಾಗೂ ವೈದ್ಯಕೀಯ ನೆಲೆಯಲ್ಲಿ ಸಾವಿರಾರು ಮಂದಿಗೆ ಸಹಾಯ ಹಸ್ತ ನೀಡಿದೆ. ಸಮಿತಿಯ ಬೊರಿವಿಲಿ ಕಚೇರಿಯಲ್ಲಿ ಅಬಲೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡುತ್ತಿದೆ. ಈ ಎಲ್ಲಾ ಸಮಾಜಪರ ಸೇವೆಗಳಿಗೆ ಸಾಯಿಭಕ್ತರ, ದಾನಿಗಳ ಸಹಕಾರ ಅಗತ್ಯ ಎಂದು ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡಾ ಇದರ ಅದ್ಯಕ್ಷ ಮಾಧವ ಎಸ್. ಶೆಟ್ಟಿ ಹೇಳಿದರು.
ಅವರು ನ. 1ರಂದು ಸಮಿತಿಯ 54ನೇ ವಾರ್ಷಿಕ ಮಹಾಪೂಜೆಯ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಪ್ರತಿಭಾ ಪುರಸ್ಕಾರ ಹಾಗೂ ವೈದ್ಯಕೀಯ ನೆರವು ವಿತರಿಸಿ ಮಾತನಾಡಿದರು.
ಸಮಿತಿಯ ಗೌರವ ಕಾರ್ಯದರ್ಶಿ ಫ್ರೊ. ಕೇಶವ್ ಎಚ್. ಕರ್ಕೇರ ಪ್ರಾಸ್ತವಿಕವಾಗಿ ಮಾತನಾಡಿ ಮುಂಬಯಿ ಮಹಾನಗರಪಾಲಿಕೆಯು 14 ವರ್ಷಗಳ ಹಿಂದೆ ಸಾಯಿಬಾಬಾ ಮಂದಿರವನ್ನು ಕೆಡವಿದರೂ ಸಮಿತಿಯು ವಾರದ ಪೂಜೆ, ವಾರ್ಷಿಕ ಪೂಜೆ, ಮತ್ತಿತರ ಧಾರ್ಮಿಕ ಹಾಗೂ ಸಮಾಜ ಸೇವೆಯನ್ನು ದಾನಿಗಳ ಹಾಗೂ ಸಾಯಿಭಕ್ತರ ಸಹಕಾರದಿಂದ ಮಾಡುತ್ತಾ ಬಂದಿದೆ ಹಾಗೂ ಪ್ರಸ್ತುತ ವರ್ಷದ ಮಹಾಪೂಜೆಗೆ ಸಹಕರಿಸಿದ
ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಆರಂಭದಲ್ಲಿ ಸಮಿತಿಯ ಭುವಾಜಿ ರಮೇಶ್ ಪೂಜಾರಿಯವರಿಂದ ಕಲಶ ಪ್ರತಿಷ್ಟೆ ನಡೆದು ವಿದ್ಯಾದಾಯಿನಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಮದ್ಯಾಹ್ನ ಶ್ರೀ ಸಾಯಿಬಾಬಾ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಿತು.
ಸಮಿತಿಯ ಉಪಾದ್ಯಕ್ಷ ಅಡ್ವೆ ಜಯ ಎಸ್.ಶೆಟ್ಟಿ,ಕೋಶಾಧಿಕಾರಿ ರವೀಂದ್ರ ಡಿ. ಶೇಣವ,ಜತೆ ಕಾರ್ಯದರ್ಶಿ ರಮೇಶ್ ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ಅತ್ತೂರು ಭಾಸ್ಕರ್ ಎಮ್. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್ ಜಿ. ಭಂಡಾರಿ, ವಿದ್ಯಾಧರ್ ಎನ್. ಶೆಟ್ಟಿ,ಹರ್ಷದ್ ಬಿ. ಶೆಟ್ಟಿ, ರಮೇಶ್ ಪೂಜಾರಿ, ರವಿ. ಎಸ್. ಶೆಟ್ಟಿ, ಪ್ರದೀಪ್ ಸುವರ್ಣ, ಪ್ರಸಾದ್ ಶೆಟ್ಟಿ, ಶ್ಯಾಮ್ ಎಸ್. ಕೋಟ್ಯಾನ್, ಕಮಲಾ ಶೆಟ್ಟಿ, ಸಾರಿಕಾ ಶೇಣವ, ಪರೀಕ್ಷಿತ್ ಎನ್. ರೈ ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು

ಈ ಸಂದರ್ಭದಲ್ಲಿ ಕಳೆದ ಐದು ದಶಕಗಳಿಂದ ಸಮಿತಿಯಲ್ಲಿ ಸೇವೆ ಸಲ್ಲಿಸಿ ಸಹಕರಿಸಿದ ಅದ್ಯಕ್ಷರಾದ ಮಾಧವ ಎಸ್. ಶೆಟ್ಟಿ, ಗೌರವ ಕಾರ್ಯದರ್ಶಿ ಕೇಶವ್. ಎಚ್. ಕರ್ಕೇರ ಹಾಗೂ ಕೋಶಾಧಿಕಾರಿ ರವೀಂದ್ರ ಡಿ. ಶೇಣವರವರನ್ನು ಈ ಸಂದರ್ಭದಲ್ಲಿ ಅವರ ಸೇವೆಗಳನ್ನು ಪರಿಗಣಿಸಿ ಅಭಿನಂದಿಸಲಾಯಿತು.
