September 6, 2026
Mumbai News Kannada
ಮುಂಬಯಿ

ಕೊಂಕಣಿ ವೆಲ್ಫೇರ್ ಅಸೋಸಿಯೇಷನ್ ಸಯನ್ : ಕನ್ಯಾ ಮರಿಯಮ್ಮನವರ ಜನ್ಮದಿನೋತ್ಸವ ಮೋಂತಿ ಪೆಸ್ತ್





ಕೊಂಕಣಿ ವೆಲ್ಪರ್ ಅಸೋಸಿಯೇಷನ್ ಸಯನ್, ಇದರ ವತಿಯಿಂದ ಯೇಸುಕ್ರಿಸ್ತರ ಮಾತೆ ಕನ್ಯಾ ಮರಿಯಮ್ಮನ ಜನ್ಮೋತ್ಸವದ ಆಚರಣೆಯು ಸೆ. 13ರಂದು ಸಯನ್ ಸ್ಟೇಷನ್ ಪಕ್ಕದ ಅವರ್ ಲೇಡಿ ಆಫ್ ಗುಡ್ ಕನಸೇಲ್ ಇಗರ್ಜಿಯಲ್ಲಿ ಜರಗಿತು.ಅತಿಥಿ ಫಾ! ಶಾವಿಟೊ ಕುರೆಯಾ, ಇಗರ್ಜಿಯ ಧರ್ಮಗುರು ಫಾ! ಟೋನಿ ಡಿ’ಸೋಜ, ಫಾ! ಜೂಲಿಯಸ್, ಫಾ! ಸಾಳ್ವಡೋರ್ ಡಿ’ಸೋಜ, ಫಾ! ಅರವಿಂದ್
ಅವರು ಪ್ರಕೃತಿ ಮಾತೆಯನ್ನು ಸ್ಮರಿಸುತ್ತ, ಅಭಿನಂದನಾ ಪೂಜೆ ನೆರವೇರಿಸಿ, ಮಾತೆಯ ಆರಾಧನೆಗೈದು, ಹೊಸ ಭತ್ತದ ತೆನೆಯನ್ನು ಭಕ್ತರಿಗೆ ವಿತರಿಸಿ ಶುಭ ಹಾರೈಸಿದರು.


ಅಧ್ಯಕ್ಷರಾದ ಹ್ಯಾರಿ ಸಿಕ್ತ್ವೆರಾ ಅವರ ಮುಂದಾಳತ್ವದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅವರ್ ಲೇಡಿ ಆಫ್ ಗುಡ್ ಕೌನ್ಸಿಲ್ ಚಾನ್ಸ್ಲರ್ ಕೊರಯ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಇಗರ್ಜಿಯ ಕ್ರೈಸ್ತ ಸನ್ಯಾಸಿನಿಯರಾದ ಸಿಸ್ಟರ್ ಶಾಂತಿ
ಸಿಸ್ಟರ್ ಗೀತಾ, ಸಿಸ್ಟರ್ ಲೀಸಿ,
ಕಾರ್ಯದರ್ಶಿ ಡೆನಿಸ್ ಡಿ’ಸೋಜ, ಕೋಶಧಿಕಾರಿ ಮೊಲಿ ಸಿಕ್ತ್ವೆರಾ, ಡುಲ್ಸಿನ್ ಫುರ್ತಾದೋ, ಕಾರ್ಯಧ್ಯಕ್ಷ ಪ್ಲಾವಿಯ ಡಿ:ಸೋಜಾ, ರೀಟಾ ಅರಹ್ನ,, ವನಿತಾ ಡಿಸೋಜ, ರಾಯನ್ ಡಿ’ಸೋಜ, ಸಂತಾನ, ಸಿಲ್ವಸ್ಟರ್, ಹೆಲೆನ್ ಡಿಸೋಜ, ಪೀಟರ್ ಡಿಸೋಜ, ನೊಲಿನ್, ರೋಷಲ್, ಉಪಸ್ಥಿತರಿದ್ದು ಸಹಕರಿಸಿದರು.
ಹಬ್ಬದ ಸಂದೇಶವನ್ನು ಲೀನಾ ಪಿಂಟೋ ನೀಡಿದರು.
ವಿಶೇಷ ಆಮಂತ್ರಿಕರಾಗಿ ಹೆನ್ರಿ ಡಿಸೋಜ, ಪಾಲ್ ಡಿಸೋಜ, ಜಾರ್ಜ್ ಪಿಂಟೊ ಭಾಗವಹಿಸಿದರು.
ಈ ಸಂದರ್ಭದಲ್ಲಿ ಎಸೋಸಿಯೇಷನ್ ನ ಸದಸ್ಯರಿಂದ ಸಂಗೀತ, ಕಿರು ಪ್ರಹಸನ, ನೃತ್ಯ ನಡೆಯಿತು.
ಮಾಜಿ ಅಧ್ಯಕ್ಷ ದುಲ್ಸಿನ್ ಫುರ್ತಾದೋ ಧನ್ಯವಾದ ಸಮರ್ಪಸಿದರು.


ಲಕ್ಷ್ಮೀ ಕ್ಯಾಟರರರ್ಸ್ ನ ಮಾಲಕರದ ಸತೀಶ್ ಶೆಟ್ಟಿ, ಭಾರತದ ನೇವಿಯ ನಿವ್ರತ್ತ ಅಧಿಕಾರಿ ಸಂಪತ್ ಶೆಟ್ಟಿ, ಕನ್ನಡ ಸಂಘ ಸಯನ್ ನ ಅಧ್ಯಕ್ಷ ಪ್ರವೀಣ್ ಭಟ್, ಜತೆ ಕೋಶಾಧಿಕಾರಿ ದಯಾನಂದ ಮೂಲ್ಯ, ಜತೆ ಕಾರ್ಯದರ್ಶಿಗಳಾದ ಜಯಶೀಲ ಮೂಲ್ಯ, ಉಮೇಶ್ ಶೆಟ್ಟಿ ಕುಕ್ಕುಂದೂರು,
ಉದ್ಯಮಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕೊನೆಗೆ ಎಸೋಸಿಯೇಷನ್ ನ ಸದಸ್ಯರು ತಯಾರಿಸಿದ ಹೊಸ ಅಕ್ಕಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.



Related posts

ದಿವಾಕರ್ ಕರ್ಕೇರರ ಅಭಿನಂದನಾ ಸಮಾರಂಭ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಕ್ಷಿತ್ ಸತೀಶ್ ಶೆಟ್ಟಿ ಗೆ ಶೇ. 93.60 ಅಂಕ.

Mumbai News Desk

ಜನವರಿ 1, 26ರಿಂದ ಮತ್ಸ್ಯಗಂಧ ರೈಲು ಪ್ರಯಾಣದಲ್ಲಿ ವ್ಯತ್ಯಯ; ಪನ್ವೇಲ್‌ನಲ್ಲೇ ನಿಲ್ಲಲಿವೆ ನೇತ್ರಾವತಿ, ಮತ್ಸ್ಯಗಂಧ ಎಕ್ಸ್‌ಪ್ರೆಸ್

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಶೈಕ್ಷಣಿಕ ನೆರವು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮ ಹಾಗೂ ಶಾಲಾ ಪರಿಕರ ವಿತರಣೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ – ಕಲ್ವಾ ಸ್ಥಳೀಯ ಕಚೇರಿಯ “ಆಟಿಡೊಂಜಿ ದಿನ” ಸಾಂಸ್ಕೃತಿಕ ಉತ್ಸವ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ ದೇವಸ್ಥಾನದ  ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk