







ಮಂಗಳೂರು ಮೂಲತ್ವ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ವತಿಯಿಂದ 6 ನವೆಂಬರ್ 2024 ರಂದು ಮಣಿಪಾಲ್ ಶಾಲೆ, ಅತ್ತಾವರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಕೃತಕ ಬುದ್ಧಿಮತ್ತೆ (AI) ಉದ್ಯೋಗಾವಕಾಶಗಳ ಕುರಿತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ರತಕ ಬುದ್ದಿಮತ್ತೆ (AI ) ವೃತ್ತಿಯಲ್ಲಿ ಅಗತ್ಯವಿರುವ ಕೌಶಲ್ಯಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೆಲುಕು ಹಾಕುವ ತಂತ್ರಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಇಂಟರಾಕ್ಟಿವ್ ಅಧಿವೇಶನಗಳ ಮೂಲಕ, ವಿದ್ಯಾರ್ಥಿಗಳು AI ಕ್ಷೇತ್ರದ ಅಭಿವೃದ್ಧಿ ಮತ್ತು ಅದರ ಉದ್ಯೋಗಾವಕಾಶಗಳ ಕುರಿತು ಅಮೂಲ್ಯ ಮಾರ್ಗದರ್ಶನವನ್ನು ಪಡೆದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಯಾದ ಅಕ್ಷತ ಕದ್ರಿ, ಲಕ್ಷ್ಮೀಶ ಪಿ ಕೋಟ್ಯಾನ್ ಮತ್ತು ಪ್ರಥಮ್ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಅಧ್ಯಾಪಕರು ಭಾಗಿಯಾಗಿದ್ದು, ಶಿಬಿರ ಯಶಸ್ವಿಯಾಗಿ ನಡೆಯಿತು ಎಂದು ಟ್ರಸ್ಟಿನ ಅಧ್ಯಕ್ಷರಾದ ಪ್ರಕಾಶ್ ಮೂಲತ್ವ ತಿಳಿಸಿದ್ದಾರೆ.