30.9 C
Mumbai
June 8, 2026
Mumbai News Kannada
ಸುದ್ದಿ

ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ ನವಿ ಮುಂಬಯಿ ಶಾಖೆಯ ಸದಸ್ಯರಿಂದ ಪನ್ವೇಲ್‌ನ ಗಿರಿಜಾ ವೆಲ್ಫೇರ್‌ ಆಶ್ರಮಕ್ಕೆ ಭೇಟಿ






ನಾವು ಸಮಾಜದಿಂದ ಏನನ್ನು ಪಡೆದುಕೊಳ್ಳುವೆವೋ ಅದೇ ರೀತಿಯಲ್ಲಿ ಸಮಾಜಕ್ಕೆ ನಮ್ಮಿಂದಾದಷ್ಟನ್ನು ನೀಡಬೇಕು. ಹೀಗೆ ಮಾಡಿದರೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತಾಗುತ್ತದೆ ಮಾತ್ರವಲ್ಲದೆ ಇದರಿಂದ ನಮ್ಮ ಸಮಾಜದಲ್ಲಿನ ಅವಕಾಶ ವಂಚಿತರಿಗೆ ಸಹಾಯ ಮಾಡಿದಂತೆಯೂ ಆಗುತ್ತದೆ, ಜನತಾ ಸೇವೆಯೇ ಜನಾರ್ದನ ಸೇವೆ ಎಂಬ ಮಾತಿದೆ. ನಮ್ಮಲ್ಲಿದ್ದುದರಲ್ಲಿನ ಸ್ವಲ್ಪವನ್ನು ಅವಶ್ಯಕತೆ ಇರುವವರಿಗೆ ದಾನ ರೂಪದಲ್ಲಿ ನೀಡಿದಲ್ಲಿ ದಾನ ನೀಡಿದರಿಗೂ ಹಾಗೂ ಅದನ್ನು ಪಡೆಯುವವರಿಗೂ ಆನಂದ ಸಿಗುತ್ತದೆ . ಇದೇ ಆದರ್ಶವನ್ನು ಮುಂದಿಟ್ಟುಕೊಂಡು ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ ನವಿ ಮುಂಬಯಿ ಶಾಖೆಯ ಸದಸ್ಯರು ಫೆಬ್ರವರಿ 23 ರಂದು ಪನ್ವೇಲ್‌ನ ನೇರೆ ಗ್ರಾಮದಲ್ಲಿರುವ ಗಿರಿಜಾ ವೆಲ್ಫೇರ್‌ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ನಿವಾಸಿಗಳಿಗೆ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಬಿಸ್ಕೀಟ್‌, ಉಡುಪು ಮುಂತಾದ ಜೀವನಾವಶ್ಯಕ ಸಾಮಾಗ್ರಿಗಳನ್ನು ಆಶ್ರಮದ ಮೇಲ್ವಿಚಾರಕರಾದ ಹರ್ಷದಾ ಸಫಲಿಗೆರಿಗೆ ಹಸ್ತಾಂತರಿಸಿದರು.

ಈ ಆಶ್ರಮವು ತುಳುವರೇ ಆಗಿರುವ ಸುನಂದಾ ಸಫಲಿಗರಿಂದ ನಡೆಸಲ್ಪಡುತ್ತಿದ್ದು ಇಲ್ಲಿ ಮಾನಸಿಕ ರೋಗಿಗಳು, ಕ್ಯಾನ್ಸರ್‌ ಫೀಡಿತರು, ತಮ್ಮ ತಮ್ಮ ಕುಟುಂಬದಿಂದ ನಿರ್ಲಕ್ಷಿಸಲ್ಪಟ್ಟವವರು ಮುಂತಾದವರಿಗೆ ಆಶ್ರಯ ನೀಡಿ ಅವರನ್ನು ಮಮತೆಯಿಂದ ನೋಡಿಕೊಳ್ಳಲಾಗುತ್ತಿದೆ ಅಲ್ಲದೆ ತಮ್ಮ ಹೆತ್ತರಿವರಿಗೆ ಸಾಕಲು ಸಾಧ್ಯವಾಗದ ಅನೇಕ ಎಳೆಯ ಮಕ್ಕಳನ್ನು ಕೂಡಾ ಸುನಂದಾ ಸಫಲಿಗರು ಈ ಆಶ್ರಮದಲ್ಲಿ ತಮ್ಮ ಸ್ವಂತ ಮಕ್ಕಳಂತೆಯೇ ನೋಡಿಕೊಳ್ಳುತ್ತಿರುವುದು ಮಾತ್ರವಲ್ಲದೆ ಅವರಿಗೆ ವಿದ್ಯಾರ್ಜನೆ ಮಾಡುವ ಅವಶಕಾವಶನ್ನು ಒದಗಿಸಿ ದೊಡ್ಡವರಾದ ಮೇಲೆ ಅವರಿಗೆ ಉದ್ಯೋಗದ ಅವಶಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ಮಂಡಳಿಯ ಸದಸ್ಯರೊಂದಿಗೆ ಮಾತನಾಡುತ್ತಾ ಹರ್ಷದಾ ಸಫಲಿಗ ತಿಳಿಸಿದರು. ಆಶ್ರಮಕ್ಕೆ ಸರಕಾರದಿಂದ ಯಾವುದೇ ಅನುದಾನವಾಗಲೀ ಅಥವಾ ಇತರ ಯಾವುದೇ ಸಹಾಯವಾಗಲೀ ಸಿಗುತ್ತಿಲ್ಲ. ಆಶ್ರಮದ ತಿಂಗಳ ಬಾಡಿಗೆ ಮತ್ತು ಇತರ ಎಲ್ಲಾ ವೆಚ್ಚಗಳನ್ನು ಸಾರ್ವಜನಿಕರು ನೀಡುತ್ತಿರುವ ಸಹಾಯ ಧನದಿಂದಲೇ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು ಉದಾರ ದಾನ ನೀಡಿದ ಸಲುವಾಗಿ ಮಂಡಳಿಯ ಸದಸ್ಯರ ಉಪಕಾರ ಸ್ಮರಿಸಿ ಇದೇ ರೀತಿಯಲ್ಲಿ ಆಗಾಗ ಆಶ್ರಮಕ್ಕೆ ನೀಡುತ್ತಾ ಇರಬೇಕೆಂದು ಕೇಳಿಕೊಂಡರು. ಗಿರಿಜಾ ವೆಲ್ಫೇರ್‌ ಆಶ್ರಮಕ್ಕೆ ಭೇಟಿ ನೀಡಿದ ನವಿ ಮುಂಬಯಿ ಶಾಖೆಯ ಸದಸ್ಯರಲ್ಲಿ ಜಾನಕಿ ಬಂಗೇರ,ತೇಜಸ್ವಿ ಮಲ್ಪೆ, ಹೇಮಾ ಸುವರ್ಣ, ಹೇಮಲತಾ ಕೊಟ್ಯಾನ್‌, ರಂಜನಿ ಪುತ್ರನ್‌, ಗೀತಾ ಗರುಡ್‌, ಸಿದ್ದಾರ್ಥ ಕೋಟ್ಯಾನ್‌, ಮೋಹನ ಸುವರ್ಣ, ರತ್ನಾಕರ ಬಂಗೇರ ಮತ್ತು ಸೋಮನಾಥ ಎಸ್‌.ಕರ್ಕೇರರು ಸೇರಿದ್ದರು.
ಈ ಆಶ್ರಮಕ್ಕೆ ಭೇಟಿ ನೀಡಲು/ದೇಣಿಗೆ ನೀಡಲು ಇಚ್ಚಿಸುವವರು 996933909 ಈ ನಂಬ್ರವನ್ನು ಸಂಪರ್ಕಿಸಬಹುದಾಗಿದೆ.
ವರದಿ : ಸೋಮನಾಥ ಎಸ್‌.ಕರ್ಕೇರ, 9819321186



Related posts

ಕುಂದಾಪುರ : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

Mumbai News Desk

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್‌ ಉಮೇಶ್‌ ವಿಧಿವಶ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ   ಸದಸ್ಯರಾಗಿ ಗಣೇಶ್ ಶೆಟ್ಟಿ ತನಿಷ್ಕ, ಮತ್ತು ಹರೀಶ್ ಶೆಟ್ಟಿ ಪಡುಕುದ್ರು ಇವರು ಸೇರ್ಪಡೆ

Mumbai News Desk

ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಸಂಸ್ಥಾಪಕ ಎನ್ ವಿನಯ ಹೆಗ್ಡೆ ನಿಧನ

Mumbai News Desk

ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಟಿ.ಕರ್ಕೇರ ಅವರಿಗೆ ಸಹಕಾರ ರತ್ನ ಪ್ರಶಸ್ತಿ

Mumbai News Desk

ರಾಷ್ಟ್ರ, ಕರ್ನಾಟಕ ಮತ್ತು ಮಹಾರಾಷ್ಟ್ರದ ಇಂದಿನ ಸಂಕ್ಷಿಪ್ತ ಮುಖ್ಯಾಂಶಗಳು

Mumbai News Desk