ಮೂಲ್ಕಿ ನ.9. ಪತ್ನಿ ಮಗುವನ್ನು ಹತ್ಯೆಗೈದು ತಾನೂ ಅತ್ಮಹತ್ಯೆ ಮಾಡಿದ ಘಟನೆ ಮೂಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ ಹತ್ಯೆಗೈದಾತನನ್ನು ಕಾರ್ತಿಕ್ ಭಟ್ (32)ಎಂದು ಗುರುತಿಸಲಾಗಿದೆ ಪತ್ನಿ ಪ್ರಿಯಾಂಕ ((28) ಮಗು ಹೃದಯ್ (4) ಎಂದು ಗುರುತಿಸಲಾಗಿದೆ. ಶುಕ್ರವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಕಾರ್ತಿಕ್ ಪಕ್ಷಿಕೆರೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಹತ್ಯೆಗೈದು ಮೂಲ್ಕಿಯ ಬೆಳ್ಳಾಯರು ನಲ್ಲಿ ರೈಲಿಗೆ ತಲೆಕೆಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಶುಕ್ರವಾರ ಮದ್ಯಾಹ್ನ ಯುವಕನೋರ್ವ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಹೆ ತನಿಖೆ ನಡೆಸುವಾಗ ಅತ್ಮಹತ್ಯೆ ಮಾಡಿಕೊಂಡವನು ಪಕ್ಷಿಕೆರೆಯ ಕಾರ್ತಿಕ್ ಭಟ್ ಎಂದು ತಿಳಿದಿದ್ದು ಮನೆಗೆ ಬಂದಾಗ ಪತ್ನಿ ಮಗು ಅತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕಾರ್ತಿಕ್ ಭಟ್ ತಂದೆ ಜನಾರ್ದನ ಭಟ್ ಪಕ್ಷಿಕೆರೆ ಪೇಟೆಯಲ್ಲಿ ಕಳೆದ ಹಲವು ವರ್ಷಗಳಿಂದ ತನ್ನ ಮಗ ಕಾರ್ತಿಕ್ ನ ಹೆಸರಲ್ಲೇ ಚಿಕ್ಕ ಹೊಟೇಲೊಂದನ್ನು ನಡೆಸುತ್ತಿದ್ದು, ಜನಾರ್ಧನ ಭಟ್ ಅವರಿಗೆ ಎರಡು ಹೆಣ್ಣುಒಂದು ಗಂಡು ಮಕ್ಕಳಿದ್ದು
ಹೊಟೇಲು ಆದಾಯದಲ್ಲೇ ಮೂರು ಮಕ್ಕಳನ್ನು ಸಾಕಿ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದರು. ಕಾರ್ತಿಕ್ ಮದುವೆ ಆದ ನಂತರ ತನ್ನ ತಂದೆ ತಾಯಿ ಬಳಿ ಉತ್ತಮ ಸಂಬಂಧ ಹೊಂದಿಲ್ಲ ಎನ್ನಲಾಗಿದ್ದು, ಮನೆಯ ಪ್ರತ್ಯೇಕ ಕೋಣೆಯಲ್ಲಿ ತನ್ನ ಹೆಂಡತಿ ಮಗುವಿನೊಂದಿಗೆ ಇರುತ್ತಿದ್ದ. ತಂದೆ ಜನಾರ್ದನ ಭಟ್ ಮತ್ತು ಪತ್ನಿ ಶಾಮಲ ಶುಕ್ರವಾರ ಹೋಟೇಲಿಗೆ ಹೋದ ನಂತರ ಘಟನೆ ನಡೆದಿದ್ದು, ಒಂದು ಕೊಣೆಯಲ್ಲಿ ಕಾರ್ತಿಕ್ ಪತ್ನಿ ಮಗು ಕೊಲೆಯಾಗಿ ಬಿದ್ದಿದ್ದರೂ ಇವರಿಗೆ ತಿಳಿದಿರಲಿಲ್ಲ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
