ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ಕಳೆದ 77 ವರ್ಷಗಳಿಂದ ನಿರಂತರವಾಗಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ಸಾಂಪ್ರದಾಯಕ ಕಂಬಳವನ್ನು ಬಲು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದು ಪ್ರತಿವರ್ಷ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೊಂದು ಊರುಗಳಿಂದ ಓಟದ ಕೋಣಗಳು ಈ ಕಂಬಳಕ್ಕೆ ಬರುವುದರಿಂದ ಕಂಬಳಾಭಿಮಾನಿಗಳಿಗೆ ಕೊಡೇರಿ ಕಂಬಳವೆಂದರೆ ಕುತೂಹಲ ಮತ್ತು ನಿರೀಕ್ಷೆ ಸಹಜ. ಇದು ಸಾಂಪ್ರದಾಯಕ ಕಂಬಳವಾದರು ಕೂಡ ಓಟದ ಕೋಣಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತ ಕೋಣಗಳ ಮಾಲಕರಿಗೆ ನಗದು ಪುರಸ್ಕಾರದೊಂದಿಗೆ ಶಾಶ್ವತ ಫಲಕ ನೀಡಿ ಗೌರವಿಸುತ್ತಾ ಬಂದಿದ್ದು ಬಿಲ್ಲವ ಸಮುದಾಯ ಬಾಂಧವರ, ಊರ ಮತ್ತು ಪರವೂರ ಕೊಡುಗೈದಾನಿಗಳ ಸಹಕಾರದಿಂದ ಈ ಕಂಬಳೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ವರ್ಷಂಪ್ರತಿಯಂತೆ ಈ ವರ್ಷವು ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ ಇವರ ಆಶ್ರಯದಲ್ಲಿ ನವೆಂಬರ್ 21 ರಂದು ಕೊಡೇರಿಯಲ್ಲಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ 78 ನೇ ವರ್ಷದ ಸಾಂಪ್ರದಾಯಕ ಕಂಬಳೋತ್ಸವವನ್ನು ಹಮ್ಮಿಕೊಂಡಿದ್ದು ಸರಕಾರದ ನಿಯಮಗಳ ಅನುಸಾರವಾಗಿ ಕಂಬಳ ಆಚರಿಸುತ್ತಿರುವುದಲ್ಲದೆ ಓಟದ ಕೋಣಗಳಿಗೆ ಹಗ್ಗ ಸಬ್ ಜ್ಯೂನಿಯರ್ ವಿಭಾಗ, ಹಗ್ಗ ಕಿರಿಯ ವಿಭಾಗ (ನಾಲ್ಕು ಹಲ್ಲು ಒಳಗಿನ ಕೋಣಗಳು), ಹಗ್ಗ ಹಿರಿಯ ವಿಭಾಗ (ನಾಲ್ಕು ಹಲ್ಲು ಮೇಲ್ಪಟ್ಟ ಕೋಣಗಳು) ಮತ್ತು ಹಲಗೆ ವಿಭಾಗ (ಮುಕ್ತ) ಎಂಬ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ಕನಿಷ್ಠ ಅವಧಿಯಲ್ಲಿ ನಿಗದಿತ ಗುರಿ ತಲುಪಿದ ಪ್ರಥಮ, ದ್ವಿತೀಯ ಮತ್ತು ತ್ರತೀಯ ಸ್ಥಾನ ಪಡೆದ ಕೋಣಗಳ ಮಾಲಕರಿಗೆ ಆಕರ್ಷಕ ನಗದು ಬಹುಮಾನ ಮತ್ತು ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಗುವುದು ಹಾಗೂ ಭಾಗವಹಿಸಿದ ಎಲ್ಲಾ ಕೋಣಗಳ ಮಾಲಕರಿಗೆ ಗೌರವ ವೀಳ್ಯ ಮರ್ಯಾದೆ ನೀಡಲಾಗುವುದೆಂದು ಸಂಘದ ಪ್ರಕಟಣೆ ತಿಳಿಸಿದೆ.
ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕಗಳ ಪ್ರಾಯೋಜಕತ್ವವನ್ನು ಮಹಾದೇವ ಪೂಜಾರಿ ಮುಂಬೈ, ರಾಘವೇಂದ್ರ ಎಮ್. ಪೂಜಾರಿ, ದಿ. ಸುಬ್ಬಯ್ಯ ಪೂಜಾರಿ ಸ್ಮರಣಾರ್ಥ ಮಕ್ಕಳು, ಶೇಖರ ಪೂಜಾರಿ, ಪ್ರಮೋದ ಪೂಜಾರಿ ನಾಸಿಕ್, ವೆಂಕಟೇಶ್ ಪೂಜಾರಿ, ದಿ. ಕೋಟಿ ಪೂಜಾರಿ ಸ್ಮರಣಾರ್ಥ ಮಕ್ಕಳು-ಮೊಮ್ಮಕ್ಕಳು, ರಾಜೇಶ ಕ್ರಷ್ಣ ಪೂಜಾರಿ ಮುಂಬೈ, ಶೇಖರ ಪೂಜಾರಿ ಬೆಂಗಳೂರು, ಗೋಪಾಲ ಪೂಜಾರಿ ಬೆಂಗಳೂರು, ದಿ. ಕೃಷ್ಣ ಪೂಜಾರಿ ಸ್ಮರಣಾರ್ಥ ಮಕ್ಕಳು-ಅಳಿಯ, ರಾಘವೇಂದ್ರ ಸಿ. ಪೂಜಾರಿ, ಗಣೇಶ ಪೂಜಾರಿ, ದಿ. ಮುಡೂರ ಪೂಜಾರಿ ಸ್ಮರಣಾರ್ಥ ಮಕ್ಕಳು ವಿವಿಧ ಪುರಸ್ಕಾರಗಳ ಪ್ರಾಯೋಜಕರಾಗಿರುತ್ತಾರೆ.
ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ 78 ನೇ ವರ್ಷದ ಸಾಂಪ್ರದಾಯಕ ಕಂಬಳೋತ್ಸವಕ್ಕೆ ಕೋಣಗಳ ಮಾಲಕರು ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ತಮ್ಮ ಬಾಬ್ತು ಓಟದ ಕೋಣಗಳನ್ನು ತೆಗೆದುಕೊಂಡು ಬಂದು ಸ್ಪರ್ಧೆಯಲ್ಲಿ ಭಾಗವಹಿಸುವುದಲ್ಲದೆ ಕಂಬಳಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಂಬಳೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ಹೊಸ್ಮನೆ, ಮೇಲ್‌ಮೊಳೆಬೈಲು, ಕೆಳಾಮೊಳೆಬೈಲು ಕುಟುಂಬಸ್ಥರು ಮತ್ತು ಗ್ರಾಮಸ್ಥರು, ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಮಹಾದೇವ ಪೂಜಾರಿ ಮುಂಬೈ, ಅಧ್ಯಕ್ಷರಾದ ರಾಘವೇಂದ್ರ ಎಮ್. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಬಿಲ್ಲವ, ಗೌರವ ಕೋಶಾಧಿಕಾರಿ ರಾಘವೇಂದ್ರ ಸಿ. ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.
