ಅಂಧೇರಿ ಪಶ್ಚಿಮ ವೀರ ದೇಸಾಯಿ ರೋಡ್, ಶ್ರೀ ಮಹಾಲಕ್ಷ್ಮೀ ಕಾಲನಿಯ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಇದರ 36ನೇ ಮಹಾಪೂಜೆ ಮತ್ತು ಭಜನಾ ಮಂಗಳೋತ್ಸವವು ತಾ 23.11.2024 ಮತ್ತು 24.11.24ನೇ ಶನಿವಾರ ಮತ್ತು ಆದಿತ್ಯವಾರದಂದು ವಿಜೃಂಭಣೆಯಿಂದ ಜರಗಲಿರುವುದು.
ಕಾರ್ಯಕ್ರಮ :
23.11.24 ಶನಿವಾರ ಬೆಳಿಗ್ಗೆ ಗಂಟೆ 7.00ಕ್ಕೆ ಗಣಹೋಮ, 8.30 ಕ್ಕೆ ಪ್ರಸಾದ ವಿತರಣೆ
24.11.24 ನೇ ಆದಿತ್ಯವಾರ ಬೆಳ್ಳಿಗ್ಗೆ 6.30 ಗಂಟೆಗೆ ಕಳಶಾರೋಹಣ ಮತ್ತು ದೀಪ ಪ್ರಜ್ವಲನೆ ,ಬೆಳಿಗ್ಗೆ 7 ರಿಂದ 8.00 ರ ತನಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯವರಿಂದ ಭಜನೆ,
8.00 ರಿಂದ ಸಂಜೆ 4.00 ರ ತನಕ ಆಮಂತ್ರಿತ ಭಜನಾ ಮಂಡಳಿಯವರಿಂದ ಭಜನೆ,
4.00 ರಿಂದ 6.00 ರ ತನಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯವರಿಂದ ಭಜನೆ, ಸಂಜೆ 6.30ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆ.
ಆದಿತ್ಯವಾರ ಮಧ್ಯಾಹ್ನ 12.00ರಿಂದ 2.30 ರ ತನಕ ಸಾರ್ವಜನಿಕ ಅನ್ನಸಂತರ್ಪಣೆ.
ಭಾಗವಹಿಸುವ ಭಜನಾ ಮಂಡಳಿಗಳು :
ಶ್ರೀ ಮದ್ಭರತ ಮಂಡಳಿ ಮತ್ತು ಪೌರಾಣಿಕ ವಾಚಕ ಸಮಿತಿ ಅಂಧೇರಿ , ಶ್ರೀ ಮಹಿಷರ್ದಿನಿ ದೇವಸ್ಥಾನ ಬೋರಿವಿಲಿ, ಶ್ರೀ ಮಹಾವಿಷ್ಣು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಿಲಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್ ಮುಂಬಾಯಿ, ಶ್ರೀ ಜೈ ಗುರುದೇವ ಮಕ್ಕಳ ಭಜನಾ ಮಂಡಳಿ ನವಿಮುಂಬಯಿ, ಶ್ರೀ ಲಕ್ಷ್ಮೀನಾರಾಯಣ ಭಜನಾ ಸಮಿತಿ ಮಿರಾರೋಡ್, ಶ್ರೀ ದತ್ತಾತ್ರೇಯ ಮಿತ್ರ ಭಜನಾ ಮಂಡಳಿ ಅಸಲ್ಪ, ಶ್ರೀ ಶನೀಶ್ವರ ದೇವಸ್ಥಾನ ನೆರುಲ್.
ಭಕ್ತಾದಿಗಳು ತಮ್ಮ ಬಂಧು ಬಾಂಧವರು ಹಾಗೂ ಇಷ್ಟ ಮಿತ್ರರೊಂದಿಗೆ ಚಿತೈಸಿ ಶ್ರೀ ಮಹಾಲಕ್ಷ್ಮೀ ದೇವಿಯ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಸರ್ವ ಸದಸ್ಯರ ಪರವಾಗಿ ಮಂಡಳಿಯ ಟ್ರಸ್ಟಿಗಳು ಮತ್ತು ಕಾರ್ಯಕಾರಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.