September 6, 2026
Mumbai News Kannada
ಪ್ರಕಟಣೆ

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ :ಜ. 7 ರಂದು 36ನೇ ವಾರ್ಷಿಕೋತ್ಸವ





ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ :
ಜ. 7 ರಂದು 36ನೇ ವಾರ್ಷಿಕೋತ್ಸವ, ಸನ್ಮಾನ, ಕೊಡುಗೈದಾನಿಗಳಿಗೆ ಸತ್ಕಾರ, ಪ್ರತಿಭಾ ಪುರಸ್ಕಾರ ವಿದ್ಯಾರ್ಥಿವೇತನ ವಿತರಣೆ ಮತ್ತು ಗಾನ-ನೃತ್ಯ ವೈಭವದ ಸಾಂಸ್ಕೃತಿಕ ಉತ್ಸವ

ಮುಂಬೈ. ಜ 1 : ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿಯು ಶ್ರೀ ನಾರಾಯಣ ಗುರುಗಳ ತತ್ವ – ಉಪದೇಶಗಳನ್ನು ಅಳವಡಿಸಿಕೊಂಡು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿವರ್ಷ ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡುವುದಲ್ಲದೆ ಅಸಹಾಯಕ ಸಮಾಜ ಬಾಂಧವರಿಗೆ ವೈದ್ಯಕೀಯ ನೆರವು ನೀಡುತ್ತಾ, ವಧು-ವರರ ಅನ್ವೇಷಣೆಗೆ ಸಹಾಯ ಮಾಡುತ್ತಾ ಸದಸ್ಯ ಬಾಂಧವರ ಸುಖ-ದುಃಖಗಳಿಗೆ ಸದಾ ಸ್ಪಂದಿಸಿ ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಾ ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿ ನಿರ್ವಹಿಸಿ ಸದಸ್ಯರ, ಹಿತೈಷಿಗಳ ಹಾಗೂ ಸಮಾಜ ಬಾಂಧವರ ಪ್ರಶಂಶೆಗೆ ಪಾತ್ರವಾಗಿದೆ ಇದೀಗ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿಯವರ ನೇತ್ರತ್ವದಲ್ಲಿ ಜನವರಿ 7 ರವಿವಾರದಂದು ಬೆಳಿಗ್ಗೆ 9-00 ರಿಂದ ಪ್ರಾಚಾರ್ಯ ಬಿ. ಎನ್. ವೈದ್ಯ ಸಭಾಗೃಹ, ಇಂಡಿಯನ್ ಎಜುಕೇಶನ್ ಸೊಸೈಟಿ (ಕಿಂಗ್ ಜಾರ್ಜ್ ಹೈಸ್ಕೂಲ್), ಹಿಂದೂ ಕೊಲನಿ, ದಾದರ್ (ಪೂರ್ವ) ಇಲ್ಲಿ ಸಂಘದ 36ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಧಕರಿಗೆ ಸನ್ಮಾನ, ಕೊಡುಗೈದಾನಿಗಳಿಗೆ ಸತ್ಕಾರ, ಪ್ರತಿಭಾ ಪರಸ್ಕಾರ-ವಿದ್ಯಾರ್ಥಿವೇತನ ವಿತರಣೆ, ಮತ್ತು ಗಾನ-ನೃತ್ಯ ವೈಭವದ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳೊಂದಿಗೆ ಸಭಾ ಕಾರ್ಯಕ್ರಮ ಜರಗಲಿದ್ದು ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಸಭಾಧ್ಯಕ್ಷತೆ ವಹಿಸಲಿದ್ದು ಗೌರವಾಧ್ಯಕ್ಷರಾದ ಸುರೇಶ ಎಸ್. ಪೂಜಾರಿ ಜ್ಯೋತಿ ಪ್ರಜ್ವಲಿಸಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಬಿಲ್ಲವ ಛೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿçÃಸ್ ಕಾರ್ಯಾಧ್ಯಕ್ಷರಾದ ಎನ್. ಟಿ. ಪೂಜಾರಿ, ಮುಂಬಯಿ ಹೈಕೋರ್ಟ್ನ ಖ್ಯಾತ ನ್ಯಾಯವಾದಿ ಆನಂದ ಎಮ್. ಪೂಜಾರಿ, ಮುಂಬಯಿ ಉದ್ಯಮಿ ಸುರೇಶ್ ಸಿ. ಪೂಜಾರಿ ಬಡಾಕೆರೆ ನಾವುಂದ, ಆಯಿಲ್ ಆ್ಯಂಡ್ ಗ್ಯಾಸ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಉದಯ ರಾಮ, ಅರುಣಾ ಟೆಕ್ಸ್ಟೈಲ್ಸ್ ಆ್ಯಂಡ್ ಡಿಸೈರ‍್ಸ್ ಮಾಲಕರಾದ ವಿಶ್ವನಾಥ ಎ. ಪೂಜಾರಿ, ಬಾಲಾಜಿ ಪ್ರಿಂರ‍್ಸ್ ಮಾಲಕರಾದ ರಮೇಶ ಜಿ. ಬಿಲ್ಲವ, ಮುಂಬಯಿ ಉದ್ಯಮಿಗಳಾದ ರಾಜು ನಂದಿ ಪೂಜಾರಿ, ಬಾಬು ಸಿ. ಪೂಜಾರಿ ಬಾಗಾಳಮನೆ ಏಳಜಿತ್ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಇದೇ ವೇಳೆ ಸಂಘಟನಾಭಿವೃದ್ಧಿಗಾಗಿ ಸದಾ ಸಹಕರಿಸುತ್ತಿರುವ ಸಮುದಾಯದ ಗಣ್ಯರಾದ ನ್ಯಾಯವಾದಿ ಆನಂದ ಎಮ್. ಪೂಜಾರಿ, ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಇವರನ್ನು ಸಮುದಾಯದ ಜನತೆಯ ಸಮ್ಮುಖದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಗುವುದು. ಅಲ್ಲದೆ ನೂತನ ಕಾರ್ಯಾಲಯ ಖರೀದಿಸಲು ದೇಣಿಗೆ ನೀಡಿದ ಕೊಡುಗೈದಾನಿಗಳಿಗೆ ಸತ್ಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆಯಾಗಲಿದ್ದು ಮನೋರಂಜನೆ ಕಾರ್ಯಕ್ರಮ ನೀಡಿದ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ಸ್ಮರಣಿಕೆ ನೀಡಲಾಗುವುದೆಂದು ಸಂಘದ ಪ್ರಕಟಣೆ ತಿಳಿಸಿದೆ.

ಅಂದು ದಿನವಿಡಿ ಜರಗುವ ಎಲ್ಲಾ ಕಾರ್ಯಕ್ರಮಗಳಿಗೂ ಸದಸ್ಯರು, ಸಮಾಜ ಬಾಂಧವರು ಹಾಗೂ ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಗೌರವಾಧ್ಯಕ್ಷರಾದ ಸುರೇಶ ಎಸ್. ಪೂಜಾರಿ, ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಉಪಾಧ್ಯಕ್ಷರುಗಳಾದ ನರಸಿಂಹ ಎಂ. ಬಿಲ್ಲವ, ಆನಂದ ಕೆ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ಸುಶೀಲಾ ಆರ್. ಪೂಜಾರಿ, ಹರೀಶ್ ಎನ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ರತ್ನಾಕರ ಎಸ್. ಪೂಜಾರಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳಾದ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ. ಪೂಜಾರಿ ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರನ್ನು ( 9869071413 / 9867811733 / 9820718785) ಸಂಪರ್ಕಿಸುವAತೆ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ. ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ಹಾಗೂ ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್ ತಿಳಿಸಿದ್ದಾರೆ.



Related posts

ಮೇ 12 :ರವಿನಾಥ್ ಶೆಟ್ಟಿ ತೋನ್ಸೆ ನೇತೃತ್ವದಲ್ಲಿ ಗುಜರಾತ್ ಭರೂಚ್ ಶ್ರೀ ಗುಮನ್ ದೇವ್ ಮಂದಿರದಲ್ಲಿ ಶ್ರೀ ಬಾಲಾಜಿ ವೆಂಕಟೇಶ್ವರ ಸ್ವಾಮಿ ಪ್ರಾಣಪ್ರತಿಷ್ಠೆ , ಬ್ರಹ್ಮಕಲಶೋತ್ಸವ , ಶ್ರೀನಿವಾಸ ಕಲ್ಯಾಣ. 

Mumbai News Desk

ಉಲ್ಲಾಸನಗರದಲ್ಲಿ ಆ.5ರಂದು ‘ಅಮಾತ್ಯ – ನಂದಿನಿ’ ಯಕ್ಷಗಾನ ಬಯಲಾಟ ಹಾಗೂ ಐರ್ ಬೈಲು ಆನಂದ ಶೆಟ್ಟರಿಗೆ ಸ್ವರ್ಣ ಸನ್ಮಾನ

Mumbai News Desk

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ

Mumbai News Desk

ಮಿಸ್ಟರ್/ಮಿಸ್/ಮಿಸೆಸ್ ಕರ್ನಾಟಕ ಸ್ಟೈಲ್ ಐಕಾನ್‌-2025: ಗ್ರ್ಯಾಂಡ್ ಫಿನಾಲೆ ಡಿ. 18 ರಂದು ನಿಶಿತಾ ಸೂರ್ಯಕಾಂತ್ ಸುವರ್ಣ ಆಯೋಜನೆಯಲ್ಲಿ ‘ಸೀಸನ್‌ 6’ ರ ಅಂತಿಮ ಹಂತ

Mumbai News Desk

ಆಗಸ್ಟ್ 2 ಥಾಣೆಯಲ್ಲಿ : ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಇದರ ಜಂಟಿ ಆಯೋಜನೆಯಲ್ಲಿ “ರಾಮ ದರ್ಶನ- ಗದಾಯುದ್ಧ” ಯಕ್ಷಗಾನ ಪ್ರದರ್ಶನ.

Mumbai News Desk

ಕುಲಾಲ ಸಂಘ ಮುಂಬಯಿಯ ಕೇಂದ್ರ ಕಾರ್ಯಾಲಯದಲ್ಲಿ  ಗುರು ಪೂರ್ಣಿಮೆ ಆಚರಣೆ.

Mumbai News Desk