April 2, 2025
ಕ್ರೀಡೆ

ಕರ್ನಾಟಕ ಸಂಘ ಡೊಂಬಿವಲಿ ದಂಗಲ್ ಕ್ರೀಡಾ ಕೂಟ, : ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವುದು ಮುಖ್ಯ- ಡ. ದಿವಾಕರ ಶೆಟ್ಟಿ ಇಂದ್ರಾಳಿ

ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ


ಡೊಂಬಿವಲಿ ನ.17:  ಜಾತೀಯ ಸಂಘಟನೆಯಲ್ಲಿ ಕ್ರೀಡೆ ಅಯೋಜಿಸಲು ಬಹಳ ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಜಾತಿ, ಮತ, ಬೇಧವನ್ನು ಮರೆತು ಸರ್ವರಿಗೂ, ಸರ್ವ ಸಂಘ- ಸಂಸ್ಥೆಗಳಿಗೆ ಕ್ತೀಡಾ ಕೂಟವನ್ನು ಅಯೋಜಿಸುತ್ತಿದೆ ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಪಾಲ್ಗೊಳ್ಳುವುದು ಮುಖ್ಯ ಯಾರೊಬ್ಬರೂ ಸೋಲದೆ ಇನ್ನೊಬ್ಬರು ಗೆಲ್ಲಲು ಸಾಧ್ಯವಿಲ್ಲ ಅದರೆ ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳ ಬೇಕು ಅಗ ಕ್ರೀಡೋತ್ಸವಕ್ಕೆ ಮಹತ್ವ ಬರುತ್ತದೆ. ತಂಡದ ಮುಖಂಡರು ಕ್ರೀಡಾ ಕೂಟದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿ ಕೊಳ್ಳ ಬೇಕೆಂದು ಕರ್ನಾಟಕ ಸಂಘ ಡೊಂಬಿವಲಿ ಇದರ ಕಾರ್ಯಾಧ್ಯಕ್ಷರಾದ ಡಾ.ದಿವಾಕರ ಶೆಟ್ಟಿ ಇಂದ್ರಾಳಿ ನುಡಿದರು.


ಅವರು ನವೆಂಬರ್ 17 ರ ಸಂಜೆ ಡೊಂಬಿವಲಿ ಜಿಮ್ಕಾನದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಅಯೋಜಿಸಿದ ಕ್ರೀಡಾ ಕೂಟ ದಂಗಲ್ 2024 ಇದರ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.
ಅತಿಥಿ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅನಂದ ಶೆಟ್ಟಿ ಎಕ್ಕಾರ್ ಮಾತನಾಡುತ್ತಾ ಕರ್ನಾಟಕ ಸಂಘ ಡೊಂಬಿವಲಿ ಒಂದು ಕುಟುಂಬ ಇದ್ದಂತೆ ಕುಟುಂಬದ ಸದಸ್ಯರು ಒಂದೇ ಸೂರಿನಡಿ ಸೇರ ಬೇಕೆಂಬ ಉದ್ಧೇಶದಿಂದ ಕರ್ನಾಟಕ ಸಂಘ ಉತ್ತಮ ರೀತಿಯಲ್ಲಿ ಕ್ರೀಡಾ ಕೂಟವನ್ನು ಅಯೋಜಿಸುತ್ತಿದೆ. ಡೊಂಬಿವಲಿ ತುಳು- ಕನ್ನಡಿಗರು ನಿಜವಾಗಿಯೂ ಭಾಗ್ಯವಂತರು  ಸಂಘ- ಸಂಸ್ಥೆಯ ಸದಸ್ಯರಿಗೆ ಇಂತಹ  ಅದ್ಧೂರಿ ಕ್ರೀಡಾಕೂಟ ಡೊಂಬಿವಲಿ ಕರ್ನಾಟಕ ಸಂಘವನ್ನು ಹೊರತು ಪಡಿಸಿ ಬೇರೆ ಯಾವುದೇ ಹೊರನಾಡಿನ ಯಾವುದೇ ಸಂಘಟನೆಯು ಅಯೋಜಿಸುವುದಿಲ್ಲ. ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.


ಅತಿಥಿ ಖ್ಯಾತ ಹೋಟೆಲ್ ಉದ್ಯಮಿ ಅರುಣ್ ಶೆಟ್ಟಿ ಪಡುಕೂಡೂರು ಮಾತನಾಡುತ್ತಾ ಕ್ರೀಡೆಯು ಮಾನವನನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢ ಗೊಳಿಸುತ್ತದೆ ನಮ್ಮ ಅರೋಗ್ಯವನ್ನು ಕಾಪಡಲು ಕ್ರೀಡೆ ಪ್ರಮುಖವಾಗಿದೆ. ಇಂದಿನ ದಿನಗಳಲ್ಲಿ ಬಿಡುವಿಲ್ಲದ ಜೀವನ ಶೈಲಿ,  ಕುಲಷಿತ ಗಾಳಿ, ಆಹಾರವನ್ನು ಸೇವಿಸುತ್ತಿರುವ ನಾವು ನಮ್ಮ ದೇಹವನ್ನು ದಂಡಿಸದಿದ್ದರೆ ಅನಾರೋಗ್ಯರಾಗುವುದರಲ್ಲಿ ಸಂದೇಹವಿಲ್ಲ ಅದುದರಿಂದ ಪ್ರತಿಯೊಬ್ಬರೂ ನಿಯಮಿತ ನಡಿಗೆ, ವ್ಯಾಯಾಮವನ್ನು ಮಾಡಿ ನಮ್ಮ ಅರೋಗ್ಯ ಕಾಪಾಡುವುದರೊಂದಿಗೆ ಇಂತಹ ಕ್ರೀಡಾ ಕೂಟದಲ್ಲಿ ಭಾಗವಹಿಸಿದಾಹ ಮನಸ್ಸು ಪುಳಕಿತ ಗೊಳ್ಳುತ್ತದೆ ಕರ್ನಾಟಕ ಸಂಘದ ಕ್ರೀಡಾ ಕೂಟ ಮಹಾನಗರದ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಸಂಘದ ಅದ್ಯಕ್ಷರಾದ ಸುಕುಮಾರ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಸದಸ್ಯರು ಸಲಹೆ ಗಳನ್ನು ನೀಡಿದಂತೆ ಈ ವರ್ಷ ಕ್ರೀಡೆಯಲ್ಲಿ ಬದಲಾವಣೆ ಮಾಡಿದ್ದೇವೆ ಡೊಂಬಿವಲಿ ಕನ್ನಡಿಗರು ಒಂದೇ ಸೂರಿನಡಿ ವಾಸಿಸುವವರು ಕ್ರೀಡೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳ ಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಹಾನಗರದ ಎಲ್ಲಾ ಸಂಘಟನೆಗಳನ್ನು ಕ್ರೀಡೆಯಲ್ಲಿ ಭಾಗವಹಿಸಲು ಅಹ್ವಾನಿಸುವ ಯೋಜನೆಯನ್ನು ಮಾಡ ಬೇಕಾಗ ಬಹುದು ಎಂದರು.


ವೇದಿಕೆಯ ಮೇಲೆ ಅತಿಥಿಗಳಾದ ಅನಂದ ಶೆಟ್ಟಿ ಎಕ್ಕಾರ್, ಅರುಣ್ ಶೆಟ್ಟಿ ಪಡುಕುಡೂರು, ವಿರಾಜಿತ್ ಶೆಟ್ಟಿ, ಕ್ರೀಡಾ ಮಹೋತ್ಸವದ ರೂವಾರಿಗಳಾದ ಪ್ರಭಾಕರ್ ಅರ್. ಶೆಟ್ಟಿ, ರವಿ ಸನಿಲ್ ಇವರನ್ನು ಸನ್ಮಾನಿಸಲಾಯಿತು ಹಾಗೂ ಕ್ರೀಡೆಗೆ ಸಹಕಾರ ನೀಡಿದ ನಮಿತಾ ಶೆಟ್ಟಿ, ಸುಪ್ರೀತಾ ಶೆಟ್ಟಿ, ದಿವ್ಯಾ ಶೆಟ್ಟಿ, ಸಂತೋಷ್ ಶೆಟ್ಟಿ, ಸಂತೋಷ್ ಪುತ್ರನ್, ಕೃಷ್ಣ ಬಂಗೇರಾ, ಪ್ರಭಾಕರ್ ಶೆಟ್ಟಿ ಇವರನ್ನು ಗೌರವಿಸಲಾಯಿತು


ಕ್ರೀಡಾ ಕೂಟದ ಖೋ ಖೋ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 20000/ ಜಗದಂಬಾ ಮಂದಿರ ಡೊಂಬಿವಲಿ ದ್ವೀತಿಯ ಬಹುಮಾನ 15000/ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಖೋ ಖೋ ಮಹಿಳಾ ವಿಭಾಗ ಪ್ರಥಮ 20000/  ಬಂಟರ ಸಂಘ ಡೊಂಬಿವಲಿ ಪ್ರಾದೇಶಿ ಸಮಿತಿ, ದ್ವಿತೀಯ ಬಹುಮಾನ 15000/  ಜಗದಂಬಾ ಮಂದಿರ ಡೊಂಬಿವಲಿ, ಹಗ್ಗ ಜಗ್ಗಾಟ ಮಹಿಳಾ ವಿಭಾಗ ಪ್ರಥಮ ಬಹುಮಾನ 25000/ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ದ್ವೀತಿಯ ಬಹುಮಾನ 20000/ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಸಮಿತಿ, ಹಗ್ಗ ಜಗ್ಗಾಟ ಪುರುಷರ ವಿಭಾಗ ಪ್ರಥಮ ಬಹುಮಾನ 25000/ ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ ದ್ವೀತಿಯ  ಬಹುಮಾನ 20000/ಶೆಟ್ಟಿ ಫ್ರೆಂಡ್ಸ್ ಡೊಂಬಿವಲಿ, ಪಥ ಸಂಚಲನ   ಪ್ರಥಮ ಬಹುಮಾನ 20000/ ಜಗದಂಬಾ ಮಂದಿರ ಡೊಂಬಿವಲಿ, ದ್ವಿತೀಯ ಬಹುಮಾನ 20000/ ಕುಲಾಲ ಸಂಘ ಮುಂಬಯಿ, ತೃತೀಯ ಬಹುಮಾನ 10000/ ಸಿರಿನಾಡ ವೇಲ್ಫೇರ್ ಅಸೋಸಿಯೇಷನ್, ರಿಲೆ ಮಹಿಳಾ ವಿಭಾಗ  ಪ್ರಥಮ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ದ್ವಿತೀಯ  ಜಗದಂಬಾ ಮಂದಿರ ಡೊಂಬಿವಲಿ, ತೃತೀಯ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಸಮಿತಿ, ರಿಲೆ ಪುರುಷರ ವಿಭಾಗ  ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿ, ದ್ವಿತೀಯ ಜಗದಂಬಾ ಮಂದಿರ ಡೊಂಬಿವಲಿ, ತೃತೀಯ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿ (ಬಿ)

ವೇದಿಕೆಯ ಮೇಲೆ ಸುಕುಮಾರ ಶೆಟ್ಟಿ, ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಅನಂದ ಶೆಟ್ಟಿ ಎಕ್ಕಾರ್, ಅರುಣ್ ಶೆಟ್ಟಿ ಪಡುಕುಡೂರು, ವಿರಾಜಿತ್ ಶೆಟ್ಟಿ, ಲೋಕನಾಥ್ ಶೆಟ್ಟಿ, ದೇವದಾಸ್ ಕುಲಾಲ್, ಅಜಿತ್ ಉಮ್ರಾಣಿ, ವಿಮಲಾ ಶೆಟ್ಟಿ, ಪ್ರಭಾಕರ್ ಶೆಟ್ಟಿ, ರವಿ ಸನಿಲ್, ಅರ್.ಎಂ.ಭಂಡಾರಿ, ರಮೇಶ್ ಶೆಟ್ಟಿ, ಜಗತ್ಪಾಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
ರವಿ ಸನಿಲ್ ಬಹುಮಾನ ವಿಜೇತರ ಯಾದಿಯನ್ನು ಓದಿದರು ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಕಮಿಟಿ (AMW);    ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಉದಯ  ಶೆಟ್ಟಿ  ಆಯ್ಕೆ

Mumbai News Desk

ಕರ್ನಾಟಕ ಸಂಘ ಪನ್ವೆಲ್ ನ 32ನೇ ವರುಷದ ವಾರ್ಷಿಕ ಕ್ರೀಡಾ ಕೂಟ.

Mumbai News Desk

ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಸಮಾರೋಪ ಸಮಾರಂಭ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ, ಅದ್ಧೂರಿ ಕ್ರೀಡೋತ್ಸವ ದಂಗಲ್ – 2024 ಉದ್ಘಾಟನೆ

Mumbai News Desk

ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್   ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆರಂಭ.

Mumbai News Desk

ಕುಂದರ್ ಮೂಲಸ್ಥಾನ ಸಭಾ ಮುಂಬಯಿ, ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2025

Mumbai News Desk