September 6, 2026
Mumbai News Kannada
ಕ್ರೀಡೆ

ಕಬಡ್ಡಿ ವಿಶ್ವಕಪ್: ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು ಸೋಲಿಸಿ ಸತತ ಎರಡನೇ ಬಾರಿಗೆ ಕಬಡ್ಡಿ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡ





ಉತ್ತಮ ಪ್ರದರ್ಶನ ನೀಡಿದ ಕರ್ನಾಟಕ ಕರಾವಳಿಯ ಧನಲಕ್ಷ್ಮೀ ಪೂಜಾರಿ

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆಯನ್ನು 35-28 ಅಂತರದಿಂದ ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಕಬಡ್ಡಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತವು ಪಂದ್ಯಾವಳಿಯಾದ್ಯಂತ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿತು. ಗುಂಪು ಹಂತದಲ್ಲಿ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿತು, ಅಲ್ಲಿ ಇರಾನ್ ಅನ್ನು 33-21 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಚೈನೀಸ್ ತೈಪೆ ಕೂಡ ತನ್ನ ಗುಂಪಿನಲ್ಲಿ ಅಜೇಯವಾಗಿ ಉಳಿದು ಸೆಮಿಫೈನಲ್‌ನಲ್ಲಿ ಆತಿಥೇಯ ಬಾಂಗ್ಲಾದೇಶವನ್ನು 25-18 ಅಂತರದಿಂದ ಸೋಲಿಸುವ ಮೂಲಕ ಫೈನಲ್ ತಲುಪಿತು

ಪ್ರಧಾನಿ ನರೇಂದ್ರ ಮೋದಿ ಅವರು ವಿಜೇತರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ .

ಇಂದು ಬಾಂಗ್ಲಾದೇಶದ ಡಾಕಾದಲ್ಲಿ ನಡೆದ ಫೈನಲ್ ಮುಖಾಮುಖಿ ಕಾದಾಟದಲ್ಲಿ ಹಾಲಿ ಚಾಂಪಿಯನ್ ಭಾರತ ಚೈನೀಸ್ ತೈಪೆಯನ್ನು ಜಿದ್ದಾಜಿದ್ದಿನ ಹೋರಾಟದಲ್ಲಿ 35-28 ಅಂತರದಲ್ಲಿ ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ನಮ್ಮ ಕರ್ನಾಟಕ ಕರಾವಳಿಯ ಹೆಮ್ಮೆಯ ಆಟಗಾರ್ತಿಯಾದ ಕುಮಾರಿ ಧನಲಕ್ಷ್ಮಿ ಪೂಜಾರಿ ಗೆದ್ದ ತಂಡದ ಭಾಗವಾಗಿ ಉತ್ತಮ ಪ್ರದರ್ಶನ ನೀಡಿ ರುತ್ತಾಳೆ..ಟೂರ್ನಮೆಂಟ್ ನ ಎಲ್ಲಾ ಪಂದ್ಯಗಳನ್ನು ತುಂಬಾ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದ್ದ ಭಾರತ ಇಂದು ಎದುರಾಳಿ ಯಿಂದ ಸ್ವಲ್ಪ ಪ್ರತಿರೋಧವನ್ನು ಎದುರಿಸಬೇಕಾಯಿತು.
ಆದರೆ ಕೂಡಲೇ ಎಚ್ಚೆತ್ತುಕೊಂಡ ಭಾರತ ತನ್ನ ರಣತಂತ್ರವನ್ನು ಕಾರ್ಯರೂಪಕ್ಕೆ ತಂದು ಸಂಜೂ ದೇವಿಗೆ ರೈಡ್ ಮಾಡಲು ಹೆಚ್ಚಿನ ಅವಕಾಶ ಕೊಟ್ಟು ಯಶಸ್ವಿಯಾಯಿತು..
ಇಂದಿನ ಆಟದ ಕೇಂದ್ರ ಬಿಂದುವಾಗಿದ್ದ ಸಂಜೂ ದೇವಿ ಸೆಮಿಫೈನಲ್ ನ ಹಾಗೆ ಇಂದೂ ಕೂಡ ತನ್ನ ಅದ್ಭುತ ಆಟದ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದಳು.



Related posts

ಯುವಶಕ್ತಿ ಸಂಘಟನೆಯಿಂದ ಸಮಾಜದ ಏಳಿಗೆ ಸಾಧ್ಯ: ಡೊಂಬಿವಲಿಯಲ್ಲಿ ‘KYD’ (ಕರುನಾಡ ಯೂತ್–ಡೊಂಬಿವಲಿ) ಕ್ರೀಡಾಕೂಟ ಯಶಸ್ವಿ

Mumbai News Desk

ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ – 59ನೇ ಆರ್. ಎನ್. ಉಚ್ಚಿಲ್ ಸ್ಮಾರಕ ಅಥ್ಲೆಟಿಕ್ಸ್ ಕ್ರೀಡಾಕೂಟ

Mumbai News Desk

ಸಿಂಹ ಘರ್ಜನೆ 2025 : ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮಂಗಳಾದೇವಿ ಕ್ಲಬ್

Mumbai News Desk

ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ನಿವೃತ್ತಿ : 14 ವರ್ಷದ ಟೆಸ್ಟ್ ಕೆರಿಯರ್ ಅಂತ್ಯ‌

Mumbai News Desk

ಜಪಾನ್ ಓಪನ್ 750 ಗೆದ್ದು ಇತಿಹಾಸ ಸೃಷ್ಟಿಸಿದ ಪಿವಿ ಸಿಂಧು: ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ

Mumbai News Desk

ಡೊಂಬಿವಲಿ ಕರ್ನಾಟಕ ಸಂಘ:ಕ್ರೀಡಾ ವಿಭಾಗದ ಒಳಾಂಗಣ ಕ್ರೀಡಾಕೂಟಕ್ಕೆ ಅದ್ದೂರಿಯ ಚಾಲನೆ     

Mumbai News Desk