
ಸುದ್ದಿ ವಿವರ : ಪಿ.ಆರ್.ರವಿಶಂಕರ್.
ವೈದ್ಯಕೀಯ ಕ್ಷೇತ್ರದಲ್ಲಿನ ಸುಪ್ರಸಿದ್ಧ ತುಂಗಾ ಹಾಸ್ಪಿಟಲ್ ಸಂಸ್ಥೆಯು ತನ್ನ ಏಳನೆಯ ವಾರ್ಷಿಕ ಕ್ರಿಕೆಟ್ ಕ್ರೀಡಾ ಕೂಟವನ್ನು ಇದೇ ನವೆಂಬರ್ ತಿಂಗಳ ತಾ.28, 29 ಮತ್ತು 30 ರಂದು ಬೊಯಿಸರ್ ನಲ್ಲಿ ಆಯೋಜಿಸಿದೆ..
ಶ್ರೇಷ್ಟ ದರ್ಜೆಯ ಹಾಗೂ ಆಧುನಿಕ ವೈದ್ಯಕೀಯ ಸೇವೆಗಳಿಗೆ ಹೆಸರುವಾಸಿಯಾದ ತುಂಗಾ ಆಸ್ಪತ್ರೆ ಸಮೂಹವು ಮಲಾಡ್, ಮೀರಾ ರೋಡ್ , ಬೊಯಿಸರ್ , ಅಂಧೇರಿ ಜುಹು ಹಾಗೂ ಬೆಂಗಳೂರಿನಲ್ಲಿ ತನ್ನ ಶುಶ್ರೂಷಾ ಶಾಖಾ ಕೇಂದ್ರಗಳನ್ನು ಹೊಂದಿದೆ.
ವರ್ಷಪೂರ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಸದಾ ಬಿಡುವಿಲ್ಲದೆಯೇ ಕಾರ್ಯನಿರತರಾಗಿರುವ ವೈದ್ಯರಿಗೆ ಸ್ವಲ್ಪ ಬದಲಾವಣೆ ಹಾಗೂ ಸ್ಪೂರ್ತಿಯನ್ನು ನೀಡುವ ಸದುದ್ದೇಶದಿಂದ ಪ್ರತೀ ವರ್ಷವೂ ಈ ಕ್ರಿಕೆಟ್ ಟೂರ್ನಮೆಂಟ್ ಏರ್ಪಡಿಸುತ್ತಾ ಬಂದಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ.
ಟಾಟಾ ಸ್ಟೀಲ್ಸ್ ಹಾಗೂ ಇತರ ಸಂಸ್ಥೆಯ ಸಹಯೋಗದಿಂದ ಬೊಯಿಸರ್ ಟಾಟಾ ಸ್ಟೀಲ್ ಗ್ರೌಂಡ್ , ಬೊಯಿಸರ್ ಪಿಡಿಟಿಎಸ್ ಸ್ಪೋರ್ಟ್ಸ್ ಗ್ರೌಂಡ್ ಹಾಗೂ ಚಿಕ್ಲಿಕರ್ ಗ್ರೌಂಡ್ ನಲ್ಲಿ ಜರಗುವ ಅಖಿಲ ಭಾರತ ಡಾಕ್ಟರ್ಸ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಕರ್ನಾಟಕ , ಹರ್ಯಾಣ, ಕೇರಳ , ಪುಣೆ , ಔರಂಗಾಬಾದ್ ಮತ್ತು ಇತರ ಭಾಗಗಳಿಂದ ಕಾರ್ಯನಿರತ ವೈದ್ಯರು ಬಂದು ಭಾಗವಹಿಸಲಿದ್ದಾರೆ. ಸ್ಥಳೀಯ ಕ್ರಿಕೆಟ್ ಕ್ರೀಡಾ ಪ್ರೇಮಿಗಳಿಗೆ ಇದೊಂದು ಸುವರ್ಣವಕಾಶವಾಗಿದೆ ಎಂದು ಆಯೋಜಕರಾದ ಟೂರ್ನಮೆಂಟ್ ನೇತೃತ್ವ ವಹಿಸಿದ ತುಂಗಾ ಹಾಸ್ಪಿಟಲ್ಸ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ( ಸಿ ಎಮ್ ಡಿ) ಡಾ • ಸತೀಶ್ ಶೆಟ್ಟಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸುದ್ದಿ ವಿವರ : ಪಿ.ಆರ್.ರವಿಶಂಕರ್ , ಡಹಾಣೂ ರೋಡ್ 8483980035