
ಎಲ್ಲಾ ಕನ್ನಡಿಗರನ್ನು ಒಂದೇ ಛತ್ರದಡಿ ತರುವ ಉದ್ದೇಶ ನಮ್ಮದಾಗಿದೆ — ಅವಿನಾಶ್ ಸಿದ್ದೇಶ್ವರೆ
ಡೊಂಬಿವಲಿ ನ. 27: ಡೊಂಬಿವಲಿ ಪಲಾವಾ ಕನ್ನಡಿಗರ ಸಂಘದ ವತಿಯಿಂದ ನಾಲ್ಕನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನವೆಂಬರ್ 24 ರಂದು ಡೊಂಬಿವಲಿಯ ಕಾಸಾರಿಯೊ ಸೆಂಟ್ರಲ್ ಕ್ಲಬ್ ಹೌಸ್ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಸಂಘದ ಸಮೀತಿಯ ಹೆಚ್ಚಿನ ಎಲ್ಲಾ ಸದಸ್ಯರು ಹಾಜರಿದ್ದು ಕಾರ್ಯಕ್ರಮಕ್ಕೆ ಅವಿನಾಶ ಸಿದ್ದೇಶ್ವರೆ, ಕಿರಣರಾಜ್ ಕುಬಸದ, ಸುದೀಪ್ ಎನ್ ಎಸ್, ಶಾಂತಾರಾಮ್ ಶೆಟ್ಟಿ, ರಂಜು ಎಸ್ ವಿ, ಶ್ವೇತಾ ಆಲ್ಬಲ್, ಡಾ. ಸೌಮ್ಯ ರಾವ್, ಡಾ ಸುನಿಲ್ ಚೌಹಾಣ್, ಸಂಗೀತಾ ಒಡೆಯರ್ ಮತ್ತು ಕುಶಾಲ ಗ್ರೀನ್ಸ್ ಹೋಟೆಲ್ ನ ಮಾಲೀಕರಾದ ಅರುಣ್ ಶೆಟ್ಟಿ ಪಡುಕುಡೂರು ಕನ್ನಡದ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಸಂಘದ ಅಧ್ಯಕ್ಷರಾದ ಶ್ರೀ ಅವಿನಾಶ ಸಿದ್ದೇಶ್ವರೆಯವರು ಪಲಾವಾ ಕನ್ನಡಿಗರ ಸಂಘ ನಡೆದು ಬಂದ ದಾರಿಯನ್ನು ವಿಸ್ತಾರವಾಗಿ ಸಭೆಗೆ ವಿವರಿಸುತ್ತಾ ಕಳೆದ 9 ವರ್ಷದ ಮೊದಲು ಪಲಾವದಲ್ಲುರುವ ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯವನ್ನು ಮೊಬೈಲ್ ವಾಟ್ಸಪ್ ಮೂಲಕ ಮಾಡುತ್ತಾ ಬಂದಿದ್ದು ಈ ಕಾರ್ಯಕ್ಕೆ ಹೆಚ್ಚಿನ ಸದಸ್ಯರು ಸಹಕಾರವನ್ನು ನೀಡಿದ್ದಾರೆ. 2020 ರ ಮೊದಲು ಕನ್ನಡ ರಾಜ್ಯೋತ್ಸವನ್ನು ಅಚರಿಸುತ್ತಾ ಬಂದಿದ್ದು ಕೊರೋನಾ ಮಹಾಮಾರಿ ಯಿಂದಾಗಿ ನಾವು ಈ ಕಾರ್ಯಕ್ರಮವನ್ನು ಕಾರಣಾಂತರದಿಂದ ನಿಲ್ಲಿಸಿದ್ದೇವು. ಪಲಾವದಲ್ಲಿರುವ ಕನ್ನಡಿಗರನ್ನು ಒಗ್ಗೂಡಿಸ ಬೇಕೆನ್ನುವ ಉದ್ದೇಶದಿಂದ ಪುನಃ ಈ ಕಾರ್ಯಕ್ರಮವನ್ನು ಅಯೋಜಿಸಲು ಪ್ರಾರಂಬಿಸಿದ್ದೇವೆ ನಮ್ಮ ಕಾರ್ಯಕ್ರಮಕ್ಕೆ ಕನ್ನಡಿಗರೆಲ್ಲರ ಸಹಕಾರದೊಂದಿಗೆ ಅರುಣ್ ಶೆಟ್ಟಿ ಪಡುಕುಡೂರು ಮತ್ತು ಶಾಂತರಾಮ ಶೆಟ್ಟಿಯವರ ಸಹಕಾರ ಅನನ್ಯವಾಗಿದೆ ಪಲಾವದಲ್ಲಿ ಸುಮಾರು ಸಾವಿರದ ಐನೂರು ಕನ್ನಡಿಗರು ಇದ್ದಾರೆ ಎಂದು ನಮ್ಮೆಲ್ಲರ ಅನಿಸಿಕೆ ಎಲ್ಲಾ ಕನ್ನಡಿಗರನ್ನು ಒಂದೇ ಛತ್ರದಡಿ ತರುವ ಉದ್ದೇಶ ನಮ್ಮದಾಗಿದೆ ಈ ಕಾರ್ಯಕ್ಕೆ ತಮ್ಮೇಲ್ಲರ ಸಹಕಾರದ ಅಗತ್ಯವಿದೆ ಎಂದರು
ಶ್ರೀ ವಿಘ್ನ ವಿನಾಯಕನ ಪ್ರಾರ್ಥನಾ ಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಪುಟಾಣಿಗಳು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರನ್ನು ರಂಜಿಸಿದರು. ಅನೇಕ ಸದಸ್ಯರು ಕನ್ನಡದ ಹಾಡುಗಳನ್ನು ಹಾಡುವ ಮೂಲಕ, ಏಕ ಪಾತ್ರಾಭಿನಯದ ಮೂಲಕ, ನೃತ್ಯದ ಮೂಲಕ, ಕೊಳಲು ತಬಲಾ ಕೀ ಬೋರ್ಡ್ ವಾದನದ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಭೆಯ ಬಳಿಕ ತಮ್ಮ ಕಲೆಯನ್ನು ಪ್ರದರ್ಶಿಸಿದ ಎಲ್ಲರಿಗೂ ಬಹುಮಾನ ನೀಡಿ ಗೌರವಿಸಲಾಯಿತು.
ಡಾ ಸೌಮ್ಯ ರಾವ್ ಮತ್ತು ಕಾವ್ಯರಾಣಿ ಹಿರೇಮಠ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.

ಸಂಘದ ಕಾರ್ಯದರ್ಶಿಗಳಾದ ಶ್ರೀ ಶಾಂತಾರಾಮ್ ಶೆಟ್ಟಿಯವರು ಸಭೆಯನ್ನು ಅಚ್ಚುಕಟ್ಟಾಗಿ ನೆರವೇರಲು ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು. ಸಮಾರಂಭದ ಕೊನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯ ಅತಿಥಿಯ ಅನಿಸಿಕ:-
ಪಲಾವದಲ್ಲಿ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಕನ್ನಡಿಗರಿದ್ದು ಇವರೆಲ್ಲರನ್ನು ನಾವು ಒಗ್ಗೂಡಿಸಿ ಬಲಿಷ್ಠವಾದ ಸಂಘಟನೆಯನ್ನು ಮಾಡೋಣ ನಮ್ಮಲ್ಲಿ ಸದಸ್ಯರು ಹೆಚ್ಚಾದಗ ರಾಜಕಾರಣಿಗಳು ಮತ ಬ್ಯಾಂಕ್ ಗಾಗಿ ನಮ್ಮಲ್ಲಿಗೆ ಬರುತ್ತಾರೆ ನಾವು ಅವರಿಂದ ನಮ್ಮ ಸಂಘಟನೆಗೆ ಬೇಕಾಗುವ ವಸ್ತುಗಳನ್ನು ಪಡೆಯ ಬಹುದು ಇಲ್ಲಿ ಹಲವಾರು ರಿಜರ್ವೇಷನ್ ಪ್ಲಾಟ್ ಗಳಿದ್ದು ನಾವು ರಾಜಕಾರಣಿಗಳಿಂದ ಪಡೆದು ಭವ್ಯವಾದ ಸಭಾಗೃಹವನ್ನು ನಿರ್ಮಾಣ ಮಾಡ ಬಹುದು ಅದರೊಂದಿಗೆ ಇಲ್ಲಿ ಸಮೀಪದಲ್ಲಿರುವ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಅದರ ಅಡಳಿತ ಕನ್ನಡಿಗರ ಕೈಗೆ ಬರುವಂತೆ ನೋಡಿ ಕೊಳ್ಳೊಣ ವರ್ಷಕ್ಕೆ ಕಡಿಮೆ ಪಕ್ಷ ಎರಡು ಕಾರ್ಯಕ್ರಮವನ್ನು ಅಚರಿಸಿ ಕನ್ನಡಿಗರ ಸಂಖ್ಯಾ ಬಲವನ್ನು ಸಾದರ ಪಡಿಸೋಣಾ ಗುಜರಾತಿ, ಬಂಗಾಲಿ ಸಮಾಜದವರು ಒಗ್ಗಟ್ಟಾಗಿ ರಾಜಕೀಯ ನಾಯಕರಿಂದ ಬಹಳಷ್ಟು ಪ್ರಯೋಜನವನ್ನು ಪಡೆಯುತ್ತಿದ್ದಾರೆ ಈ ಪ್ರಯೋಜನವನ್ನು ನಾವು ಪಡೆದು ಕೊಳ್ಲೋಣಾ ಈ ಕಾರ್ಯಕ್ಕೆ ನಾನು ಸಂಪೂರ್ಣ ಸಹಕಾರವನ್ನು ನೀಡುತ್ತೇನೆ — ಅರುಣ್ ಶೆಟ್ಟಿ ಪಡುಕುಡೂರು, ಮುಖ್ಯ ಅತಿಥಿ