September 6, 2026
Mumbai News Kannada
ಪ್ರಕಟಣೆ

ನೈನ್ ಹ್ಯಾಂಡ್ಸ್ ಫೌಂಡೇಶನ್ ಮುಂಬಯಿ: ಜು. 13ಕ್ಕೆ ಮಕ್ಕಳ ವಾರ್ಷಿಕ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮ





ಮುಂಬೈ ಹಾಗೂ ಉಪನಗರದ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಎಂಬ ಉದ್ದೇಶದಿಂದ ಹುಟ್ಟಿಕೊಂಡ 9 ಹ್ಯಾಂಡ್ಸ್ ಫೌಂಡೇಶನ್ ಕಳೆದ 7 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಹಾಗೂ ಪುಸ್ತಕ, ಪರಿಕರಗಳನ್ನು ನೀಡುತ್ತಾ ಬರುತಿದೆ.
ಸಂಸ್ಥೆಯು ಪ್ರತಿವರ್ಷ ಆಯ್ದ ವಿದ್ಯಾರ್ಥಿಗಳಿಗೆ ವಾರ್ಷಿಕ ಶಾಲಾ ಶುಲ್ಕವನ್ನು ನೀಡುತ್ತಿದ್ದು, ಈ ವರ್ಷದ ಆರ್ಥಿಕ ವಿತರಣಾ ಕಾರ್ಯಕ್ರಮ ಜುಲೈ 13ರ ಆದಿತ್ಯವಾರ ಸಂಜೆ 4. 30 ಗಂಟೆಗೆ ಅಂಧೇರಿ ಪಶ್ಚಿಮ, ವೀರ ದೇಸಾಯಿ ಮಾರ್ಗದ ಮೊಗವೀರ ಭವನದ 2ನೇ ಮಹಡಿಯ ಸಭಾಗ್ರಹದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಸಾಯಿ ಗ್ರೂಪ್ ಆಫ್ ಹೊಟೇಲ್ಸ್ ನ ಆಡಳಿತ ನಿರ್ದೇಶಕ ರವಿ ಸುಂದರ್ ಶೆಟ್ಟಿ, ಗೌರವ ಅತಿಥಿಗಳಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಟ್ರಸ್ಟಿ ಅಜಿತ್ ಸುವರ್ಣ, ಮೊಗವೀರ ವ್ಯವಸ್ಥಾಪಕ ಮಂಡಳಿಯ ನೂತನ ಅಧ್ಯಕ್ಷ ಗಣೇಶ್ ಕಾಂಚನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ಬಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, ಸಮಾಜ ಸೇವಕ ರವೀಂದ್ರ ಎಲ್ ಕರ್ಕೇರ, ಮೊಗವೀರ ಮಹಾಜನ ಸೇವಾ ಸಂಘ ಬಗ್ಬಾಡಿ ಹೋಬಳಿಯ ಮಾಜಿ ಅಧ್ಯಕ್ಷ ಗೋಪಾಲ್ ಪುತ್ರನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು.
ಶಿಕ್ಷಣ ಪ್ರೇಮಿಗಳು, ದಾನಿಗಳು, ಸಂಸ್ಥೆಯ ಹಿತ ಚಿಂತಕರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನೈನ್ ಹ್ಯಾಂಡ್ಸ್ ಫೌಂಡೇಶನ್ ನ ಈ ಮಹಾನ್ ಕಾರ್ಯಕ್ಕೆ ಸ್ಪಂದಿಸುವಂತೆ ಅಧ್ಯಕ್ಷ ಸಂತೋಷ್ ಕರ್ಕೇರ, ಸ್ಕ್ರಟಿನಿ(Scrutiny) ಕಮಿಟಿ ಕಾರ್ಯಧ್ಯಕ್ಷ ಭಾಸ್ಕರ್ ಸಾಲಿಯಾನ್, ಕಾರ್ಯದರ್ಶಿ ದೇವರಾಜ್ ಅಮೀನ್, ಟ್ರಸ್ಟಿಗಳು, ಸದಸ್ಯರು ವಿನಂತಿಸಿದ್ದಾರೆ.



Related posts

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ : ಅ. 15ಕ್ಕೆ 19ನೇ ವಾರ್ಷಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾ ಪೂಜೆ

Mumbai News Desk

ತುಳು ಸಂಘ ಬೊರಿವಲಿ, ಡಿ. 8 ರಂದು ಸ್ನೇಹ ಮಿಲನ

Mumbai News Desk

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ,ಪೋರ್ಟ್; ಡಿ.21 ರಂದು 80ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ

Mumbai News Desk

ಡಿ. 24ರಂದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್ ಶಹಾಡ್ : ಎ. 12ರಿಂದ ಎ. 21ರ ತನಕ 63ನೇ ವಾರ್ಷಿಕೋತ್ಸವ, 10ನೇ ಪ್ರತಿಷ್ಠ ವರ್ಧಂತಿ ಉತ್ಸವ.

Mumbai News Desk