ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಕಚೇರಿ
ಹಾಗೂ ಜಗದಂಬಾ ಮಂದಿರ, ಡೊಂಬಿವಲಿಯ ಸಹಕಾರದೊಂದಿಗೆ ದಿನಾಂಕ 30.11.2024 ಶನಿವಾರದಂದು ಸಂಜೆ 5.00 ಗಂಟೆಗೆ ಸರಿಯಾಗಿ ಶ್ರೀ ಜಗದಂಬಾ ಮಂದಿರ ರೋಡ್, ನ್ಯೂ ದೇವಿಚಾ ಪಾಡಾ, ಗೋಪಿನಾಥ್ ಚೌಕ್, ಡೊಂಬಿವಲಿ (ಪಶ್ಚಿಮ) ಯ ಶ್ರೀ ಜಗದಂಬಾ ಮಂದಿರದ ವಠಾರದಲ್ಲಿ ಸಂಜೆ 5.00 ಗಂಟೆಗೆ ಸರಿಯಾಗಿ ಮೇಳದ ದೇವರ ಚೌಕಿ ಪೂಜೆಯೊಂದಿಗೆ
ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳದವರಿಂದ ನಿತಿನ್ ಕುಮಾರ್ ತಂಕಕಾರಂದೂರು ವಿರಚಿತ ಯೋಗೀಶ್‌ರಾವ್ ಚಿಗುರಪಾದ ಪದ್ಯ ರಚನೆಯಪ್ರಸಂಗ “ಕುಲದೈವೋ ಬ್ರಹ್ಮ” ತುಳು ಐತಿಹಾಸಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಯಕ್ಷಗಾನ ಪ್ರಿಯ ಮಾತೆ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆ ಸೇವೆಗೆ ಯಕ್ಷಾಭಿಮಾನಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಕ್ಷಗಾನ ಗೆಜ್ಜೆಸೇವೆಯ ಆಟವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಸರ್ವರಿಗೂ ಆದರದ ಸ್ವಾಗತ