ಮುಂಬಯಿಯ ಪ್ರತಿಷ್ಟಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ 82ನೇ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 1ರ ಆದಿತ್ಯವಾರ, ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರ ತನಕ, ಚರ್ಚ್ ಗೇಟ್ ಬಳಿಯ ಕರ್ನಾಟಕ ಸ್ಪೋರ್ಟಿಂಗ್ ಎಸೋಸಿಯೇಶನ್ ಮೈದಾನದಲ್ಲಿ ಜರಗಲಿದೆ.
ಮೊಗವೀರ ಕುಲರತ್ನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡೋಜ ಜಿ ಶಂಕರ್, ಗೌರವ ಅತಿಥಿ ಗೀತಾನಂದ ಟ್ರಸ್ಟ್, ಕೋಟ ಇದರ ಪ್ರವರ್ತಕ ಆನಂದ್ ಸಿ ಕುಂದರ್ ಅವರ ಉಪಸ್ಥಿತಿಯಲ್ಲಿ, ಸಂಘದ ಗೌರವ ಅಧ್ಯಕ್ಷ ಸುರೇಶ್ ಆರ್ ಕಾಂಚನ್ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಲಿರುವರು.
ಗೌರವ ಅತಿಥಿಗಳಾಗಿ ಸಮಾಜದ ಗಣ್ಯರುಗಳಾದ ಗೋಪಾಲ ಪುತ್ರನ್( ಎಂಡಿ, ಇಕ್ವೀಟಿ ಗ್ರೂಪ್ ಆಫ್ ಹೋಟೆಲ್ಸ್ ) , ಮಹಾಬಲ ಕುಂದರ್( ಎಂಡಿ, ಮುತ್ತ ಪ್ಲಾಸ್ಟಿಕ್ಸ್ ), ಜಯ ಸಿ ಕೋಟ್ಯಾನ್ ( ಅಧ್ಯಕ್ಷರು, ಎಂಎಂಎಸ್ಎಸ್, ಉಚ್ಚಿಲ ), ರಮೇಶ್ ಬಂಗೇರ( ಎಂಡಿ, ಡಾಲ್ಫಿನ್ ಮೆರಿ ಟೈಮ್) ಸಂತೋಷ ಪುತ್ರನ್( ಸಿಎಂಡಿ, ಎಸ್ ಎ ಗ್ರೂಪ್ ಆಫ್ ಹೋಟೆಲ್) , ಕಿಶೋರ್ ಬಂಗೇರ ( ಎಂಡಿ, ಬಂಗೇರ ಓವರ್ ಸೀಸ್ ) , ರತ್ನಾಕರ ಚಂದನ್(ಪ್ರೊ. ಹೋಟೆಲ್ ಸ್ಟೇಟಸ್ ಲೋವರ್ ಪರೇಲ್) ಪ್ರದೀಪ್ ಚಂದನ್( ಎಕ್ಸ್ ಡೈರೆಕ್ಟರ್, ಬಿಎಸ್ಎಫ್ಎ ) , ಸಿ. ಕೆ. ನಾಯ್ಕ್ ( ನ್ಯಾಯವಾದಿ ಹೈಕೋರ್ಟ್ ), ಉದಯ ಕೋಟೇಶ್ವರ ( ಉದ್ಯಮಿ), ಜಯಂತ್ ಅಮೀನ್ ಕೋಡಿ (ಅಧ್ಯಕ್ಷರು ಎಂವೈಎಸ್ ಉಡುಪಿ), ಅಶೋಕ್ ಎಲ್ ಕುಂದರ್ (ಟ್ರಸ್ಟಿ, ಮಂದಾರ್ತಿ ದೇವಸ್ಥಾನ ), ಎನ್ ಡಿ ಚಂದನ್ (ಮಾಜಿ ಅಧ್ಯಕ್ಷರು ಎಂಎ ಎಸ್ಎಸ್), ರಾಜೇಂದ್ರ ಹಿರಿಯಡ್ಕ (ಮಾಜಿ ಅಧ್ಯಕ್ಷರು, ಎಂವೈಎಸ್ ಉಡುಪಿ), ಶಿವರಾಮ ಕೆ ಎಂ ಕೋಟ (ಮಾಜಿ ಅಧ್ಯಕ್ಷರು, ಎಂವೈಎಸ್ ಉಡುಪಿ ), ಸತೀಶ್ ಎಂ ನಾಯಕ್( ಮಾಜಿ ಅಧ್ಯಕ್ಷರು, ಎಂವೈಎಸ್ ಉಡುಪಿ ), ಸದಾನಂದ ಬಾಲ್ಕೂರ್ ( ಮಾಜಿ ಅಧ್ಯಕ್ಷರು, ಎಂವೈಎಸ್ ಉಡುಪಿ ), ಸುರೇಶ್ ಕಾಂಚನ್ ಬರಿಕೆರೆ( ಸಿವಿಲ್ ಕಾಂಟ್ರಾಕ್ಟರ್ ಉಡುಪಿ ), ಕೆ ಕೆ ಕಾಂಚನ್( ಮಾಜಿ ಅಧ್ಯಕ್ಷರು, ಎಂಎಂಎಸ್ಎಸ್ ಕುಂದಾಪುರ ), ಎಂ ಎನ್ ಸುವರ್ಣ( ಮಾಜಿ ಅಧ್ಯಕ್ಷರು, ಎಂಎಂಎಸ್ಎಸ್ ಕುಂದಾಪುರ ), ಆನಂದ್ ಶ್ರೀಯನ್( ಎಂಡಿ, ಅನ್ನಪೂರ್ಣ ಕ್ಯಾಟರರ್ಸ್ ), ನಾಗೇಶ್ ಹಲ್ನಾಡು ( ಅಧ್ಯಕ್ಷರು, ಎಂವೈಎಸ್ ಕುಂದಾಪುರ ), ಚಂದ್ರಶೇಖರ್ ವಿ ಶೆಟ್ಟಿ( ಕರ್ನಾಟಕ ಮಹಾಮಂಡಲ ಭಾಯಂದರ್ ) , ರಾಜು ಶ್ರೀಯಾನ್ ಗುಜ್ಜಾಡಿ (ನಿರ್ದೇಶಕರು, ಮೀನುಗಾರಿಕ ಸಂಘ ಹೆಮ್ಮಾಡಿ), ಭಾಸ್ಕರ್ ಕಾಂಚನ್( ಗೌರವಾಧ್ಯಕ್ಷ, ಎಂಎಂಎಸ್ಎಸ್ ಡೊಂಬಿವಲಿ),
ಸುಚಿತ್ರ ಪುತ್ರನ್ (ಮಾಜಿ ಅಧ್ಯಕ್ಷರು, ಮಹಿಳಾ ವಿಭಾಗ ಎಂಎಂಎಸ್‌ಎಸ್) , ಗೋಪಾಲ ಮೊಗವೀರ (ಗೌರವಾಧ್ಯಕ್ಷರು, ಎಂಎಂಎಸ್ಎಸ್ ಥಾಣೆ), ರವೀಶ್ ಕೊರ್ವಾಡಿ( ಮಾಜಿ ಕಾರ್ಯದರ್ಶಿ, ಎಂವೈಎಸ್ ಉಡುಪಿ ), ಸುಧಾಕರ್ ಕಾಂಚನ್( ಜೆಸಿ ಮಾಜಿ ಅಧ್ಯಕ್ಷರು ಕುಂದಾಪುರ), ಉದಯಕುಮಾರ್ ಹಟ್ಟಿಯಂಗಡಿ( ಅಧ್ಯಕ್ಷರು, ಎಂಎಂಎಸ್ಎಸ್ ಕುಂದಾಪುರ ), ದಿನೇಶ್ ಕಾಂಚನ್ ಬಾಲೆಕೆರೆ (ಅಧ್ಯಕ್ಷರು, ಎಂವೈಎಸ್ ಹೆಮ್ಮಾಡಿ ), ನಾಗರಾಜ್ ಬೀಜಾಡಿ ( ಅಧ್ಯಕ್ಷರು, ಎಂವೈಎಸ್ ಕೋಟೇಶ್ವರ ), ರಾಘವೇಂದ್ರ (ಅಧ್ಯಕ್ಷರು, ಎಂವೈಎಸ್ ಹಾಲಾಡಿ), ಸೋಮಶೇಖರ್ (ಅಧ್ಯಕ್ಷರು, ಎಂವೈಎಸ್ ಬೈಂದೂರು), ನಾರಾಯಣ ಚಂದನ್ (ಮಾಜಿ ಗೌರವ ಅಧ್ಯಕ್ಷ , ಎಂಎಂಎಸ್ಎಸ್ ಡೊಂಬಿವಲಿ), ರಾಜು ತಗ್ಗರ್ಸೆ (ಅಧ್ಯಕ್ಷರು, ಎಂಎಂಎಸ್ಎಸ್ ಡೊಂಬಿವಲಿ), ರಘುರಾಮ್ ಚಂದನ್( ಅಧ್ಯಕ್ಷರು, ಎಂಎಂಎಸ್ಎಸ್ ಮೀರಾ ರೋಡ್), ಗೋಪಾಲ್ ಚಂದನ್( ಅಧ್ಯಕ್ಷರು, ಎಂಎಂಎಸ್ಎಸ್ ಥಾಣೆ ), ಡಾ. ಸುದೀಪ ಎಂ ಕುಂದರ್ (ಅಧ್ಯಕ್ಷರು, ಎಂಎಂಎಸ್ಎಸ್ ಮಹಿಳಾ ವಿಭಾಗ ), ರಾಜೀವ ಚಂದನ್ (ಉಪಾಧ್ಯಕ್ಷರು, ಟಾಟಾ ಕೆಮಿಕಲ್ಸ್ ಲಿಮಿಟೆಡ್ ), ನಾಗರಾಜ್ ಪುತ್ರನ್(ಸುಲ್ಸೇ ಗ್ರಾಮ ಪಂಚಾಯತ್ ಸದಸ್ಯರು )ಪಾಲ್ಗೊಳ್ಳರಿರುವರು.
ಕ್ರೀಡಾಕೂಟದಲ್ಲಿ 5 ರಿಂದ 60 ವರ್ಷದೊಳಗಿನ ಸಮಾಜ ಬಾಂದವರು ಅವರ ವಯೋಮಿತಿಗನುಗುಣವಾಗಿ ಕ್ರೀಡೆಗಳಲ್ಲಿ ಭಾಗವಹಿಸ ಬಹುದು.
ಪಶ್ಚಿಮ ಮತ್ತು ಮದ್ಯ ವಲಯದ ಪುರುಷ/ಮಹಿಳೆಯರ ಹಗ್ಗ ಜಗ್ಗಾಟ ಕ್ರೀಡಾಕೂಟದ ವಿಶೇಷ ಆಕರ್ಷಣೆಯಾಗಲಿದೆ.
ದಿನವಿಡೀ ನಡೆಯುವ ಕ್ರೀಡಾಕೂಟದಲ್ಲಿ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ವಾರ್ಷಿಕ ಕ್ರೀಡೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡುವಂತೆ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿಯ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಗೌರವ ಕಾರ್ಯದರ್ಶಿ ಗಣೇಶ್ ಮೆಂಡನ್, ಗೌರವ ಕೋಶಾಧಿಕಾರಿ ಸತೀಶ್ ಶ್ರೀಯಾನ್, ಕ್ರೀಡಾ ಕಾರ್ಯದರ್ಶಿಗಳಾದ ಅಶೋಕ್ ಮೆಂಡನ್, ಉಮೇಶ್ ಮೊಗವೀರ ಮತ್ತು ಕೇಂದ್ರ ಕಛೇರಿಯ ಆಡಳಿತ ಮಂಡಳಿಯ ಸದಸ್ಯರು ವಿನಂತಿಸಿದ್ದಾರೆ.