April 2, 2025
ಮುಂಬಯಿ

ಚಿಣ್ಣರಬಿಂಬ ಮುಂಬಯಿ : 22ನೇ ವಾರ್ಷಿಕ ಮಕ್ಕಳ ಉತ್ಸವದ ನಾಟಕೋತ್ಸವ ಸಮಾರೋಪ

ಕನ್ನಡ ಭಾಷೆ, ಸಂಸ್ಕೃತಿ, ಸಂಸ್ಕಾರ ಉಳಿಯಲು ಸರಕಾರ ಮಾಡುವ ಕೆಲಸವನ್ನು ಚಿಣ್ಣರಬಿಂಬ ಮಾಡುತ್ತಿದೆ: ಪ್ರವೀಣ್ ಭೋಜ ಶೆಟ್ಟಿ,

ಚಿತ್ರ ವರದಿ : ದಿನೇಶ್ ಕುಲಾಲ್ 
ಚಿಣ್ಣರಬಿಂಬ ಮುಂಬಯಿ, 22ನೇ ವಾರ್ಷಿಕ ಮಕ್ಕಳ ಉತ್ಸವದ ಅಂಗವಾಗಿ  ಮೂರು ದಿನಗಳು ನಗರದಲ್ಲಿ ನಡೆಯಲಿರುವ ಸಂಭ್ರಮದ ಕಾರ್ಯಕ್ರಮದ ಅಂಗವಾಗಿ ನ. 29ರಂದು   ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ನ ಸಭಾಂಗಣದಲ್ಲಿ ನಾಟಕೋತ್ಸವದ ಸಮರೂಪ ಸಮಾರಂಭವನ್ನು ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ದೀಪ ಬೆಳಗಿಸಿ ಉದ್ಘಾಟಿಸಿದರು,

  ಬಳಿಕ ಮಾತನಾಡಿದ  ಹರೀಶ್ ಅಮೀನ್ ರವರು ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿಯವರು  22ವರ್ಷಗಳ ಮೊದಲು ಈ ಸಂಸ್ಥೆಯನ್ನು ಹುಟ್ಟು ಹಾಕಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುತ್ತಾ ಅವರ ಭವಿಷ್ಯ ಉಜ್ವಲವಾಗಲು ಶ್ರಮಿಸುತ್ತಿದ್ದಾರೆ. ಈ ಸಂಸ್ಥೆಯಿಂದ ಆನೇಕ ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ.. ಇನ್ನೂ ಉತ್ತಮೋತ್ತಮ ಕಾರ್ಯಗಳಿಂದ ಇದರ ಕೀರ್ತಿಯು ಉತ್ತುಂಗಕ್ಕೇರಲಿ ಎಂದು ಶುಭ ಹಾರೖೆಸಿದರು,

ಮುಖ್ಯ ಅತಿಥಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಕನ್ನಡ ಭಾಷೆ, ಸಂಸ್ಕೃತಿ, ಸಂಸ್ಕಾರ ಉಳಿಯಲು ಸರಕಾರ ಮಾಡುವ ಕೆಲಸವನ್ನು ಚಿಣ್ಣರಬಿಂಬ ಮಾಡುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ನಾನು ಇನ್ನೊಂದು ಜನ್ಮವಿದ್ದರೆ ಮುಂಬೈಯಲ್ಲಿ ಚಿಣ್ಣರಬಿಂಬದ ವಿದ್ಯಾರ್ಥಿಯಾಗಲು ಇಚ್ಚಿಸುತ್ತೇನೆ ಎಂದು ಹೇಳುತ್ತಾ ಪ್ರಕಾಶ್ ಭಂಡಾರಿಯವರನ್ನು ಚಿಣ್ಣರಬಿಂಬದ ಭೀಷ್ಮ ಎಂದು ಕೊಂಡಾಡಿದರು.

ಗೌರವಾನ್ವಿತ ಅತಿಥಿಯಾಗಿ ಆಗಮಿಸಿರುವ ಬಂಟರ ಸಂಘ ಮುಂಬೈಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು ಮುಂಬೈಯಲ್ಲಿ ಚಿಣ್ಣರಬಿಂಬವು ದೊಡ್ಡ ಸದ್ದನ್ನು ಮಾಡುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ  ಹೆತ್ತವರಿಬ್ಬರೂ ಕೆಲಸಕ್ಕೆ ಹೋಗುವ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಲು ಸಮಯ ಸಾಲದು. ಆ ಸಂದರ್ಭದಲ್ಲಿ ಈ ಸಂಸ್ಥೆಯು ಚಿಣ್ಣರಿಗೆ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ ಮಹಾತ್ಕಾರ್ಯವನ್ನು ಮಾಡುತ್ತಿದೆ ಅಷ್ಟೇ ಅಲ್ಲದೇ ನಾಟಕೋತ್ಸವ , ಯಕ್ಷಗಾನೋತ್ಸವದಲ್ಲಿ ಮಕ್ಕಳು ಅಭಿನಯಿಸುವುದರಿಂದ ಅದರಲ್ಲಿರುವ ಜೀವನದ ಮೌಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ.ನಾಟಕ, ಯಕ್ಷಗಾನಗಳಲ್ಲಿ ಪಾಲು ಪಡೆಯುವ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯ ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದರು.

ಗೌರವಾನ್ವಿತ ಅತಿಥಿ ವೆಲ್ಕಮ್ ಪ್ಯಾಕೇಜಿಂಗ್ ಅಂಡ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ರವೀಂದ್ರನಾಥ್ ಭಂಡಾರಿಯವರು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ಚಿಣ್ಣರಬಿಂಬವು ಮಾಡುವ ಕಾರ್ಯಕಲಾಪಗಳಿಗೆ ಕೇವಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಲ್ಲ ಇನ್ನೂ ಆನೇಕ ಪ್ರಶಸ್ತಿಗಳು ದೊರಕಬೇಕು, ರೂವಾರಿಯಾದ ಪ್ರಕಾಶ್ ಭಂಡಾರಿ ಮತ್ತು ಅವರ ಪರಿವಾರ ಚಿಣ್ಣರ ಏಳಿಗೆಗಾಗಿ ಅವಿರತ ಶ್ರಮಿಸುತ್ತಿದ್ದಾರೆ ಎಂದು  ತಿಳಿಸಿದರು.

ಇನ್ನೋರ್ವ ಗೌರವಾನ್ವಿತ ಅತಿಥಿ ಇಕ್ವಿಟಿ ಗ್ರೂಪ್ ಆಫ್ ಹೋಟೆಲ್ ಸೀನ ಆಡಳಿತ ನಿರ್ದೇಶಕ ಗೋಪಾಲ ಪುತ್ರನ್ ಅವರು ಮಾತನಾಡಿ ಸುಮಾರು 22ವರ್ಷಗಳ ಹಿಂದೆ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಮಕ್ಕಳಿಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು ಮುಂಬೈಯಲ್ಲಿ ಜನಜನಿತವಾಗಿದೆ. ಹಲವಾರು ವರ್ಷಗಳಲ್ಲಿ ಚಿಣ್ಣರಬಿಂಬದ ಒಡನಾಟದಲ್ಲಿದ್ದೇನೆ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಗೌರವಾನ್ವಿತ ಅತಿಥಿ ಉದ್ಯಮಿ. ರಾಜಕೀಯ ಮುಖಂಡ ವಿಜಯ್ ಶೆಟ್ಟಿಯವರು ಮಾತನಾಡಿ ಕೇವಲ ಕೆಲವೇ ಮಕ್ಕಳಿಂದ ಪ್ರಾರಂಭವಾದ ಚಿಣ್ಣರಬಿಂಬವು 22ವರ್ಷದಲ್ಲಿ ಏಳು ಸಾವಿರ ಮಕ್ಕಳನ್ನು ಹೊಂದಿ ಬೃಹತ್ ವೃಕ್ಷವಾಗಿ ಬೆಳೆದಿದೆ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಚಿಣ್ಣರ ಬಿಂಬದ  ಸಾಧನೆ ಅಪೂರ್ವವಾಗಿದೆಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನು ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿಯವರು ಮಾತನಾಡಿ ಇಂದಿನ ನಾಟಕೋತ್ಸವ ತುಂಬಾ ಯಶಸ್ವಿಯಾಗಿ ಜರಗಿತು. ಇದಕ್ಕೆ ಕಾರಣ ಇವುಗಳ ಉಸ್ತುವಾರಿಯನ್ನು ವಹಿಸಿಕೊಂಡವರ ಪರಿಶ್ರಮ.. ಅದಕ್ಕಾಗಿ ಅವರೆಲ್ಲರಿಗೆ ಕ್ರತಜ್ಣತೆಗಳನ್ನು ಸಲ್ಲಿಸುತ್ತೇನೆ.. ಇಂದು ಮಕ್ಕಳು ಪ್ರಥಮ ಪ್ರದರ್ಶನದಲ್ಲಿಯೇ ಉತ್ತಮ ಅಭಿನಯವನ್ನು ನೀಡಿದ್ದಾರೆ ಮುಂಬರುವ ದಿನಗಳಲ್ಲಿ ಅವರು ಉತಮ ಅಭಿನೇತ್ರರು ಅಗಬಹುದು ಎಂದು ಭರವಸೆಯ ಮಾತುಗಳನ್ನು ಆಡಿರುವುದಲ್ಲದೇ ತಮ್ಮ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಕೃತಜ್ಣತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮವನ್ನು ಸನಾತನ್ ತಮನ್ಕರ್,   ರವಿ ಹೆಗ್ಡೆ, ನಿತ್ಯಶ್ರೀ ಶೆಟ್ಟಿ ನಿರೂಪಿಸಿದರು ಅತಿಥಿಗಳನ್ನು ಶುಚಿತ್ ಶೆಟ್ಟಿ ,ಯಜ್ಞ ಶೆಟ್ಟಿ ,ಶ್ರೇಯಸ್ ಶೆಟ್ಟಿ ,ಸಾನ್ವಿ ಶೆಟ್ಟಿ ,ಸದ್ವಿನ್ ಶೆಟ್ಟಿ ,ರುತ್ವಿಕ್ ಶೆಟ್ಟಿ ,,ಸುಮಿತ್ರಾ ದೇವಾಡಿಗ, ನಿರೂಪಿಸಿ ವಂದಿಸಿದರು.

ವೇದಿಕೆಯಲ್ಲಿ ರೇಣುಕಾ ಭಂಡಾರಿ,ಆಶಾಲತಾ ಕೊಠಾರಿ , ಸುಮಿತ್ರಾ ದೇವಾಡಿಗ,ಶಾಂತ ಆಚಾರ್ಯ, ದೇವಿಕಾ ಪ್ರವೀಣ್ ಶೆಟ್ಟಿ,, ಅಕ್ಷಯಶೆಟ್ಟಿಗಾರ್, ಮತ್ತಿತರ ಉಪಸ್ತರಿದ್ದರು.


ಯಕ್ಷಗಾನದ ಅಭ್ಯಾಸದ ಮೂಲಕ ಮಕ್ಕಳಿಗೆ ಭಾಷೆಯ  ತುಳುನಾಡಿನ ಸಂಸ್ಕೃತಿಯು  ರಕ್ತವಾಗಬೇಕೆಂಬ ಉದ್ದೇಶ: ಡಾ: ಸುರೇಂದ್ರ ಕುಮಾರ್ ಹೆಗ್ಡೆ ,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಚಿಣ್ಣರ ಬಿಂಬದ ರೂವಾರಿಯೊಬ್ಬರಲ್ಲಾದ ಡಾ. ಸುರೇಂದ್ರ ಕುಮಾರ್ ಹೆಗ್ಡೆಯವರು ತನ ಅಧ್ಯ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್.ಚಿಣ್ಣರಬಿಂಬದ ಮುಖ್ಯ ಉದ್ದೇಶವೇನೆಂದರೆ ಮಕ್ಕಳನ್ನು ಸಂಸ್ಕಾರ ವಂತರನ್ನಾಗಿ ಮಾಡುವುದು.. ಇಂದಿನ ನಾಟಕೋತ್ಸವವನ್ನು ನಡೆಸಿದ್ದು ಕೇವಲ ಬಹುಮಾನಕೋಸ್ಕರವಲ್ಲ. ಮಕ್ಕಳು ಅದರಲ್ಲಿರುವ ಸಂದೇಶವನ್ನು ತಿಳಿದುಕೊಂಡು   ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದು. ಅಗ ಚಿಣ್ಣರಿಗೆ ಜೀವನ ಮೌಲ್ಯ ತಿಳಿಯುತ್ತದೆ.ಮಕ್ಕಳಿಗೆ ಭಾಷೆಯ ಮುಖಾಂತರ ತುಳುನಾಡಿನ ಸಂಸ್ಕೃತಿಯು  ರಕ್ತವಾಗಬೇಕೆಂಬ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಏರ್ಪಡಿಸುತ್ತೇವೆ. ಅವಾಗಲೇ ಪುಟಾಣಿಗಳು ಭವಿಷ್ಯದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು,

Related posts

ಶ್ರೀ ರಾಮಚಂದ್ರಾಪುರ ಮಠದ ಮುಂಬೈ ವಲಯದಲ್ಲಿ “ರಾಮಾವತರಣ” ಗ್ರಂಥದ ಲೋಕಾರ್ಪಣೆ

Mumbai News Desk

“ಕನ್ನಡಿಗರ ಜ್ಞಾನ ವಿಕಾಸ ಮಂಡಲ ಮೆಹತಾ ಮಹಾವಿದ್ಯಾಲಯ ಐರೋಲಿ: 78ನೇ ಸ್ವಾತಂತ್ರೋತ್ಸವ ಸಂಭ್ರಮದ ಆಚರಣೆ

Mumbai News Desk

ಮಾನನಷ್ಟ ಪ್ರಕರಣದಲ್ಲಿ ಸಂಜಯ್ ರಾವುತ್ ದೋಷಿ, ಜೈಲು ಶಿಕ್ಷೆ – ನ್ಯಾಯಾಲಯದ ಮಹತ್ತರ ನಿರ್ಧಾರ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ; “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಗೆ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ – 2024 ಪ್ರದಾನ

Mumbai News Desk

ಜಗಜ್ಯೋತಿ ಕಲಾವೃಂದ, ಮುಂಬಯಿ ಇದರ 38 ನೇ ವಾರ್ಷಿಕೋತ್ಸವ ಮತ್ತು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk

ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ, ಇದರ 41ನೇ ವಾರ್ಷಿಕ ಮಹಪೂಜೆ ಸಂಪನ್ನ

Mumbai News Desk