April 2, 2025
ಮುಂಬಯಿ

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ, ಸಾಧಕರಿಗೆ ಸನ್ಮಾನ

ನಿಸ್ವಾರ್ಥ ಸಮಾಜ ಸೇವಕರ ಸೇವೆ ಸಮಾಜದಲ್ಲಿ ಶಾಶ್ವತ :ರಘು ಮೂಲ್ಯ ಪಾದೆಬೆಟ್ಟು,

ಚಿತ್ರ ವರದಿ : ದಿನೇಶ್ ಕುಲಾಲ್ 

ಕುಲಾಲ ಸಂಘ ಮುಂಬಯಿ, ಶತಮಾನ ಸಮೀಪಿಸುತ್ತಿದ್ದು, ಇದರೊಂದಿಗೆ ಸಂಘದ ಹಣಕಾಸು ಸಂಸ್ಥೆ ಜ್ಯೋತಿ ಕ್ರೆಡಿಟ್ ಸೊಸೈಟಿ ಹಾಗೂ ಸ್ಥಳೀಯ ಸಮಿತಿ ಕೆಲವೇ ವರ್ಷದಲ್ಲಿ ಅದ್ದೂರಿಯ ಸಂಭ್ರಮಾಚರಣೆಯನ್ನು ಮಾಡಲಿದ್ದು ಅದು ಮಾತ್ರವಲ್ಲದೆ ಸಂಘದ ಮಂಗಳೂರಿನ ಕುಲಾಲ ಭವನ ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದ್ದು, ಸಮಾಜದಲ್ಲಿನ ಸದಸ್ಯರ ಸಂಖ್ಯೆಯನ್ನು  ಇನ್ನೂ ಹೆಚ್ಚಿನ ಮಟ್ಟಕ್ಕೇರಿಸಲಿದ್ದು, ಮುಂದಿನ ಈ ಎಲ್ಲಾ ಯೋಜನೆಗಳನ್ನು ಯಶಸ್ಸಿಯಾಗಿ ಕಾರ್ಯರೂಪಕ್ಕೆ ತರಲು ಹಿರಿಯರೊಂದಿಗೆ ಯುವ ಜನಾಂಗವು ಕೈಜೋಡಿಸುವಲ್ಲಿ ಅಂತಹ ನಿಸ್ವಾರ್ಥ ಸಮಾಜ ಸೇವಕರಿಗೆ ಸಂಘವು ಅವಕಾಶ ನೀಡುದರಲ್ಲಿ ಹಿಂಜರಿಯಲಾರದು ಎಂದು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ರಘು ಎ ಮೂಲ್ಯ ಪಾದೆಬೆಟ್ಟು ನುಡಿದರು.

ಕುಲಾಲ ಸಂಘ ಮುಂಬಯಿಯ ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್  ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನವು ಡಿ. 1 ರಂದು  ಪ್ರಾಚಾರ್ಯ ಬಿ. ಎನ್. ವೈದ್ಯ ಸಭಾಗೃಹ, ಕಿಂಗ್ ಜಾರ್ಜ್ ಹೈಸ್ಕೂಲ್, ಹಿಂದೂ ಕಾಲೋನಿ, ದಾದರ್ ಪೂರ್ವ ಮುಂಬಯಿ ಇಲ್ಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಎನ್. ಬಂಗೇರ ಇವರ ಉಪಸ್ಥಿತಿಯಲ್ಲಿ ಜರಗಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅವರು     “ಈ ಸ್ಥಳೀಯ ಸಮಿತಿಯ  ಸಮಾಜ ಬಾಂಧವರು ಹೆಚ್ಚಿನವರು ಹೆಚ್ಚಿನ ಅನುಕೂಲತೆಯನ್ನು ಹೊಂದಿದ್ದು,, ಆದರೆ ಪರಿಸರದಲ್ಲಿ ಸಮಾಜದ ಅರ್ಹ ಬಡ ಕುಟುಂಬಗಳು ಸಂಘದ ಸಮಿತಿಯ ಕಾರ್ಯ ಚಟುವಟಿಕೆಗಳಿಂದ ದೂರವಿದ್ದಾರೆ, ಅವರನ್ನು ಮುಖ್ಯ ವಾಹಿನಿಗೆ ತಂದು ಅವರಿಗೆ ಅನುಕೂಲ ಮಾಡುವ ಸೇವಾ ಕಾರ್ಯಗಳನ್ನು ಸಮಿತಿ ಮಾಡಬೇಕು  . ಸಂಘದ ಮಹಿಳಾ ವಿಭಾಗ ಹಾಗೂ ಕಾರ್ಯಕಾರಿ ಸಮಿತಿ ಮತ್ತು ಎಲ್ಲಾ ಐದು ಸಮಿತಿಗಳ ಸಮಾಜ ಪ್ರೇಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ಅವರು ಸಮಾಜದ ಮಕ್ಕಳ ಪ್ರತಿಬೆಯನ್ನು ಗುರುತಿಸಿ ಅವರ ಪ್ರತಿಭಾ ವಿಕಸನಕ್ಕೆ ಸಂಘವು ಕಂಕಣಬದ್ದವಾಗಿದೆ” ಎಂದರು.

ಪುಣೆಯ ಉದ್ಯಮಿ ಮಂಜುನಾಥ್  ಕುಲಾಲ್ ಮಾತನಾಡುತ್ತಾ “ಮುಂಬೈ ನಗರದಲ್ಲಿ ಕುಲಾಲ ಸಮಾಜ ಬಾಂಧವರು ಒಗ್ಗಟ್ಟಾಗಿ ಸಮಾಜವನ್ನು ಬಲಿಷ್ಠ ಗೊಳಿಸಿದ್ದಾರೆ, ಮುಂಬೈ ಕುಲಾಲ ಸಂಘದ  ಸೇವಾಕಾರ್ಯಗಳು ಸಮಾಜದ ಬಡ ಕುಟುಂಬಗಳಿಗೆ ಸಿಗುವಂತಾಗಲಿ, ಪುಣೆಯಲ್ಲಿ ಸೇವಾ ನಿರತವಾಗಿರುವ ಜ್ಯೋತಿ ಕ್ರೆಡಿಟ್ ಸೊಸೈಟಿಗೆ  ನನ್ನಿಂದಾಗುವ ಸಹಾಯ ಸಹಕಾರವನ್ನು ನೀಡುವ ಪ್ರಯತ್ನ ಮಾಡುವೆನು” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬೆಳ್ತಂಗಡಿ ಕುಂಭಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಗಿರೀಶ್ ಕೆ. ಎಚ್ ಮಾತನಾಡುತ್ತಾ “ಬಹಳ ವರ್ಷಗಳ ಹಿಂದೆ ಮುಂಬೈ ಕುಲಾಲ ಸಂಘ ಪದಾಧಿಕಾರಿಗಳು ನನ್ನ  ಶಿಕ್ಷಣ ಸಂಸ್ಥೆಗೆ ಆರ್ಥಿಕ  ನೆರವು ನೀಡಿದ್ದಾರೆ ಅಲ್ಲದೆ ನಮ್ಮ ಶಿಕ್ಷಣ ಕ್ಷೇತ್ರದ ಸೇವಾಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅದರಿಂದ ನನಗೆ ಮುಂಬೈ ಕುಲಾಲ ಸಂಘದ ಋಣವಿದೆ ಈ ಕಾರಣದಿಂದ  ಕಾರ್ಯಕ್ರಮದಲ್ಲಿ ಬಾಗವಹಿಸಲು ಸಂತೋಷವಾಗುತ್ತದೆ. ಸಂಘಕ್ಕಾಗಿ ನಮ್ಮ ಸಮಾಜದ ಅನೇಕ ಹಿರಿಯರು ನೀಡಿದ ಕೊಡುಗೆ ಅಪಾರ. ನಮ್ಮ ಶಾಲೆಯು ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿದೆ. ಕುಂಭಶ್ರೀ ಡಿ. 8 ಕ್ಕೆ ನಡೆಯಲಿರುವ ಕುಂಭಶ್ರೀ ವೈಭವಕ್ಕೆ ಎಲ್ಲರಿಗೂ ಸ್ವಾಗತ” ವೆಂದು ನುಡಿದರು.

ಕುಲಾಲ ಸಂಘ ಮುಂಬಯಿಯ ಗೌರವ ಅಧ್ಯಕ್ಷ ಪಿ. ದೇವದಾಸ್ ಎಲ್ ಕುಲಾಲ್ ಮಾತನಾಡುತ್ತಾ     “ಮಂಗಳೂರಿನ ಕುಲಾಲ ಭವನ ಕೆಲವೇ ತಿಂಗಳಲ್ಲಿ ಲೋಕಾರ್ಪಣೆ ಮಾಡುವ ಬಗ್ಗೆ ನಾವು ಕಾರ್ಯನಿರತರಾಗಿದ್ದೇವೆ. ಇದಕ್ಕೆ ನಿಮ್ಮೆಲ್ಲ ಸಹಾಯ ಸಹಕಾರ ಅತೀ ಅಗತ್ಯವೆಂದು” ನುಡಿದರು.

ಕುಲಾಲ ಸಂಘ ದ ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್ ಮಾತನಾಡಿ ಇಂದಿನ ವೇದಿಕೆಯನ್ನು ನೋಡುವಾಗ ಹಣ ಬಲ ಹಾಗೂ ವಿದ್ಯೆ ಬಲ ಎರಡೂ ಕಾಣುತ್ತದೆ. ಇದು ಯಾವುದೇ ಸಮಾಜಕ್ಕೆ ಪೂರಕ. ನಮ್ಮ ಸಮಾಜದವರಾದ ಬೆಳ್ತಂಗಡಿ ಕುಂಭಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಗಿರೀಶ್ ಕೆ. ಎಚ್., ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ವೇದಿಕೆಯಲ್ಲಿರುವ ಎಲ್ಲಾ ಅಥಿತಿಗಳು ಅವರವರ ಕ್ಷೇತ್ರದಲ್ಲಿ ಯಶಸ್ಸಿಯಾಗಿದ್ದಾರೆ. ಸಮಾಜದಲ್ಲಿ ಇನ್ನೂ ಹಲವಾರು ಯೋಜನೆಗಳಿದ್ದು ಇನ್ನೂ ಎಲ್ಲರ ಸಹಕಾರದ ಅಗತ್ಯವಿದೆ. ಮಂಗಳಾದೇವಿಯಲ್ಲಿನ ಕುಲಾಲ ಭವನ ಮಂಗಳೂರಿನ ಇತರ ಸಭಾಗೃಹದಿಂದಲೂ  ವಿಭಿನ್ನವಾಗಿದ್ದು ಇದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ ವೆಂದು ತಿಳಿಸಿದರು.

ಕುಲಾಲ ಸಂಘ ಮುಂಬಯಿಯ ಗೌರವ ಕೋಶಾಧಿಕಾರಿ ಜಯ ಅಂಚನ್ ತನ್ನ ಅನಿಸಿಕೆಯನ್ನು ತಿಳಿಸುತ್ತಾ ಮೂರು ಗಣ್ಯರಿಗೆ ಅರ್ಥಪೂರ್ಣವಾದ ಸನ್ಮಾನ ಆಗಿದೆ. ಸಮಾಜದ ವತಿಯಿಂದ ನಡೆಯುತ್ತಿರುವ ಶೈಕ್ಷಣಿಕ ಹಾಗು ಅನಾರೋಗ್ಯ ಸಹಾಯಕ್ಕೆ ನಿಮ್ಮೆಲ್ಲರ ಸಾಧ್ಯವಾದ ಸಹಾಯವಿರಲಿ, ಇದರಿಂದ ಸಮಾಜಕ್ಕೆ ದೊಡ್ಡ ಮಟ್ಟದ ಪ್ರಯೋಜನವಾಗುತ್ತದೆ ಎಂದು ನುಡಿದರು.

ಕುಲಾಲ ಸಂಘದ ಮಹಿಳಾ ವಿಭಾಗದ ನಿಕಟ ಪೂರ್ವ ಕಾರ್ಯಾಧ್ಯಕ್ಷೆ ಮಮತಾ ಗುಜರನ್ ಮಾತನಾಡುತ್ತಾ  ಕುಂಭಶ್ರೀ ಶಿಕ್ಷಣ ಸಂಸ್ಥೆಯ  ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡುತ್ತಿದ್ದಾರೆ.ನಿಜವಾಗಿಯೂ ಶಾಲೆಯಲ್ಲಿ ಹಲವಾರು ವಿಶೇಷತೆ ಇದೆ, ಅದಕ್ಕೆ ರಾಷ್ಟ್ರ ಮಟ್ಟದ ಮನ್ನಣೆ ಸಿಗುವಂತಾಗಲಿ ಎಂದು ತಿಳಿಸಿದ ಅವರು ಸಂಘದ  ಮಹಿಳಾ ವಿಭಾಗವು ಪುರುಷರಂತೆ ಮಹಿಳೆಯರು ಕ್ರೀಯಾಶೀಲರಾಗಿದ್ದು ಇನ್ನು ಮುಂದೆಯೂ ಇದನ್ನು ಮುಂದುವರಿಸಬೇಕು ಎಂದರು.

ಅಮೂಲ್ಯ ಸಂಪಾದಕ  ಆನಂದ ಬಿ. ಮೂಲ್ಯ ಮಾತನಾಡಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಅಮೂಲ್ಯ ಪತ್ರಿಕೆಯಲ್ಲಿ ಸದಸ್ಯರಾಗಿ ಸಹಕರಿಸಬೇಕು. ಈ ಪರಿಸರದಲ್ಲಿರುವವರು ಹೆಚ್ಚಿನವರು ಅನುಕೂಲತೆಯನ್ನು ಪಡೆದವರು. 26 ವರ್ಷದ ಅಮೂಲ್ಯದ ಜವಾಬ್ಧಾರಿಯನ್ನು ನನಗೆ ನೀಡಿದ್ದು ಎಲ್ಲರು ನನ್ನನ್ನು ಪ್ರೋತ್ಸ್ಸಾಹಿಸಬೇಕು. ವಿಳಾಸ ಬದಲಾಗಿದ್ದಲ್ಲಿ ನಮಗೆ ತಿಳಿಸಿರಿ ಎಂದರು .

ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲಿಯಾನ್ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ
ಚಲ ಇದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು ಕುಂಭಶ್ರೀ ಶಿಕ್ಷಣ ಸಂಸ್ಥೆಯ ಗಿರೀಶ್ ಕೆ. ಎಚ್ ಅವರಿಂದ ಕಲಿಯಬೇಕು. ನಮ್ಮ ಸಮಾಜದವರು ವಿವಿಧ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಮಕ್ಕಳು ನಮ್ಮ ಸಮಾಜದ ಪ್ರತಿಯೊಂದು ಕಾರ್ಯಕ್ರಮಕ್ಕೆ ಬರಬೇಕು, ನಮ್ಮ ಮಕ್ಕಳು ಎಲ್ಲಿಗೂ ಹೋದರು ಸಮಾಜದ ಮೇಲೆ ಅವರಿಗೆ ಪ್ರೀತಿಯಿರಲಿ. ಮಂಗಳೂರಿನ ಕುಲಾಲ ಭವನವು 90% ಪೂರ್ಣವಾಗಿದ್ದು ಎಲ್ಲರೂ ಅದರ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು.

ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್ ಮೂಲ್ಯ, ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿಇಂದಿನ ಕಾರ್ಯಕ್ರಮಕ್ಕೆ ಸಹಕರಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಹಾಗು ಸಮಿತಿಯ ಮಹಿಳಾ ವಿಭಾಗದ ಪ್ರೋತ್ಸಾಹ ನಿರಂತರ ವಿರಲಿ ಎಂದರು.

ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ  ಆನಂದ ಕುಲಾಲ್ ಮಾತನಾಡುತ್ತಾ 
ಮುಂದಿನ ತಿಂಗಳು ಚರ್ಚ್ ಗೇಟ್ –  ದಹಿಸರ್ ಸ್ಥಳೀಯ ಸಮಿತಿ ಪರವಾಗಿ ಸ್ನೇಹ ಮಿಲಕ ಕಾರ್ಯಕ್ರಮವು ನಡೆಯಲಿದ್ದು ಎಲ್ಲರೂ ಪ್ರೋತ್ಸಾಹಿಸಬೇಕಾಗಿ ಸಮಿತಿಯ ಪರವಾಗಿ  ವಿನಂತಿಸಿಕೊಂಡರು,.

ಮೀರಾರೋಡ್ ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ವೈ ಮೂಲ್ಯ, ಮಾತನಾಡುತ್ತಾ 
 ಸನಾತನ ಹಿಂದೂ ಧರ್ಮದ ಉಳಿವಿಗಾಗಿ ನಮ್ಮ ಸಂಸ್ಕೃತಿಯ ಅರಿವು ಬೇಕು. ಹಿಂದೂ ಧರ್ಮದ ಉಳಿವಿಗಾಗಿ ಪ್ರಯತ್ನ ಅತೀ ಅಗತ್ಯ. ಬದುಕಲ್ಲಿ ಯಶಸ್ಸನ್ನು ಗಳಿಸಲು ತಂದೆ ತಾಯಂದಿರ ಆಶೀರ್ವಾದ ಅತೀ ಅಗತ್ಯ. ಅಮೂಲ್ಯದ ಮಾಜಿ ಸಂಪಾದಕನಾದರೂ ಅದರ ಬಗ್ಗೆ ನನಗೆ ಕಾಳಜಿ ಇದೆ. ಸಣ್ಣ ಮಟ್ಟದ ಸಹಾಯ ಮಾಡಿದವರು,   ದಾನಿಗಳು ಹಿಂದೆ ಇದ್ದವರು ಮುಂದೆ ಬರಬೇಕು. ಕೆಲಸ ಮಾಡುವವರು ಸಮಾಜಕ್ಕೆ ಬೇಕು.  ಯುವ ಜನಾಂಗಕ್ಕೆ ವೇದಿಕೆ ಒದಗಿಸುವ ಕಾರ್ಯ ಆಗಬೇಕು ಎಂದರು.

ರೇವತಿ ಕುಲಾಲ್ ಮತ್ತು ಲಲಿತಾ ಮೂಲ್ಯ ಇವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ವೇದಿಕೆಯ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲಿಯಾನ್,   ಪುಣೆಯ ಉದ್ಯಮಿ ಎಸ್. ಅರ್. ಬಂಜನ್,  ಅಂಬರನಾಥ್ ನ್ ಉಧ್ಯಮಿ ಜಗದೀಶ್ ಆರ್. ಬಂಜನ್, ಬೆಳ್ತಂಗಡಿ ಕುಂಭಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಗಿರೀಶ್ ಕೆ. ಎಚ್.,  ಪುಣೆಯ ಉದ್ಯಮಿ ಮಂಜುನಾಥ್  ಕುಲಾಲ್, ಫ಼್ಲೆಕ್ಸೋನ್  ಪೋಲಿಮರ್ ಪ್ರೊಡಕ್ಟ್ ನ ಮಾಲಕ ನಟೇಶ್ ಕುಮಾರ್ ಬಂಗೇರ ಪೊವಾಯಿ,  ಆಶಲತಾ ಕೃಷ್ಣ ಬಿ. ಹಂಡ, ಪೋರ್ಟ್ ಪ್ರಿಂಟ್ ಆರ್ಟ್ ಕಾರ್ಪೊರೇಷನ್ ಮಾಲಕ ಜಯರಾಜ್ ಪಿ. ಸಾಲ್ಯಾನ್, ಮುಲುಂಡ್ ಕಾರ್ತಿಕ್ ಜ್ಯುಸ್ ಸೆಂಟರಿನ  ಸುಂದರ ಕುಲಾಲ್, ಸಾಯನ್ ಸದ್ಗುರು ಜ್ಯೂಸ್ ಸೆಂಟರ್ ನ  ಪ್ರವೀಣ್ ಮೂಲ್ಯ, ಮತ್ತು ರೇವತಿ ಪರಮೇಶ್ವರ್, .
  ಅಮೂಲ್ಯ ಸಂಪಾದಕ  ಆನಂದ ಬಿ. ಮೂಲ್ಯ, ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ  ಆನಂದ ಕುಲಾಲ್, ಮೀರಾರೋಡ್ ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ವೈ ಮೂಲ್ಯ, ಡೊಂಬಿವಲಿ ಥಾಣೆ ಕಸಾರಾ ಕರ್ಜತ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ, ಲಕ್ಷಣ್ ಸಿ ಮೂಲ್ಯ,  ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಎಸ್. ಬಂಗೇರ, ,.ಸಿ ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್  ಸಮಿತಿಯ  ಗೌ.  ಕಾರ್ಯದರ್ಶಿ ಸೂರಜ್ ಎಸ್ ಹಂಡೇಲ್,  ಉಪಾಧ್ಯಕ್ಷ ಉದಯ ಅತ್ತಾವರ್,  ಕೋಶಾಧಿಕಾರಿ ರತ್ನಾಕರ ಎಂ. ಬಂಜನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್ ಮೂಲ್ಯ, ಉಪಕಾರ್ಯಧ್ಯಕ್ಷೆ ಹರಿಣಾಕ್ಷಿ ಜಿ ಬಂಗೇರ, ಮಹಿಳಾ ಕಾರ್ಯದರ್ಶಿ ನೈನ ಎನ್ ಬಂಗೇರ, ಕೋಶಾಧಿಕಾರಿ ಶೈಲಿಕಾ ಯು ಅತ್ತಾವರ್ ಉಪಸ್ಥಿತರಿದ್ದರು. 

    ಈ ಸಂದರ್ಭದಲ್ಲಿ ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ಡಿ. ಐ.  ಮೂಲ್ಯ,  ಸ್ಥಳೀಯ ಸಮಿತಿಯ ಮಾಜಿ ಕಾರ್ಯದರ್ಶಿ ರಾಜೇಶ್ ಶೇಷಪ್ಪ ಬಂಜನ್  ಮತ್ತು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಮಿತಿಯ ಕಾರ್ಯಾಧ್ಯಕ್ಷ  ಸುಂದರ ಎನ್ ಮೂಲ್ಯ ಸಯನ್ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಉದಯ ಅತ್ತಾವರ,  ಸುರಭಿ ಹಂದೇಲ್ ಮತ್ತು ಇಂದಿರಾ ಆರ್ ಬಂಜನ್ ವಾಚಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾದನೆಗೈದ ಸಂಘದ ಯುವ ಸಾಧಕರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್  ಸಮಿತಿಯ ಜೊತೆ ಕಾರ್ಯದರ್ಶಿ ವಿಶ್ವನಾಥ್ ಮೂಲ್ಯ, ಜೊತೆ ಕೋಶಾಧಿಕಾರಿ ದಯಾನಂದ ಮೂಲ್ಯ, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲಿಯಾನ್,  ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುನಿಲ್ ಕೆ ಕುಲಾಲ್, ಪ್ರವೀಣ್ ಮೂಲ್ಯ, ಕೃಷ್ಣಾ ಬಿ ಹಂಡ , ಸುಂದರ್ ಎನ್ ಮೂಲ್ಯ ಸಾಂಸ್ಕೃತಿಕ ಸಮಿತಿ ಪ್ರಮುಖರಾದ ನೈನ ಎನ್ ಬಂಗೇರ, ಕವಿತಾ ಸಿ. ಹಂಡ, ಮಲ್ಲಿಕಾ ಎಸ್. ಮೂಲ್ಯ, ಬಿನೀತ್ ಜಿ ಸಾಲ್ಯಾನ್, ಮಹಿಳಾ ವಿಭಾಗದ  ಜೊತೆ ಕಾರ್ಯದರ್ಶಿಗಳಾದ ಮಂಜುಳಾ ಎಂ. ಸಾಲ್ಯಾನ್ ಮತ್ತು ಕುಶಲ ಬಂಗೇರ, ಕೋಶಾಧಿಕಾರಿ ಶೈಲಿಕಾ ಯು ಅತ್ತಾವರ್ ಜೊತೆ ಕೋಶಾಧಿಕಾರಿಗಳಾದ ಆಶಾಲತಾ ಕೆ ಹಂಡಾ ಮತ್ತು ರೇವತಿ ಬಂಗೇರ, ಸಲಹಾ ಸಮಿತಿಯ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಎಲ್ಲಾ ಸದಸ್ಯರು, ಗುರುವಂದನಾ ಭಜನಾ ಮಂಡಳಿಯ ಸದಸ್ಯರು ಸಹಕರಿಸಿದರು. 
ಕುಲಾಲ ಸಂಘ ಮುಂಬಯಿಯ ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್  ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಎನ್. ಬಂಗೇರ ಸ್ವಾಗತಿಸಿದರು.  ಗೌ.  ಕಾರ್ಯದರ್ಶಿ ಸೂರಜ್ ಎಸ್ ಹಂಡೇಲ್ ಪ್ರಸ್ತಾವನೆಯ ನುಡಿಗಳನ್ನಾಡಿದರು. ಸ್ಥಳೀಯ ಸಮಿತಿಯ ಕೋಶಾಧಿಕಾರಿ ರತ್ನಾಕರ ಎಂ. ಬಂಜನ್ ಲೆಕ್ಕ ಪತ್ರ ಮಂಡಿಸಿದರು.
ಬೆಳಿಗ್ಗೆ ಭಜನೆ, ನೃತ್ಯ ಕಾರ್ಯಕ್ರಮ ನಡೆಯಿತು.  ಸಭಾ ಕಾರ್ಯಕ್ರಮವನ್ನು ಕುಮಾರ್ ವಿಟ್ಟ್ಲ  ಮತ್ತು ಭಾಗ್ಯ ವಿನೋದ್ ಬಂಗೇರ ನಿರ್ವಹಿಸಿದರು.
ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಹಂಡ ವಂದನಾರ್ಪಣೆ ಮಾಡಿದರು .

ದಿನಪೂರ್ತಿ ನಡೆದ ಈ ಸಮಾರಂಭದಲ್ಲಿ ಬೆಳಿಗ್ಗೆ ಭಜನೆ, ಸ್ವಾಗತ ನೃತ್ಯ ಹಾಗೂ ಇತರ ಮನೋರಂಜನಾ ಕಾರ್ಯಕ್ರಮ ಸಂಜೆ  ಸಂಘದ ಸದಸ್ಯರಿಂದ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅರುಣ್ ಚಂದ್ರ ಬಿಸಿ ರೋಡ್ ರಚಿಸಿದ ಧನಂಜಯ ಮೂಳೂರ್ ನಿರ್ದೇಶನದ “ಎನ್ನ ಬೊಡೆದಿ”  ತುಳು ಸ್ಕಿಟ್ ಪ್ರದರ್ಶನ ನಡೆಯಿತು.  ಆನಂತರ ವಿಶೇಷ ಬಹುಮಾನ ವಿತರಣೆ ನಡೆಯಿತು.

ಸನ್ಮಾನಿತರ ನುಡಿ

ಸನ್ಮಾನಿಸಿದಕ್ಕೆ ಸ್ಥಳೀಯ ಸಮಿತಿಯ ಎಲ್ಲರಿಗೂ ಹೃದಯಾಂತಳಾದ ವಂದನೆಗಳು. ಹಿರಿಯರ ಆಶ್ರೀರ್ವಾದದಿಂದ ನಮ್ಮ ಐದು ಸ್ಥಳೀಯ ಸಮಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವ ಜನಾಂಗವು ಸಮಿತಿಯಲ್ಲಿ ಕ್ರೀಯಾಶೀಲರಾಗಬೇಕು. – ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ಡಿ. ಐ.  ಮೂಲ್ಯ, 


ನನಗೆ ನೀಡಿದ ಸನ್ಮಾನ ಕುಲಾಲ ಸಂಘದ ಅಭಿವೃದ್ದಿಗಾಗಿ ದುಡಿದ ಹಿರಿಯರಿಗೆ ಸಲ್ಲುತ್ತದೆ.  ನಾವು ಮಾಡುವ ಯಾವುದೇ ಕಾರ್ಯಕ್ಕೆ  ದೇವರ ಆಶೀರ್ವಾದವಿದೆ. ನಾವು ಎಪ್ಪತ್ತರ ದಶಕದಲ್ಲಿ ಸಂಘದಿಂದ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಿರುವೆನು. ಸಂಘದಿಂದ ವಿದ್ಯಾರ್ಥಿ ವೇತನ ಪಡೆಯಲು ಹಿಂಜರಿಯಬಾರದು.
-ಆಧ್ಯಾತ್ಮಿಕ ಸಮಿತಿಯ ಕಾರ್ಯಾಧ್ಯಕ್ಷ  ಸುಂದರ ಎನ್ ಮೂಲ್ಯ ಸಯನ್


ಯವುದೇ ಒಳ್ಳೆಯ ಕೆಲಸಕ್ಕೆ ಅನುಭವಸ್ತರ ಸಹಕಾರ ಬೇಕು. ಕುಲಾಲ ಸುದಾರಕ ಸಂಘವು ಮತ್ತೆ ಕುಲಾಲ ಸಂಘವಾಗಿ ಹಂತ ಹಂತವಾಗಿ ಉನ್ನತಮಟ್ಟಕ್ಕೇರಿದೆ. ಇಂದು ಯುವ ಜನಾಂಗವು ಶಿಕ್ಷಣ ಕ್ಷೇತ್ರದಲ್ಲೂ ಉನ್ನತ ಮಟ್ಟದಲ್ಲಿದ್ದು ನಮ್ಮ ಮೂಲ ಬೇರನ್ನು ಮರೆಯಬಾರದು.
-ಸ್ಥಳೀಯ ಸಮಿತಿಯ ಮಾಜಿ ಕಾರ್ಯದರ್ಶಿ ರಾಜೇಶ್ ಶೇಷಪ್ಪ ಬಂಜನ್


Related posts

ಬಂಟರ ಸಂಘ ಮುಂಬಯಿ – ವಸಯಿ ಡಹಣು ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗ ನವರಾತ್ರಿ ಉತ್ಸವ ಸಂಭ್ರಮ. ದಾಂಡಿಯಾ .

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : 79ನೇ ವಾರ್ಷಿಕ ಮಹಾಸಭೆ,

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬಯಿ ಶಾಖೆಯ ಮಹಿಳಾ ವಿಭಾಗದಿಂದ ಅರಿಶಿನ ಕುಂಕುಮ ಕಾರ್ಯಕ್ರಮ

Mumbai News Desk

ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಭಾಂಡುಪ್ ಸ್ಥಳೀಯ ಕಚೇರಿಯ ಸಂಯೋಜನೆಯಲ್ಲಿ ಬಾಬು ಶಿವ ಪೂಜಾರಿ ಅವರ “ಬಿಲ್ಲವರ ಗುತ್ತು” ಗ್ರಂಥದ ಮುಂಬಯಿ ಅವೃತಿ ಬಿಡುಗಡೆ.

Mumbai News Desk