
ಮೀರಾ – ಭಾಯಂದರ್ ನಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವಾ ಕಾರ್ಯಗಳನ್ನು ನಡೆಸುತ್ತಾ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ”ನವ ತರುಣ ಮಿತ್ರ ಮಂಡಳ (ರಿ.)
ಮೀರಾ ಭಾಯಂದರ್ ಇದರ ಆಶ್ರಯದಲ್ಲಿ ಡಿ 1 ರವಿವಾರ ಸೆವೆನ್ ಸ್ಟೇರ್ ಅಕಾಡೆಮಿಯ ಗೌಂಡ್, ದೀಪಕ್ ಹಾಸ್ಪಿಟಲ್ ರೋಡ್, ಮೀರಾರೋಡ್ (ಪೂ) ಇಲ್ಲಿ ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿ ವಿಜಯ ಕಲಾವಿದರು ಅಭಿನಯಸಿದ ಹರೀಶ್ ಪಡುಬಿದ್ರಿಯವರ ರಚಿಸಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ “ಅಮ್ಮು.. ಆಮುಂಡರಾ..? “ಹಾಸ್ಯಮಯ, ಸಾಂಸಾರಿಕ ತುಳು ನಾಟಕ ಪ್ರದರ್ಶನಗೊಂಡಿತ್ತು,
ಉದ್ಘಾಟನೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ
ನವ ತರುಣ ಮಿತ್ರ ಮಂಡಳಿಯ ಸಾಮಾಜಿಕ ಸೇವಾ ಕಾರ್ಯಗಳಿಂದ ಈ ಪರಿಸರದ ಎಲ್ಲಾ ಸಮುದಾಯದ ಜನರಿಗೆ ಸಹಕಾರಿಯಾಗುತ್ತದೆ. ಸಾವಿರ ಸಂಖ್ಯೆಯಲ್ಲಿ ಸೇರಿರುವ ಕಲಾಭಿಮಾನಿಗಳನ್ನು ಕಂಡಾಗ ಈ ಸಂಘಟನೆಯ ಸಂಘಟಕ ರವೀಂದ್ರ ಶೆಟ್ಟಿ ಕೊಟ್ರಪಾಡಿ ನಿಸ್ವಾರ್ಥ ಸೇವೆ ಯ ಪರಿಣಾಮವಾಗಿದೆ.
ಈ ಪರಿಸರದ ತುಳು ಕನ್ನಡಿಗರ ಒಗ್ಗಟ್ಟು ನಿರಂತರವಾಗಿರಲಿ. ಕಲೆ,ಕಲಾವಿದರಿಗೆ ಸದಾ ಪ್ರೋತ್ಸಹ ನೀಡುವಂತ ಸೇವೆ ನಿಮ್ಮಿಂದಾಗಲಿ ಎಂದು ಶುಭ ಹಾರೈಸಿದರು.

ಬಂಟರ ಸಂಘ ಮುಂಬಯಿ ಪೊವಾಯಿ ಎಜ್ಯುಕೇಶನ್ ಸೊಸೈಟಿಯ ಕಾರ್ಯಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಮಾತನಾಡಿ ಮೀರಾ ಭಯಂದರ್ ನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿಕೊಂಡರು ತುಳು ಕನ್ನಡಿಗರು ಸಾವಿರ ಸಂಖ್ಯೆಯಲ್ಲಿ ಸೇರುತ್ತಾರೆ, ಇಂದು ಪ್ರದರ್ಶನ ಗೊಂಡ ನಾಟಕದ ತಂಡದ ನಿಮ್ಮ ಊರಿನಲ್ಲಿ ಸಾಂಸ್ಕೃತೀಕ ಮತ್ತು ಸಾಮಾಜಿಕವಾಗಿ ಸೇವಾ ಕಾರ್ಯಗಳನ್ನು ಮಾಡುತ್ತಿದೆ, ನಾಟಕದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವಿದೆ ಎಂದು ನುಡಿದರು.
ಶೇಖರ್ ಶೆಟ್ಟಿ, (ಧರ್ಮ ಸೇವಕರು, ಶ್ರೀ ಮೂಕಾಂಬಿಕಾ ಶಾಂತದುರ್ಗಾ ದೇವಸ್ಥಾನ, ಭಾಯಂದರ್,) ವಸಂತಿ ಎಸ್. ಶೆಟ್ಟಿ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ, ಮೀರಾ-ಭಾಯಂದರ್, ಬಂಟರ ಸಂಘ ಮುಂಬಯಿ )
, ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, , ಸಮಾಜ ಸೇವಕರು
ಸಂಪತ್ ಶೆಟ್ಟಿ, ಪಂಜದಗುತ್ತು,
ಭಾರತಿ ಅಂಚನ್ (ಅಧ್ಯಕ್ಷೆ ಮಹಿಳಾ ವಿಭಾಗ, ಸೌತ್ ಇಂಡಿಯನ್ ಸೆಲ್, ಬಿಜೆಪಿ, ಮೀರಾರೋಡ್) ಅಮಿತಾ ಕಿಶೋರ್ ಶೆಟ್ಟಿ (ಕೌಶಿಕಿ ಸಿಲ್ಕ್)
ಸುಭಾಷ್‌ಚಂದ್ರ ಕರ್ಕೇರ (ಕಾರ್ಯಾಧ್ಯಕ್ಷರು, ಮೀರಾರೋಡ್ ಸ್ಥಳಿಯ ಸಮಿತಿ, ಬಿಲ್ಲವರ ಎಸೋಸಿಯೇಶನ್) ಶಂಕರ್ ವೈ ಮೂಲ್ಯ (ಕಾರ್ಯಾಧ್ಯಕ್ಷರು , ಕುಲಾಲ ಸಂಘ, ಮೀರಾ ವಿರಾರ್ ಸಮಿತಿ) ಜಿತೇಂದ್ರ ಸನಿಲ್ (ಅಧ್ಯಕ್ಷರು, ಯುವ ಮಿತ್ರ ಮಂಡಳ, ಮೀರಾರೋಡ್ ) ಸತೀಶ್ ಪೂಜಾರಿ (ಹೋಟೆಲ್ ಸದಾನಂದ, ಭಾಯಂದರ್ ) ನರೇಶ್ ಪೂಜಾರಿ (ಕಾರ್ಯಾಧ್ಯಕ್ಷರು, ಭಾಯಂದರ್ ಸ್ಥಳೀಯ ಸಮಿತಿ, ಬಿಲ್ಲವರ ಎಸೋಸಿಯೇಶನ್) ಚೇತನ್ ಶೆಟ್ಟಿ (ಮೂಡಬಿದ್ರೆ ಅಧ್ಯಕ್ಷರು, ನಮ್ಮ ಜವನೆರ್ ) ರತ್ನಾ ಕರುಣಾಕರ ಶೆಟ್ಟಿ, (ಸಮಾಜ ಸೇವಕಿ, ಅಧ್ಯಕ್ಷರು, ವೀರಕೇಸರಿ,) ಸುನೀಲ್ ಶೆಟ್ಟಿ, ಚೇಳಾರು ಸುರತ್ಕಲ್, ‘ ನವ ತರುಣ ಮಿತ್ರ ಮಂಡಳಿಯ ಗೌರವ ಅಧ್ಯಕ್ಷರಾದ ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿಗುತ್ತು , ಅಧ್ಯಕ್ಷ ಯೋಗೇಂದ್ರ ಗಾಣಿಗ, ಗೌರವ ಪ್ರಧಾನ ಕಾರ್ಯದರ್ಶಿ ಜಿ. ಕೆ. ಕೆಂಚನಕೆರೆ , ಪದಾಧಿಕಾರಿಗಳಾದ
ದಿನೇಶ್ ಶೆಟ್ಟಿ ಕೊಡವೂರು,
ರವಿ ಪುತ್ರನ್,ಸುಧಾಕರ ಶೆಟ್ಟಿ ಮಂದಾರ್ತಿ,ಯತೀಶ್ ರೈ,
ಜಗದೀಶ್ ಶೆಟ್ಟಿ, ಪಂಜಿನಡ್ಕ,ರಾಜೇಶ್ ಶೆಟ್ಟಿ ಕಾಪು,
ಹರೀಶ್ ಸಾಲ್ಯಾನ್ ಸಂಕಲಕರಿಯ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ
ಅಮಿತಾ ಭಾಸ್ಕರ್ ಶೆಟ್ಟಿ , ಮತ್ತು ವಿವಿಧ ವಿಭಾಗದ ಪದಾಧಿಕಾರಿಗಳು ಉಪಸ್ಥರಿದ್ದರು,
ಈ ಸಂದರ್ಭದಲ್ಲಿ ನಿಜ ಕಲಾವಿದರ ತಂಡದ ಹಿರಿಯ ಸದಸ್ಯ ಲೇಖಕ ,ನಟ, ರಾಜೇಶ್ ಕೆಂಚನಕೆರೆ ಮತ್ತು ಮೀರಾ ಬಾಯದರ್ ನ ಸಮಾಜ ಸೇವಕ
ರವೀಂದ್ರ ಶೆಟ್ಟಿ ದೇರಳಕಟ್ಟೆ, ದಂಪತಿಯನ್ನು ಸನ್ಮಾನಿಸಲಾಯಿತು,
ನವ ತರುಣ ಮಿತ್ರ ಮಂಡಳಿಯ ಗೌರವ ಅಧ್ಯಕ್ಷರಾದ ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿಗುತ್ತು ಸ್ವಾಗತಿಸಿದರು, ಗೌರವ ಪ್ರಧಾನ ಕಾರ್ಯದರ್ಶಿ ಜಿ. ಕೆ. ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು,