
ಮುಂಬಯಿ . ಸುಮಾರು 60 ವರ್ಷಗಳ ಹಿಂದೆ ಗೋರೆಗಾಂವ್ ಪೂರ್ವ, ಸಾಕಾರವಾಡಿ ವಿರ್ವಾನಿ ಇಂಡಸ್ಟ್ರಿಯಲ್ ಎಸ್ಟೇಟ್ ನ ಹಿಂದುಗಡೆ ಸ್ಥಾಪನೆಗೊಂಡ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ (ರಿ) ಇದರ ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಧಾರ್ಮಿಕ ಕಾರ್ಯಕ್ರಮ, ನೃತ್ಯ ವೈಭವ ಮತ್ತು ನಾಟಕೋತ್ಸವದೊಂದಿಗೆ
ಡಿಸೆಂಬರ್ 8ರಂದು ಆದಿತ್ಯವಾರ ಸಂಜೆ 3 ಗಂಟೆಯಿಂದ ನಂದಾದೀಪ ಶಾಲಾ ಸಭಾಂಗಣ, ಜಯಪ್ರಕಾಶ್ ನಗರ, ಗೋರೆಗಾಂವ್ ಪೂರ್ವ, ಇಲ್ಲಿ ನಡೆಯಲಿದೆ.
ಅಂದು ಮಧ್ಯಾಹ್ನ 3 ರಿಂದ ಭಜನೆ ನಂತರ ನೃತ್ಯ ವೈಭವ, ವಿವಿಧ, ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5 ವಜ್ರ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ, ನಂತರ ಲತೀಶ್ ಪೂಜಾರಿ ಅವರು ರಚಿಸಿ ನಿರ್ದೇಶಿಸಿದ ನಾಟಕ ‘ಗೌಜಿ’ ಪ್ರದರ್ಶನ ಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಪರವಾಗಿ ಗೌರವ ಅಧ್ಯಕ್ಷ ಮೋಹನ್ ಪೂಜಾರಿ, ಅಧ್ಯಕ್ಷ ರಘು ಮೂಲ್ಯ, ಮುಖ್ಯ ಸಂಚಾಲಕ ಡಾ. ಶೈಲೇಶ್ ಜಿ., ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಬಂಗೇರ ಮತ್ತು ಶ್ರೀಧರ್ ಮೂಲ್ಯ, ಗೌ. ಪ್ರ. ಕಾರ್ಯದರ್ಶಿ ಸಂತೋಶ್ ಸಾಲ್ಯಾನ್, ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್ ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಬಿತ ಜೆ ಕೋಟ್ಯಾನ್, ಮಹಿಳಾ ವಿಭಾಗದ ಪರವಾಗಿ ಶಾಂಭವಿ ಕೆ ಪೂಜಾರಿ, ಪೂರ್ಣಿಮಾ ಶೆಟ್ಟಿ, ಸುಮತಿ ಪೂಜಾರಿ, ರೇವತಿ ಸಾಲಿಯಾನ್ ಮತ್ತು ಇತರರು, ಪೂಜಾ ಸಮಿತಿಯ ಪರವಾಗಿ ವಿಶ್ವನಾಥ ಎಸ್ ಪೂಜಾರಿ, ರವಿ ಶೆಟ್ಟಿ, ಪ್ರೇಮಲತ ಆರ್ ಮೂಲ್ಯ, ಸುಧಾಕರ್ ಅಮೀನ್ ಮತ್ತು ಇತರರು, ಆರ್ಥಿಕ ಸಾಮಾಜಿಕ ಹಾಗೂ ವಜ್ರ ಮಹೋತ್ಸವ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷ ಶ್ರೀಧರ್ ಮೂಲ್ಯ, ಉಪಕಾರ್ಯಾಧ್ಯಕ್ಷ ಅಶೋಕ್ ಸಾಲ್ಯಾನ್, ನಿರ್ವಾಹಣಾ ಕಾರ್ಯದರ್ಶಿ, ಜನಾರ್ದನ ಕೋಟ್ಯಾನ್, ಕೋಶಾಧಿಕಾರಿ ಸತೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ, ಸದಸ್ಯರುಗಳಾದ ಅಶೋಕ್ ಪೂಜಾರಿ, ಲತೀಶ್ ಪೂಜಾರಿ, ರಚನಾ ಎಸ್ ಕುಲಾಲ್ , ಉದಯ ಪೂಜಾರಿ, ಶ್ರೀನಿಧಿ ಸಾಲ್ಯಾನ್, ಶ್ರೇಯ ಪೂಜಾರಿ ಮತ್ತು ಇತರರು ವಿನಂತಿಸಿದ್ದಾರೆ.