September 6, 2026
Mumbai News Kannada
ಪ್ರಕಟಣೆ

ನಾಸಿಕ್: ನಾಳೆ(ಜ.26) ತುಳು ಸೇವಾ ಸಂಘದ 36ನೇ ವಾರ್ಷಿಕೋತ್ಸವ





ನಾಸಿಕ್: ಇಲ್ಲಿನ ತುಳು ಸೇವಾ ಸಂಘದ 36ನೇ ಮಹಾಸಭೆ ಮತ್ತು ವಾರ್ಷಿಕೋತ್ಸವ ಸಮಾರಂಭವು ಜ. 26ರಂದು ಅಪರಾಹ್ನ 4 ಗಂಟೆಗೆ ನಾಸಿಕ್‌ನ ಚೇತನ್ ನಗರದ ಹೋಟೆಲ್ ಸಾಯಿ ಪ್ಯಾಲೇಸ್ ಸಮೀಪದ ಲಕ್ಷ್ಮೀನಾರಾಯಣ ಸಭಾಗೃಹದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

​ಸಂಘದ ಅಧ್ಯಕ್ಷ ನಿತ್ಯಾನಂದ ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ ಹಾಗೂ ಸಂಘಟಕ ಮತ್ತು ಪತ್ರಕರ್ತ ದಿನೇಶ್ ಕುಲಾಲ್ ಭಾಗವಹಿಸಲಿದ್ದಾರೆ.

ಸಮಾರಂಭದ ಅಂಗವಾಗಿ ಸಂಘದ ಸದಸ್ಯರಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಳ್ಳಲಿದೆ. ಪ್ರಮುಖ ಆಕರ್ಷಣೆಯಾಗಿ ಸಂತೋಷ್ ಶೆಟ್ಟಿ ಕುಚೂರು ಮತ್ತು ಧನ್ಯಾ ಹರೀಶ್ ಶೆಟ್ಟಿ ಅವರ ಸಂಯೋಜನೆಯಲ್ಲಿ ಸಂಘದ ಸದಸ್ಯರಿಂದ ‘ದಶಾವತಾರಂ’ ವೈವಿಧ್ಯಮಯ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.

​ಈ ಸಂಭ್ರಮದ ಕಾರ್ಯಕ್ರಮದಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಅಚ್ಚಣ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲ್ಪನಾ ಸಂಜೀವ ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಹರೀಶ್ ಆಳ್ವ ಮತ್ತು ಅನಿಲ್ ಕರ್ಕೇರ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.



Related posts

ಮಂಗಳೂರು ವಿ. ವಿ.  42ನೇ ಘಟಿಕೋತ್ಸವ : ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ

Mumbai News Desk

 ವಿಜಯ ಕಾಲೇಜು ಮುಲ್ಕಿ ಹಳೇವಿದ್ಯಾರ್ಥಿ ಸಂಘ ಮುಂಬಯಿ ಫೆ. 22ಕ್ಕೆ ಸ್ನೇಹ ಮಿಲನ, ಗುರುವಂದನೆ,ಸಾಧಕ ಪುರಸ್ಕಾರ,

Mumbai News Desk

ಮೊಗವೀರ ಕನ್ನಡ ಮಾಸಿಕ, ಮುಂಬಯಿ – ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಣ್ಣ ಕಥಾ ಸ್ಪರ್ಧೆ

Mumbai News Desk

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ, ಇರಾನಿ ಕಾಲೋನಿ ಮಲಾಡ್.ಭಕ್ತಿ ಸಂಭ್ರಮದೊಂದಿಗೆ ಶನಿ ಜಯಂತಿ ಆಚರಣೆ.

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ ನಾಳೆ (ಮಾ. 1)17ನೇ ವರ್ಧಂತ್ಯುತ್ಸವ

Mumbai News Desk

ಬೊಯಿಸರ್ ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ತಾ.29 ರಂದು ಗುರುಪೂರ್ಣಿಮೆ ಉತ್ಸವ ಆಚರಣೆ

Mumbai News Desk