
ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೂಂದಿಗೆ ಕ್ರೀಡೆಗಳಿಗೂ ಮಹತ್ವ ನಿಡಬೇಕು: ಡಾ. ಸತೀಶ್ ಶೆಟ್ಟಿ
ಮೀರಾ – ಭಾಯಂದರ್ ನ ಸಮಾಜ ಸೇವಕ, ಶಿಕ್ಷಣ ಪ್ರೇಮಿ ಡಾ. ಅರುಣೋದಯ ಎಸ್ ರೈ ಅವರು ಸ್ಥಾಪಿಸಿದ ರೈ ಸುಮತಿ ಎಜುಕೇಷನಲ್ ಟ್ರಸ್ಟ್ ನಡೆಸುತ್ತಿರುವ ಸೇಂಟ್ ಆಗ್ನೆಸ್ ಆಂಗ್ಲ ಪ್ರೌಢಶಾಲ ವಾರ್ಷಿಕ ಕ್ರೀಡಾಕೂಟ ಡಿ.6 ರಂದು
ಭಾಯಂದರ್ ಪೂರ್ವ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ನಡೆಯಿತು,
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ತುಂಗಾ ಆಸ್ಪತ್ರೆ
ಸಿ. ಎಮ್ ಡಿ ಡಾ. ಸತೀಶ್ ಶೆಟ್ಟಿ, ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಕ್ರೀಡೆಗಳಿಗೂ ಮಹತ್ವ ನೀಡಬೇಕು, ವೈದ್ಯರು ಕ್ರೀಡಾ ಚಟುವಟಿಕೆಗಳಿಗೆ ಬೆಂಬಲದ ಅಗತ್ಯವಿರುವ ಯಾವುದೇ ವಿದ್ಯಾರ್ಥಿಗೆ ಸಹಾಯ ಮಾಡಲು ಸಿದ್ಧ ಎಂದು ನುಡಿದರು,

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಮಾರ್ಷಲ್ ಆರ್ಟ್ ತರಬೇತುದಾರರಾದ ಚೀತಾ ಯಜ್ಞೇಶ್ ಶೆಟ್ಟಿ ಅವರು ಮಾತನಾಡಿ ಸದೃಢತೆಯನ್ನು ಕಾಯ್ದುಕೊಳ್ಳುವ ವ್ಯಕ್ತಿಯೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೇಳಿದರು.
ವಾರ್ಷಿಕ ಕ್ರೀಡಾಕೂಟದಲ್ಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ. ಡಾ. ಅರುಣೋದಯ ಎಸ್ ರೈ ಮತ್ತು ಉಪಾಧ್ಯಕ್ಷರಾದ ಮಥಾಯಿಸ್ ಆರ್ ಫೆರ್ನಾಂಡಿಸ್ ರವರು ತಮ್ಮ ಉಪಸ್ಥಿತಿಯಿಂದ ವಿದ್ಯಾರ್ಥಿಯರನ್ನು ಪ್ರೋತ್ಸಾಹಿಸಿದರು,




ವೇದಿಕೆಯಲ್ಲಿ ಸ್ವರ್ಣಲತಾ ಅರುಣೋದಯ ರೈ, ಪುತ್ರ ಜೈಕಿರಣ್ ರೈ, ಸೊಸೆ ಕಾವ್ಯ ರೈ, ಪುತ್ರಿ ಡಾ. ಸ್ವರೂಪ್ ಶೆಟ್ಟಿ, ಅಳಿಯ ಚೇತನ್ ಶೆಟ್ಟಿ ಉಪಸ್ಥಿತರಿದ್ದರು.
ಕ್ರೀಡಾಕೂಟ ಸುಗಮವಾಗಿ ನಡೆಸಲು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಮತ್ತು ಸ್ವಯಂಸೇವಕರು ಅವಿರತವಾಗಿ ಶ್ರಮಿಸಿದರು,
ಕ್ರೀಡಾಕೂಟವು ಹಲವಾರು ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳನ್ನು ಒಳಗೊಂಡಿತ್ತು,
ವಾರ್ಷಿಕ ಕ್ರೀಡಾ ಕೂಟ 2024-2025 ಅದ್ಭುತ ಯಶಸ್ಸನ್ನು ಕಂಡಿತು, ವಿದ್ಯಾರ್ಥಿಗಳಲ್ಲಿ ತಂಡದ ಕೆಲಸ, ಕ್ರೀಡಾ ಮನೋಭಾವ ಮತ್ತು ಸೌಹಾರ್ದತೆಯನ್ನು ಬೆಳೆಸಿತು.
ರೈ ಸುಮತಿ ಎಜುಕೇಷನಲ್ ಟ್ರಸ್ಟ್ ನಡೆಸುತ್ತಿರುವ ಸೇಂಟ್ ಆಗ್ನೆಸ್ ಆಂಗ್ಲ ಪ್ರೌಢಶಾಲೆಯಲ್ಲಿ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.