
ಥಾಣೇ ಪಶ್ಚಿಮದ ವೀರ ಸಾವರ್ಕರ್ ನಗರದಲ್ಲಿ ದೈವ ಭಕ್ತ ಶಿವ ಪ್ರಸಾದ ಪೂಜಾರಿ ಪುತ್ತೂರು ಅವರು ಸ್ಥಾಪಿಸಿ, ಜನರ ಇಷ್ಟಾರ್ಥಗಳನ್ನು ಈಡೇರಿಸಿಕೊಡುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಡಿಸೇಂಬರ್ 15ರಂದು, ಥಾಣೆ ಪಶ್ಚಿಮ 120, ವೀರ್ ಸಾವರ್ಕರ್ ನಗರದ ಟಿ ಎಂ ಸಿ ಶಾಲಾ ಮೈದಾನದಲ್ಲಿ ಕಲ್ಲುರ್ಟಿ – ಪಂಜುರ್ಲಿ ಮತ್ತು ಗುಳಿಗ ದೈವದ ನೇಮ (ಕೋಲ) ನಡೆಯಲಿದೆ.
ಕಾರ್ಯಕ್ರಮ :
ಬೆಳಿಗ್ಗೆ ಗಂಟೆ 6 ಕ್ಕೆ – ಗಣಪತಿ ಹವನ
ಘಂಟೆ 10ಕ್ಕೆ – ಪಂಚಕಜ್ಜಾಯ ಪೂಜೆ
11 ಘಂಟೆಗೆ – ದೇವಿ ದರ್ಶನ (ಆವೇಶ ಪೂಜೆ )
ಮದ್ಯಾಹ್ನ 12.10ಕ್ಕೆ – ದೈವ ಭಂಡಾರದ ಮೆರವಣಿಗೆ
1 ಘಂಟೆಗೆ – ಅನ್ನದಾನ
ಸಂಜೆ 4 ರಿಂದ – ದೈವ ನೇಮ (ಕೋಲ )
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೇಮೋತ್ಸವದಲ್ಲಿ ಉಪಸ್ಥಿತರಿದ್ದು, ಕಲ್ಲುರ್ಟಿ, ಪಂಜುರ್ಲಿ ಮತ್ತು ಗುಳಿಗ ದೈವದ ಪ್ರಸಾದ ಸ್ವೀಕರಿಸಿ, ದೈವ – ದೇವರ ಕೃಪೆಗೆ ಪಾತ್ರರಾಗುವಂತ್ತೆ, ಶ್ರೀ ಕ್ಷೇತ್ರದ ಧರ್ಮದರ್ಶಿ ಶಿವಪ್ರಸಾದ ಪುತ್ತೂರು ಹಾಗೂ ಭಕ್ತ ವೃಂದ, ಮತ್ತು ರಾಜನ್ ಕುಲಕರ್ಣಿ ಮತ್ತು ಪರಿವಾರ ಕೇಳಿಕೊಂಡಿದ್ದಾರೆ.