
ಸಂಘಟನೆಗಳನ್ನು ಮುನ್ನಡೆಸುವಾಗ ಸಂಕಷ್ಟಗಳ ಬರೋದು ಸಹಜವ ಅವೆಲ್ಲವನ್ನೂ ಮೀರಿ ಮುಂದೆ ಸಾಗಬೇಕು:ಮುಂಡಪ್ಪ ಎಸ್. ಪಯ್ಯಡೆ
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಡಿ. ತುಳು-ಕನ್ನಡಗರ ಸಂಘ ಸಂಸ್ಥೆಗಳಲ್ಲಿ ಚಾರ್ಕೋಪ್ ಕನ್ನಡಿಗರ ಬಳಗ, ಕಾಂದಿವಲಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, (ರಿ.) ಸಂಸ್ಥೆಯು ಒಂದಾಗಿದ್ದರೂ ಕೂಡ ಕೆಲವೊಂದು ವಿಶಿಷ್ಟ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ತನ್ನನ್ನು ತಾನು ವಿಭಿನ್ನವಾಗಿ ಗುರುತಿಸಿಕೊಂಡಿರುತ್ತದೆ. ಇದೀಗ ಈ ಸಂಸ್ಥೆಗೆ 25 ರ ಸಂಭ್ರಮಆ ಪ್ರಯುಕ್ತ ಡಿ. 14 ರ ಶನಿವಾರದಂದು ಕಾಂದಿವಲಿ ಪಶ್ಚಿಮದ ಪೊಯಿಸರ್ ಕ್ರೀಡಾ ಕೇಂದ್ರದ ಸಭಾಗೃಹದಲ್ಲಿ ಬೆಳ್ಳಿಹಬ್ಬದ ಉದ್ಘಾಟನ ಸಮಾರಂಭ ಹಾಗು ರಂಗ ದಿಗ್ಗಜ ಸದಾನಂದ ಸುವರ್ಣ ದತ್ತಿ ಉಪನ್ಯಾಸ, ಡಾ. ಶಿವರಾಮ ಕಾರಂತರ ವೈಚಾರಿಕ ದೃಷ್ಟಿಕೋನ ಕಾರ್ಯಕ್ರಮವನ್ನು ಹಿರಿಯ ವೈದ್ಯ ಬಿ.ಎಸ್.ಕೆ.ಬಿ (ಗೋಕುಲ)) ಅಧ್ಯಕ್ಷರಾಗಿರುವ ಡಾ| ಸುರೇಶ್ ಎಸ್. ರಾವ್ ದೀಪ ಬೆಳಗಿಸಿ ಚಾಲನೆ ನೀಡಿದರು.








ಬಳಿಕ ಮಾತನಾಡಿದ ಡಾಕ್ಟರ್ ಸುರೇಶ್ ರಾವ್ ಯಾವುದೇ ಸಂಸ್ಥೆಗೆ ಮೊದಲ ಐದು ವರ್ಷಗಳು ಬಹಳ ಮಹತ್ವದ್ದು. ಆ ಕಾಲ ಬಹಳ ಕಷ್ಟಕರವಾದದ್ದು. ಮನೆಮನೆಗೆ ಹೋಗಿ ಜನರನ್ನು ಸಂಪರ್ಕಿಸಿ ಸಂಘದ ಸದಸ್ಯರಾಗುವಂತೆ ಕೇಳಿಕೊಳ್ಳಬೇಕಾಗುತ್ತದೆ. ಅವರಿಗೆ ಸಂಘಟನೆಯ ಮಹತ್ವ ಅರಿಕೆ ಮಾಡಿಕೊಡಬೇಕಾಗುತ್ತದೆ. ಇಪ್ಪತೈದು ವರ್ಷಗಳ ಹಿಂದೆ ಹೀಗೆ ಜನರನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿ ಚಾರ್ ಕೋಪ್ ಕನ್ನಡ ಬಳಗದವರು ಬಹಳಷ್ಟು ಪರಿಶ್ರಮ ಪಟ್ಟಿರಲೇ ಬೇಕು. ಹಾಗಾಗಿ ಈ ಸಂಸ್ಥೆ ಇಂದು ಬೆಳ್ಳಿ ಹಬ್ಬ ಸಂಭ್ರಮವನ್ನು ಆಚರಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೊಳ್ಳೇ ಕೆಲಸಗಳು ಈ ಸಂಘದ ಮೂಲಕ ನಡೆಯಲಿ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯ ನ್ನು ವಹಿಸಿದ ಹಿರಿಯ ಹೋಟೆಲ್ ಉದ್ಯಮಿ, ಬಂಟರ ಸಂಘ ಬೊರಿವಲಿ ಶಿಕ್ಷಣ ಸಂಸ್ಥೆಯ ನಿಧಿ ಸಂಗ್ರಹಣೆ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್. ಪಯ್ಯಡೆ ಅಧ್ಯಕ್ಷೀಯ ಮಾತುಗಳ ನಾಡುತ್ತ ಯಾವುದೇ ಸಂಘಟನೆಯಲ್ಲಿ ಒಳ್ಳೆಯ ಕಾಲ, ಸಂಕಷ್ಟಗಳ ಕಾಲ ಬರೋದು ಸಹಜವೇ. ಅವೆಲ್ಲವನ್ನೂ ಮೀರಿ ಮುಂದೆ ಸಾಗಬೇಕು. ನಮ್ಮಲ್ಲಿ ಮುಂದಾಲೋಚನೆ ಇರಬೇಕು. ನಮ್ಮಿಂದ ಸಮಾಜಕ್ಕೆ ಉಪಯೋಗ ಆಗುವಂತಹ, ದೇವರು ಮೆಚ್ಚುವಂತಹ ಕೆಲಸ ಮಾಡಬೇಕು. ಮಕ್ಕಳಿಗೆ ನಮ್ಮ ಸಂಸ್ಕಾರ ಅರಿವು ಮಾಡಿಸಿ ಅವರ ಪ್ರತಿಭೆಗೆ ಪ್ರೊತ್ಸಾಹ ನೀಡಬೇಕು. ಚಾರ್ ಕೋಪ್ ಕನ್ನಡ ಸಂಘ ಈ ಪರಿಸರದಲ್ಲಿ ಒಳ್ಳೆಯ ಕೆಲಸ ಮಾಡುತ್ತ ಬಂದಿದೆ, ಇನ್ನು ಮುಂದೆಯೂ ಈ ಕೆಲಸ ಆಗಲಿ ಎಂದು ನುಡಿದರು.
ಹಿರಿಯ ಸಂಘಟಕ, ವಾಪಿ ಕನ್ನಡ ಸಂಘ ಸ್ಥಾಪಕ ಸದಸ್ಯ ಪಿ. ಯಸ್. ಕಾರಂತ ಆಶಯ ನುಡಿದ ಗುಜರಾತಿನಲ್ಲಿ ಕನ್ನಡ ಭವನವದ್ದರೆ ಅದು ವಾಪಿ ಕನ್ನಡ ಸಂಘದ ಭವನ ಮಾತ್ರ, ಸಂಘಟನೆ ಬೆಳೆಯುತ್ತಾ ಹೋದಾಗ ಅಪಾರ ಸಂಖ್ಯೆಯಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಸಂಘಟನೆ ಮೇಲೆ ನಿಷ್ಠೆ ಇರಬೇಕಾಗಿದೆ. ನಮ್ಮದು ಎನ್ನುವ ಅಭಿಮಾನ ನಮ್ಮಲ್ಲಿದ್ದಾಗ ಮಾತ್ರ ಸಂಘ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ಎಲ್ಲರಿಗೂ ಆಸೆ ನೀಡಲು ಸಾಧ್ಯವಿಲ್ಲ ಎಂದು ನುಡಿದರು.

ಆಶ್ರಯದ ನುಡಿಗಳ ನಾಡಿದ ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಘಟನೆ ಜೀವನದ ಅವಿಭಾಜ್ಯ ಭಾಗ. ಜನರು ಒಟ್ಟಾಗಿದ್ದರೆ ಬಲ ಬರುತ್ತದೆ, ಧ್ವನಿ ಬರುತ್ತದೆ. ಚಾರ್ ಕೋಪ್ ಕನ್ನಡ ಬಳಗ ಅಂಥ ಸಂಘ ಕಟ್ಟುವ ಕೆಲಸ ಮಾಡಿದ್ದಾರೆ. ಕಟ್ಟುವುದು ಸುಲಭ, ಆದರೆ ಮುಂದುವರಿಸಿಕೊಂಡು ಹೋಗುವುದು ಅಷ್ಟು ಸುಲಭ ಅಲ್ಲ. ಸಂಘಟನೆಗೆ ಮುನ್ನೋಟ ಬೇಕು. ಒಳ್ಳೆಯ ಆಶಯದಿಂದ ಸಂಘ ಮುನ್ನೆಡೆಯಲಿ.
ಇನ್ನೋರ್ವ ಆಶಯ ನುಡಿ : ಪಿ.ವಿ. ಕಾರಂತ.
ಎಲ್ಲರಲ್ಲೂ ಸಂಘ ‘ನನ್ನದು’ ಎಂಬ ಭಾವನೆ ಬರಬೇಕು. ಸಂಘಟನೆಯಲ್ಲಿ ಇರುವಾಗ ಎಲ್ಲಾ ಕಷ್ಟ ನಷ್ಟ ನಿಂದನೆ ಸಹಿಸಿ ಮುಂದುವರಿಯುವ ಧೈರ್ಯ ಬೇಕು. ಸಂಘ ಸಂಸ್ಥೆಗಳಲ್ಲಿ ನಿಷ್ಟೆ, ದೂರದರ್ಶಿತ್ವ, ಭಾರ ಹೊರುವ ಸಾಮರ್ಥ್ಯ ಇರಬೇಕು. ನಿರಂತರ ಸೇವಾ ಮನೋಭಾವ ಇರಬೇಕು. ಈ ಸಂಘದಲ್ಲಿ ಅಂಥವರು ಇರುವುದರಿಂದಲೇ ಇಂದು ಬೆಳ್ಳಿ ಹಬ್ಬ ಆಚರಿಸುತ್ತಿದೆ ಎಂದು ನುಡಿದರು,
ಮಲಾಡ್ ಕನ್ನಡ ಸಂಘದ ಅಧ್ಯಕ್ಷ ನ್ಯಾಯವಾದಿ ಜಗದೀಶ ಎಸ್. ಹೆಗ್ಡೆ. ಬಳಗದ ಇಂದಿನ ಬೆಳ್ಳಿ ಹಬ್ಬದಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಭಾಗ್ಯವಿದು. ಬಳಗದ ಉದ್ಘಾಟನೆಯ ಸಂದರ್ಭದಲ್ಲಿ ಮಲಾಡ್ ಕನ್ನಡ ಸಂಘ ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಅವರು ಪಾಲ್ಗೊಂಡಿದ್ದರು ಇದೀಗ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ನಾನು ಪಾಲ್ಗೊಳ್ಳುವುದು ಅಭಿಮಾನ ಆಗುತ್ತಿದೆ, ಯುವ ಪೀಳಿಗೆಗೆ ಸಂಘ ಸಂಸ್ಥೆಗಳು ನಮ್ಮ ಭಾಷೆ ,ಸಂಸ್ಕೃತಿಯ ಅರಿವು ಮೂಡಿಸುವ, ಸಮಾಜ ಸೇವಾಭಾವದ ಮಹತ್ವವನ್ನು ಹೇಳುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಬಳಗಕ್ಕೆ ಸಕಲ ಶುಭ ಹಾರೈಕೆಗಳು.
, ಆಡಳಿತ ನಿರ್ದೇಶಕ : ಶ್ರೇಯಸ್ ಎಂಟರ್‌ಪ್ರೈಸಸ್ ದಹಿಸರ್ ಸತೀಶ್ ಆಡಳಿತ ನಿರ್ದೇಶಕ ಶಶಿಧರ್ ಎನ್. ಬಂಗೇರ ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ಬೆಳ್ಳಿ ಹಬ್ಬ ಆಚರಣೆ ಯಾವುದೇ ಸಂಸ್ಥೆಗೆ ಮಹತ್ವದ ಮೈಲಿಗಲ್ಲು. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಾನುಭಾವರು ಅಭಿನಂದನರ್ಹರು. ಈ ಸಂಸ್ಥೆಯಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಲಿರಲಿ ಮತ್ತು ನಮ್ಮ ಮುಂದಿನ ಪೀಳಿಗೆಗೆ ಸಹಾಯ ಆಗುತ್ತದೆ ಎಂಬ ಭರವಸೆ ಇದೆ ಎಂದರು,
. ಸಾಫಲ್ಯ ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷರಾಗಿರುವ ಶ್ರೀನಿವಾಸ್ ಪಿ ಸಾಫಲ್ಯಯಾವುದೇ ಸಂಸ್ಥೆ, ಸಂಘಟನೆಯನ್ನು ಕಟ್ಟುವ ಚತುರತೆ ನಮ್ಮವರ ರಕ್ತದಲ್ಲೇ ಇದೆ. ಇದು ನಾವು ಕನ್ನಡ-ತುಳು ಭಾಂದವರ ವಿಶೇಷತೆ. ಸಂಘಟನೆಯಿಂದ ಒಬ್ಬರಿಗೊಬ್ಬರ ಪರಿಚಯ ಆಗುತ್ತದೆ, ಬಾಂಧವ್ಯ ಬೆಳೆಯುತ್ತದೆ. ಸಮಾಜದಲ್ಲಿ ಕೂಡಿ ಬಾಳುವ, ಒಳ್ಳೆಯ ಕೆಲಸಗಳನ್ನು ಮಾಡಲು ಸ್ಪೂರ್ತಿ ಬರುತ್ತದೆ. ಚಾರ್ ಕೋಪ್ ಕನ್ನಡ ಬಳಗ ಇಪ್ಪತೈದು ವರ್ಷಗಳ ಹಿಂದೆ ಜನರನ್ನು ಒಟ್ಟುಗೂಡಿಸಿ ಉತ್ತಮ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದಾರೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು ಎಂದರು
ಸಭಾ ಕಾರ್ಯಕ್ರಮದ ನಂತರ ನಡೆದ ರಂಗದಿಗ್ಗಜ ಸದಾನಂದ ಸುವರ್ಣರ ದತ್ತಿ ಕಾರ್ಯಕ್ರಮ
‘ಡಾ. ಶಿವರಾಮ ಕಾರಂತರ ವೈಚಾರಿಕ ದೃಷ್ಟಿಕೋನ’ ಈ ವಿಷಯದ ಮೇಲೆ ಪ್ರತಿಭಾವಂತ ಲೇಖಕಿ ವಿದ್ಯಾ ರಾಮಕೃಷ್ಣ ಉಪನ್ಯಾಸ ನೀಡಿದರು.
ಆರಂಭದಲ್ಲಿ; ಗೌರವ ಪ್ರಧಾನ ಕಾರ್ಯದರ್ಶಿ ಅತಿಥಿ ಗಣ್ಯರನ್ನು ಗೌಲವದಿಂದ ಬರಮಾಡಿಕೊಂಡರು.
ಸಂಘದ ಅಧ್ಯಕ್ಷರಾದ ರವೀಂದ್ರ ಎಂ. ಶೆಟ್ಟಿ ಸ್ವಾಗತಿಸಿದರು. ವಿಶ್ವಸ್ಥರಾದ ಭಾಸ್ಕರ ಸರಪಾಡಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಆರಂಭದಲ್ಲಿ ಇಪ್ಪತ್ತೈದು ಕಳಸ ಇಟ್ಟು, ಇಪ್ಪತೈದು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಅತಿಥಿಗಳಿಗೆ ತಾಮೃದ ಹರಿವಾಣದಲ್ಲಿ ಎಲೆ ಅಡಿಕೆ ಸಿಂಗಾರ ಹೂವಿಟ್ಟು ಗೌರವಿಸಲಾಯಿತು. ಅತಿಥಿಗಳ ಪರಿಚಯವನ್ನು, ರೂಪ ಭಟ್, ಪದ್ಮಾವತಿ ಬಿ. ಶೆಟ್ಟಿ, ವೀಣಾ ಸುವರ್ಣ, ರಾಜೀವಿ ಕೋಟ್ಯಾನ್, ರೋಶನಿ ಆಚಾರ್ಯ, ಹರೀಶ್ ಚೇವರ್, ರಶ್ಮಿ ಆಚಾರ್ಯ ಮತ್ತು ಲತಾ ಬಂಗೇರ ಮಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಬಳಗದ ಹಿತೈಷಿ ಗಣ್ಯರನ್ನು ಪುಷ್ಪಗುಚ್ಛ ನೀಡಿ ಗೌರವವಿಸಲಾಯಿತು. ಈ ಸಂದರ್ಭದಲ್ಲಿ ಚಿಣ್ಣರ ಬಿಂಬ ಕಾಂದಿವಲಿ ಶಿಭಿರದ ಚಿಣ್ಣರಿಂದ ನೃತ್ಯ ಪ್ರದರ್ಶಿಸಲಾಯಿತು ಮತ್ತು ಮಹಿಳಾ ವಿಭಾಗದವರು ಪ್ರಾರ್ಥನೆ ಮತ್ತು ಭಾವಗೀತೆ ಹಾಡಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಈ ಬೆಳ್ಳಿ ಹಬ್ಬ ಉದ್ಘಾಟನಾ ಕಾರ್ಯಕ್ರಮವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಸಂಚಾಲಕ ಕವಿ, ರಂಗಕರ್ಮಿ ಗೋಪಾಲ ತ್ರಾಸಿ ನಿರೂಪಣೆ ಗೈದರು. ಕೊನೆಯಲ್ಲಿ ಜೊತೆ ಕಾರ್ಯದರ್ಶಿ, ಶಿಕ್ಷಕರಾದ ಶಿವಯೋಗಿ ಸಣ್ಣಮನಿ ವಂದನಾರ್ಪಣೆಗೈದರು.
ವೇದಿಕೆಯಲ್ಲಿ ಅಧ್ಯಕ್ಷ ರವೀಂದ್ರ ಎಮ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಮ್. ಕೋಟ್ಯಾನ್, ಗೌ. ಕೋಶಾಧಿಕಾರಿ ರಾಜೀವಿ ಆರ್. ಕೋಟ್ಯಾನ್, ವಿಶ್ವಸ್ಥರು ಭಾಸ್ಕರ್ ಸರಪಾಡಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಭಾಸ್ಕರ್ ಶೆಟ್ಟಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಸಂಚಾಲಕ, ನಾಟಕಕಾರ, ಕವಿ ಗೋಪಾಲ ತ್ರಾಸಿ ಪಾಲ್ಗೊಂಡಿದ್ದರು,
++++++
ಸಂಘಟನೆಯಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಹೋಗುವ ಮನೋಧರ್ಮ ಇರಬೇಕು: ಮಾಜಿ ಸಂಸದ ಗೋಪಾಲ ಸಿ. ಶೆಟ್ಟಿ
ಸಭೆಯಲ್ಲಿ ಪಾಲ್ಗೊಂಡಿದ್ದ ಬಳಗದ ಗೌರವ ಅಧ್ಯಕ್ಷ, ಮಾಜಿ ಸಂಸದ ಗೋಪಾಲ ಸಿ. ಶೆಟ್ಟಿ ಕಾರ್ಯಕ್ರಮಕ್ಕೆ ಶುಭಾಶಯಗಳು ತಿಳಿಸುತ್ತಾ ಯಾವುದೇ ಸಂಘಟನೆಯಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಹೋಗುವ ಮನೋಧರ್ಮ ಇರಬೇಕು. ನಾನು ಸುಮಾರು ಐದು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಇದ್ದು ಅಂದಿನಿಂದ ಇಂದಿನ ತನಕವೂ ಕರ್ನಾಟಕ- ಮರಾಠಿ ಎರಡೂ ಕಡೆಯ ಜನರ ಪ್ರೀತಿಗೆ ಪಾತ್ರನಾಗಲು ಈ ಮನೋಧರ್ಮವೇ ಕಾರಣ. ಚಾರ್ ಕೋಪ್ ಕನ್ನಡ ಬಳಗದ ಕಾರ್ಯಚಟುವಟಿಕೆಗಳನ್ನು ಆರಂಭದ ದಿನಗಳಿಂದಲೂ ಗಮನಿಸುತ್ತ ಬಂದಿದ್ದೇನೆ. ಭಾಸ್ಕರ ಸರಪಾಡಿಯಂತಹ ಒಳ್ಳೇ ಸಮಾಜಸೇವಾ ಮನಸ್ಸಿನವರು ಇಲ್ಲಿ ಇದ್ದಾರೆ. ಸಂಘಕ್ಕೆ ಸಭಾಭವನದ ಅಗತ್ಯ ಇದೆ ಅಂಥ ಹಿಂದೆ ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಮತ್ತೊಮ್ಮೆ ಆಲೋಚಿಸಿ, ನನ್ನಿಂದಾದ ಸಹಾಯ ನಾನು ಮಾಡುತ್ತೇನೆ ಎಂದು ನುಡಿದರು.
——-