
ಅಂಧೇರಿ ಪೂರ್ವ ಕಾರ್ಗೋ ಸಮೀಪದ ಸಹಾರ್‌ಗಾಂವ್ ನ ಸುತಾರ್ ಪಾಕಡಿ ಶ್ರೀ ಸಾಯಿ ಹನುಮಾನ್ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಇದರ 36ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಮಂಡಲ ಪೂಜೆಯು ಡಿಸೆಂಬರ್ 15 ರ ರವಿವಾರ ಶ್ರೀ ರಾಮ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರದ್ಧೆ ಭಕ್ತಿಯೊಂದಿಗೆ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ನಿತ್ಯಪೂಜೆ, ಗಣಹೋಮ, ಸತ್ಯನಾರಾಯಣ ಮಹಾಪೂಜೆ ನಡೆದು ಅಸಲ್ಪ ಶ್ರೀ ಗೀತಾಂಬಿಕಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ನಂತರ, ಪಡಿಪೂಜೆ, ಪಲ್ಲಪೂಜೆ,ನಡೆದು, ಶ್ರೀರಾಮ ಗುರುಸ್ವಾಮಿಯವರಿಂದ ಮಹಾಪೂಜೆ, ಮಹಾ ಮಂಗಳಾರತಿ ನಡೆಯಿತು.
ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಮಹಾ ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ 25 ವರ್ಷದ ಶಬರಿಮಲೆ ಯಾತ್ರೆಯಲ್ಲಿರುವ ಸ್ವಾಮಿಗಳನ್ನು ಹಾಗೂ 18ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಳ್ಳಲಿರುವ ಸ್ವಾಮಿಗಳನ್ನು ಗುರುಸ್ವಾಮಿಯವರು ಸನ್ಮಾನಿಸಿದರು. ನಂತರ 36 ವರ್ಷದ ಶಬರಿಮಲೆ ಯಾತ್ರೆಗಾಗಿ ಶ್ರೀರಾಮ ಗುರುಸ್ವಾಮಿಯವರನ್ನು ಸ್ವಾಮಿಗಳು ಸೇರಿ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು. ಸನ್ಮಾನಿತ ಸ್ವಾಮಿಗಳು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಂಜೆ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ, ಸಾಂತಾಕ್ರೂಜ್ ಇವರಿಂದ ‘ಶ್ರೀರಾಮ ದರ್ಶನ -ಶಬರಿ ಮೋಕ್ಷ – ಜಟಾಯು ಮೋಕ್ಷ’ ತುಳು ಯಕ್ಷಗಾನ ಜರಗಿತು.
ರಮೇಶ್ ರೈ ಸ್ವಾಮಿ, ಅಜಿತ್ ಶೆಟ್ಟಿ ಸ್ವಾಮಿ, ಸತೀಷ್ ಸ್ವಾಮಿ, ಪ್ರಕಾಶ್ ಸ್ವಾಮಿ, ದಿವಾಕರ್ ಸ್ಟಾ ಮಿ, ಶೇಖರ್ ಸ್ವಾಮಿ, ಶ್ರೀಧರ ಸ್ವಾಮಿ, ಕೃಷ್ಣ ಸ್ವಾಮಿ, ರಾಜೇಶ್ ಸ್ವಾಮಿ, ಸುನೀಲ್ ಸ್ವಾಮಿ, ಹರೀಶ್ ಸ್ವಾಮಿ, ಪ್ರಕಾಶ್ ಸ್ವಾಮಿ ಮತ್ತಿತರ ಸದಸ್ಯರ ಸಹಕಾರದೊಂದಿಗೆ ಶ್ರೀರಾಮ ಗುರುಸ್ವಾಮಿಯವರ ನೇತೃತ್ವದಲ್ಲಿ 36 ನೆಯ ವರ್ಷದ ಮಂಡಲ ಪೂಜೆಯು ವಿಜೃಂಭಣೆಯಿಂದ ಜರುಗಿತು.