July 23, 2026
Mumbai News Kannada
ಮುಂಬಯಿ

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಮತ್ತು ಹರಿನಾರಾಯಣ ಅಸ್ರಣ್ಣರಿಗೆ ಗೌರವಾರ್ಪಣೆ







ಮುಂಬಯಿ ಜೂ5. ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕಾಗಿ ಆಗಮಿಸಿದ ಕಟೀಲು ಕ್ಷೇತ್ರದ ಅರ್ಚಕರಾದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಮತ್ತು ಹರಿನಾರಾಯಣ ಆಸ್ರಣ್ಣರನ್ನು ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಪದಾದಿಕಾರಿಗಳು ಮಲಾಡ್ ಆಹ್ವಾನಿಸಿ ವಿಶೇಷವಾಗಿ ಗೌರವಿಸಿದರು.

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡಿದ ಕಮಲಾದೇವಿ ಪ್ರಸಾದ್ ಆಸ್ರಣ್ಣ ರು ನೀವು ನೀಡಿದ ಎಲ್ಲಾ ಗೌರವ ಸನ್ಮಾನವು ಶ್ರೀ ದೇವಿಗೆ ಸಮರ್ಪಣೆಯಾಗಿದೆ, ಶ್ರೀದೇವಿಯು ನಿಮ್ಮೆಲ್ಲರನ್ನು ಅನುಗ್ರಹಿಸಲಿ ಹಾಗೂ ಇನ್ನೂ ಕೂಡ ಸಾಮಾಜಿಕ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವಂತಹ ಶಕ್ತಿ ನೀಡಲಿ ಎಂದು ಹಾರೈಸಿದರು.

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಆರಂಭದಿಂದಲೇ ಮಾರ್ಗದರ್ಶನವನ್ನು ನೀಡುತ್ತಿದ್ದ ಬರುತ್ತಿದ್ದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಮತ್ತು ಹರಿನಾರಾಯಣ ಆಸ್ರಣ್ಣರನ್ನು 16ನೇ ವರ್ಷದ
ಶ್ರೀ ವರಮಹಾಲಕ್ಷ್ಮೀ ಪೂಜೆ ಆಗಸ್ಟ್ 10 ರಂದು ನಡೆಯಲಿದ್ದು ಗೌರವದಿಂದ ಆಮಂತ್ರಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಮತ್ತು ಮೋಹಿನಿ ಜೆ ಶೆಟ್ಟಿ, ದಂಪತಿ ವಿಶೇಷವಾಗಿ ಶಾಲು ಫಲ ಪುಷ್ಪಗಳನ್ನು ನೀಡಿ ಗೌರವಿಸಿದರು.
ಸಮಿತಿಯ ಉಪಾಧ್ಯಕ್ಷ ಕುಮರೇಶ್ ಆಚಾರ್ಯ, ಕೋಶಾಧಿಕಾರಿ ಸುರೇಂದ್ರ ಆಚಾರ್ಯ, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ರಾವ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ.ಆಚಾರ್ಯ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ರತ್ನ ಡಿ. ಕುಲಾಲ್ ಯುವ ವಿಭಾಗದ ಉಪಕಾರ್ಯಾಧ್ಯಕ್ಷೆ ಪ್ರಣಿತ ವರುಣ್ ಶೆಟ್ಟಿ ಮತ್ತು ಪ್ರತೀಕ್ ಜೆ ಶೆಟ್ಟಿ, ಉಪಸ್ಥಿತರಿದ್ದರು
B. Dinesh Kulal
Mob.: 9821868674



Related posts

ಸಾಲಿಯಾನ್ ಮೂಲಸ್ಥಾನ ಸಭಾ (ಎರ್ಮಾಳು ಬಡಾ) ಮುಂಬೈ ಶಾಖೆಯ ವಾರ್ಷಿಕ ಮಹಾಸಭೆ

Mumbai News Desk

 ಶ್ರೀ ಕಟೀಲು ಯಕ್ಷಕಲ ವೇದಿಕೆ ಚಾರಿಟೇಬಲ್ ಟ್ರಸ್ಟ್ ಆರನೇ ವಾರ್ಷಿಕ ಯಕ್ಷ ಸಂಭ್ರಮ

Mumbai News Desk

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ    ಯುಗ್ ಸಂತೋಷ್ ಶೆಟ್ಟಿ  ಗೆ ಶೇ 82. 60 ಅಂಕ.

Mumbai News Desk

ರಾವಲ್ ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನ ದ ವಾರ್ಷಿಕ  ಮಹಾಪೂಜೆ ,  ಧಾರ್ಮಿಕ ಸಭೆ,

Mumbai News Desk

ಎಸ್ ಎಸ್ ಸಿ ಯಲ್ಲಿ ಅನನ್ಯಾ ಹರೀಶ್ ಪೂಜಾರಿ ಶೇ 97.80 ಅಂಕ

Mumbai News Desk