24.7 C
Karnataka
April 3, 2025
ಕ್ರೀಡೆ

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವ



ಮುಂಬಯಿ : ಬಿಲ್ಲವರ ಅಸೋಶಿಯೇಶನ್ ಇದರ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವವು ದಿನಾಂಕ 15 ಡಿಶಂಬರ್ 2024 ರವಿವಾರದಂದು ಪ್ರಭಾತ್ ಕಾಲೋನಿಯ ಮುನ್ಸಿಫಲ್ ಶಾಲಾ ಮೈದಾನದಲ್ಲಿ ನಡೆಯಿತು.ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವದ ಕಾರ್ಯಕ್ರಮವು ಬಿಲ್ಲವರ ಅಸೋಶಿಯೇಶನ್ ಇದರ ಶಿಕ್ಷಣ ಸಮಿತಿಯ ಸಲಹೆಗಾರ ಮಾರ್ಗದರ್ಶಕ ಶ್ರೀ ಬನ್ನಂಜೆ ರವೀಂದ್ರ ಅಮೀನ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಅವರು ಕ್ರೀಡಾ ಮಹೋತ್ಸವದ ನೇತೃತ್ವ ವಹಿಸಿದ ಮಾತನಾಡುತ್ತ ಸದೃಢವಾದ ದೇಹದಲ್ಲಿ ದೃಢ ಮನಸ್ಸು ಮತ್ತು ದೃಢತೆಯ ಪ್ರವೃತ್ತಿ ಹೊರ ಹೊಮ್ಮತ್ತದೆ. ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಕ್ರೀಡೆಯು ವಿದ್ಯಾರ್ಥಿಗಳ ಉತ್ತಮ ದೈಹಿಕ ಬೆಳವಣಿಗೆಯನ್ನು ಖಚಿತ ಪಡಿಸುತ್ತದೆ. ಪ್ರತಿ ಆಟದಲ್ಲಿ ಉತ್ಸಾಹದಿಂದ ಭಾಗವಹಿಸುವುದರಿಂದ ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ. ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಾ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕ ಶಾಲೆಯ ಹಿತೈಷಿಗಳಾದ ಶ್ರೀ ಸಿ. ಎ.ಪ್ರಕಾಶ ಶೆಟ್ಟಿ ಅವರು ಉಪಸ್ಥಿತಿದ್ದು ತೆಂಗಿನ ಕಾಯಿ ಒಡೆದು ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡುತ್ತಾ ಅವರು ಶಾಲಾ ವಾರ್ಷಿಕ ಕ್ರೀಡಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿರು
ವುದು ನನಗೆ ಸಂತೋಷವೆನಿಸುತ್ತದೆ.ರಾತ್ರಿ ಪ್ರೌಢ ಶಾಲೆಯಾದರೂ ಉತ್ತಮವಾದ ಕಾರ್ಯ- ಕಲಾಪ
ಗಳನ್ನು ಜರುಗಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶಾಲೆಯ ಮುಖ್ಯಾಧ್ಯಾಪಕ ಮತ್ತು ಶಿಕ್ಷಕರ ಕಾರ್ಯ ಮೆಚ್ಚುವಂತಹದ್ದು.ಪ್ರತಿವರ್ಷದಂತೆ ಈ ವರ್ಷದಲ್ಲಿಯೂ ಶೈಕ್ಷಣಿಕ ಪ್ರವಾಸಕೈಗೊಳ್ಳಲು ನನ್ನ ಸಹಕಾರ ಇದೆ ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು.

ಶಾಲೆಯ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ ಅವರು ವಾರ್ಷಿಕ ಕ್ರೀಡಾ ಸಂಭ್ರಮವನ್ನು ಕುರಿತು ಪ್ರಸ್ತಾವಿಕವಾಗಿ ಮಾತನಾಡುತ್ತಾ ನಮ್ಮ ಮಾತೃ ಸಂಸ್ಥೆಯಾದ ಬಿಲ್ಲವರ ಅಸೋಸಿಯೇಶನ್ ಇದರ ಪ್ರೋತ್ಸಾಹ ಪ್ರೇರಣೆಯಿಂದಲೇ,
ನಮ್ಮರಾತ್ರಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಶಾಲೆಯ ಪ್ರತಿಯೊಂದು ಕಾರ್ಯಕ್ರಮ ಚೆನ್ನಾಗಿ ಮೂಡಿ ಬರಲು ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವ ಮುಖ್ಯವಾದದ್ದು ಎಂದು ಹೇಳಿದರು.
ಕ್ರೀಡಾ ಮಹೋತ್ಸವದ ನೇತೃತ್ವ ವಹಿಸಿದ ಶಾಲಾ ಸಮಿತಿಯ ಸಲಹೆಗಾರ ಶ್ರೀ ಬನ್ನಂಜೆ ರವೀಂದ್ರ ಅಮೀನ್ ಮತ್ತು ಸಮಾಜ ಸೇವಕ ಶ್ರೀ ಸಿ ಎ. ಪ್ರಕಾಶ ಶೆಟ್ಟಿ ಶ್ರೀ ಜಗದೀಶ ಅಮೀನ ಶಾಲಾ ಸುಷ್ಮಾ ಪೂಜಾರಿ,ಸುಷ್ಮಾ ಮತ್ತು ಅವರಿಗೆ ಶಾಲೆಯ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ. ಐ.ಬಡಿಗೇರರು ಪುಷ್ಪಗುಚ್ಚ ನೀಡಿ ಸತ್ಕರಿಸಿದರು.
ಶಾಲೆಯ ಕ್ರೀಡಾ ಮಹೋತ್ಸವಕ್ಕೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ವಹಿಸಿಕೊಂಡ ಹಳೆ
ವಿದ್ಯಾರ್ಥಿಗಳಾದ ಸುದರ್ಶನ ಗೌಡ, ವಾಸು ಗೌಡ, ಮತ್ತು ರಾಜೇಶ ಗೌಡ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿ ಸಹಕರಿಸಿದ ಹಳೆ ವಿದ್ಯಾರ್ಥಿಯಾದ ಶ್ರೀ ರಾಜೇಶ ಪೂಜಾರಿ ಅವರಿಗೆ ಪುಷ್ಪ ಗುಚ್ಚ ನೀಡಿ ಸತ್ಕರಿಸಲಾಯಿತು.

ಮಸೂಮ ಸಂಸ್ಥೆಯ ವತಿಯಿಂದ ಅಂತರ್ ರಾತ್ರಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾ ಮಹೋತ್ಸವದಲ್ಲಿ 84 ರಾತ್ರಿ ಶಾಲೆಯ ಸ್ಪರ್ಧಾರ್ಥಿಗಳು ಭಾಗ ವಹಿಸಿದ್ದರು.ಈ ಕ್ರೀಡಾ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಡಾಜ್ ಬಾಲ್ ಆಟದಲ್ಲಿ ಭಾಗ ವಹಿಸಿದ್ದರು. ಮೊದಲ ಸುತ್ತಿನ ಓಟದಲ್ಲಿ ವಿದ್ಯಾರ್ಥಿ ಸೈಪುದ್ಧಿನ್ ಇಂಗಳಗೇರಿ ಅವರು ದ್ವಿತೀಯ ಮತ್ತು ಅಂತಿಮ ಆಟದ ಮಹಿಳಾ ವಿಭಾಗದ ಓಟದಲ್ಲಿ ವಿದ್ಯಾರ್ಥಿನಿ ಸೋನು ಚಂದ್ರು ಚವಾಣರು ದ್ವಿತೀಯ ಸ್ಥಾನ ಪಡೆದು ಶಾಲೆಗೆ ಮತ್ತು ಮಾತೃಸಂಸ್ಥೆಗೆ ಕೀರ್ತಿ ತಂದಿದ್ದಾಳೆ.ಈ ವಿದ್ಯಾರ್ಥಿಬ್ಬರಿಗೂ ಶಾಲೆಯ ವಾರ್ಷಿಕ ಕ್ರೀಡಾ ಮಹೋತ್ಸವದಲ್ಲಿ ಪದಾಧಿಕಾರಿಗಳು ಸತ್ಕರಿಸಿ ಅಭಿನಂದಿಸಿದರು. ಅದರಂತೆ ಭಾಗ ವಹಿಸಿದ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕ್ರೀಡಾ ಮಹೋತ್ಸವದ ಸ್ವಾಗತಗೈದು ಮಾತನಾಡಿದ ಶಿಕ್ಷಕ ಶ್ರೀ ಸಿದ್ಧರಾಮ ದಸಮಾನೆ ಅವರು ಕ್ರೀಡಾ ಆಟೋಟ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ಓಟ್, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ್, ಕೋಕೋ, ಕಬಡ್ಡಿ, ವಾಲಿಬಾಲ್, ಟೆನಿಸ್, ಮುಂತಾದ ಆಟಗಳನ್ನು ನಡೆಸಲು ಆಯೋಜನೆ ಮಾಡಲಾಗುತ್ತದೆ. ಇಂದು ನಡೆದ ಪಂದ್ಯಾವಳಿಯ ಎಲ್ಲಾ ಆಟಗಳಲ್ಲಿ ವಿಜಯಶಾಲಿಗಳಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಬರುವ 11ಜನೇವರಿ 2025 ರಂದು ನಡೆಯಲಿರುವ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರದಾನ ಮಾಡಿ ಸತ್ಕರಿಸಲಾಗುವುದು. ಎಂದು ವಿದ್ಯಾರ್ಥಿಗಳಿಗೆ ಆಟದ ಮಹತ್ವದ ಕುರಿತು ಹೇಳಿದರು.

ಶಾಲಾ ಕ್ರೀಡಾ ಕೂಟಕ್ಕೆ ಯಶಸ್ವಿಯಾಗಿ ನೆರವೇರಲು ಶಿಕ್ಷಕರಾದ ಸಿದ್ಧರಾಮ ದಶಮಾನೆ, ಶಿವಾನಂದ ಪಾಟೀಲ, ಶಿಕ್ಷಕಿಯರಾದ ಹೇಮಾ ಗೌಡ, ವಿಮಲಾ ಪೂಜಾರಿ ಮತ್ತು ಶಿಕ್ಷಕೇತರಾದ ನಮಿತಾ ಸುವರ್ಣ, ಲಕ್ಷ್ಮಣ ಪೂಜಾರಿ ಮತ್ತು ಹಳೆ ವಿದ್ಯಾರ್ಥಿಗಳು ಸಹಕರಿಸಿದರು.ಶಿಕ್ಷಕರಾದ ದಶಮಾನೆ ಅವರು ಕಾರ್ಯಕ್ರಮದ ನಿರೂಪಣೆ ಮತ್ತು ಶಿಕ್ಷಕಿ ಹೇಮಾ ಗೌಡ ಅವರು ಧನ್ಯವಾದಗೈದರು.

Related posts

ನೇಪಾಳದಲ್ಲಿ ಜರಗಿದ ಏಷಿಯನ್ ಥಾಯ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದ ಜಾನ್ವಿ ಮನೋಜ್ ಕೋಟ್ಯಾನ್

Mumbai News Desk

ಎನ್ ಕೆ ಇ ಎಸ್ ಪ್ರೊ ಕಬಡ್ಡಿ ಸೀಸನ್ 1 – ಬಹುಮಾನ ವಿತರಣೆ

Chandrahas

ತುಳು ಸಂಘ ಬೊರಿವಲಿ, ಯುವ ವಿಭಾಗದಿಂದ ಗಣ್ಯರ ಉಪಸ್ಥಿತಿಯಲ್ಲಿ ಯಶಸ್ವೀ ಮ್ಯಾರಥಾನ್

Mumbai News Desk

ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್   ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆರಂಭ.

Mumbai News Desk

ಡೊಂಬಿವಲಿ ಕರ್ನಾಟಕ ಸಂಘ:ಕ್ರೀಡಾ ವಿಭಾಗದ ಒಳಾಂಗಣ ಕ್ರೀಡಾಕೂಟಕ್ಕೆ ಅದ್ದೂರಿಯ ಚಾಲನೆ     

Mumbai News Desk

ಸುರತ್ಕಲ್ :  ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, 

Mumbai News Desk